ಕೊರೊನಾ ವೈರಸ್ ಶಂಕೆ; ಮಂಡ್ಯದಲ್ಲಿ 8 ಮಂದಿ ಐಸೊಲೇಷನ್‍ಗೆ ದಾಖಲು
ಮಂಡ್ಯ

ಕೊರೊನಾ ವೈರಸ್ ಶಂಕೆ; ಮಂಡ್ಯದಲ್ಲಿ 8 ಮಂದಿ ಐಸೊಲೇಷನ್‍ಗೆ ದಾಖಲು

April 1, 2020

ಓರ್ವ ಕಾರ್ಮಿಕನಿಗೆ ನೆಗೆಟಿವ್ ರಿಪೆÇೀರ್ಟ್; ಡಿಸಿ ಸ್ಪಷ್ಟನೆ
ಮಂಡ್ಯ, ಮಾ.31(ನಾಗಯ್ಯ)- ಭಾನುವಾರ ಕೊರೊನಾ ವೈರಸ್ ಸೋಂಕಿನ ಅನುಮಾನದ ಮೇಲೆ 8 ಮಂದಿಯನ್ನು ಮಿಮ್ಸ್ ನ ಕೊರೊನಾ ಐಸೋಲೇಷನ್‍ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಮ್ಸ್ ನ ಐಸೋಲೇಷನ್ ನಲ್ಲಿಟ್ಟಿರುವ 8 ಮಂದಿಯೂ ಸಹ ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.

ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯಲ್ಲಿ ಮಂಡ್ಯ ಜಿಲ್ಲೆಯ 35 ಮಂದಿ ಕೆಲಸ ಮಾಡುತ್ತಿದ್ದರು,ಇವರಲ್ಲಿ 8 ಜನ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದಾರೆ. 8 ಮಂದಿಯನ್ನು ಐಸೊಲೇಷನ್‍ನಲ್ಲಿ ಇರಿಸಲಾಗಿದ್ದು, 14 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದ 27 ಜನರು ಮೈಸೂರು ಸೇರಿದಂತೆ ಇತರೆಡೆ ನಿವಾಸಿಗಳಾಗಿದ್ದಾರೆ, ನಿಯಮಾನು ಸಾರ ಮೈಸೂರು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.

ಗ್ರಾಮೀಣ ಭಾಗದ ಜನರು ಕೊರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಬೇಕು, ಸಾರ್ವಜನಿಕವಾಗಿ ದಾನ್ಯ ಸೇರಿದಂತೆ ತರಕಾರಿ ಸರಬರಾಜು ಮಾಡುವುದಕ್ಕಾಗಿಯೇ ನಗರದಾದ್ಯಂತ 5 ಮಳಿಗೆಗಳನ್ನು ತೆರೆಯಲಾಗಿದೆ. ಆಪ್ ಕಾಮ್ಸ್ ಮೂಲಕ ರೈತರು ಬೆಳೆದ ತರಕಾರಿ ಹಣ್ಣುಗಳನ್ನು ಖರೀದಿ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದ್ದು ಸರ್.ಎಂ.ವಿ. ಕ್ರೀಡಾಂಗಣದಲ್ಲಿ ನೂತನವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ರೈತರು ತರಕಾರಿಯನ್ನು ರಾಜ್ಯಾದ್ಯಂತ ಮುಕ್ತವಾಗಿ ಸರಬ ರಾಜು ಮಾಡಬಹುದು, ರೈತರು ಆಹಾರ ಸಾಗಿಸಲು ಮುಕ್ತ ಅವಕಾಶ ನೀಡಲಾಗಿದೆ,ಹಳ್ಳಿಗಳಲ್ಲಿ ನೀವೇ ನೇರವಾಗಿ ಗಾಡಿಗಳ ಮುಖಾಂತರ ಮಾರಾಟ ಮಾಡಬಹುದು ,ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು. ಬೆಳೆದಿರುವ ಪದಾರ್ಥಗಳನ್ನು ಅನಗತ್ಯವಾಗಿ ನಾಶ ಮಾಡಬೇಡಿ. ಅವುಗಳನ್ನು ಸ್ಥಳೀಯ ಹಾಸ್ಟೆಲ್ ಹಾಗೂ ಜನಸಾಮಾನ್ಯರಿಗೆ ನೀಡಿ. ರೈತರು ತರಕಾರಿ ಯನ್ನು ರಾಜ್ಯಾದ್ಯಂತ ಮುಕ್ತವಾಗಿ ಸರಬರಾಜು ಮಾಡುವ ಕುರಿತಂತೆಯೂ ಪೆÇಲೀಸ್ ಇಲಾಖೆಯೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಅಗತ್ಯ ದಿನಬಳಕೆ ವಸ್ತುಗಳನ್ನು ಮುಕ್ತವಾಗಿ ಸಾಗಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ವಿದೇಶದಿಂದ ಬಂದಂತಹವರನ್ನು ಹೋಂ ಕೋರಂಟೈನ್ ನಲ್ಲಿಡಲಾಗಿದೆ, ಈವರೆಗೂ ಸುಮಾರು 142 ಮಂದಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಂಡು ಮನೆಯಿಂದ ಹೊರಗೆ ಬಾರದಂತೆ ಇರಿಸಲಾಗಿದೆ ಎಂದು ಅವರು ಹೇಳಿದರು.

ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿ ಜಿಲ್ಲೆಗೆ ವಾಪಸ್ ಬಂದ 484 ಜನರನ್ನು ಗುರುತಿಸಲಾಗಿದೆ,ಅವರನ್ನು ಹಾಸ್ಟೆಲ್ ಗಳಲ್ಲಿ ಇರಿಸಲಾಗಿದೆ, ಇವರಿಗೆ ಮೂಲ ಸೌಕರ್ಯಗಳನ್ನು ದಿನನಿತ್ಯದ ಆಹಾರವನ್ನು ಜಿಲ್ಲಾಡಳಿತ ನೀಡಿದೆ. ಜಿಲ್ಲಾದ್ಯಂತ 9 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮೂಲ ಸೌಕರ್ಯಕ್ಕೆ ಸಮಸ್ಯೆ ಆಗದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ ಎಂದರು.

Translate »