ಪೆಟ್ರೋಲ್ ಬಂಕ್ ಬಂದ್; ವಾಹನ ಸವಾರರ ಪರದಾಟ
ಮಂಡ್ಯ

ಪೆಟ್ರೋಲ್ ಬಂಕ್ ಬಂದ್; ವಾಹನ ಸವಾರರ ಪರದಾಟ

April 1, 2020

= ಅನಾವಶ್ಯಕವಾಗಿ ಸಂಚರಿಸುತ್ತಿದ್ದ 300 ಕ್ಕೂ ಹೆಚ್ಚು ವಾಹನಗಳ ಜಪ್ತಿ. = 7 ಕ್ರಿಮಿನಲ್ ಕೇಸ್,
24 ಮಂದಿ ವಶಕ್ಕೆ, 96500 ದಂಡ ವಸೂಲಿ: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪರಶುರಾಮ್
ಮಂಡ್ಯ, ಮಾ.31(ನಾಗಯ್ಯ)- ಕೊರೊನಾ ವೈರಸ್ ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಖಾಸಗಿ ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ಬಂದ್ ಮಾಡಿದ್ದರಿಂದ ಸವಾರರು ಪರದಾಡುತ್ತ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ತೆರಳುತ್ತಿದ್ದ ದೃಶ್ಯ ನಗರದಲ್ಲಿಂದು ಕಂಡು ಬಂತು.

ದ್ವಿಚಕ್ರವಾಹನ ಸವಾರರು ಆಸ್ಪತ್ರೆ, ಸಾವು ತಿಥಿ, ಅಗತ್ಯ ವಸ್ತುಗಳ ಖರೀದಿ ಇತ್ಯಾದಿ ಕಾರಣ ನೀಡಿ ಅನಗತ್ಯವಾಗಿ ತಿರುಗಾಡು ತ್ತಿದ್ದವರಿಗೆ ಕಡಿವಾಣ ಹಾಕಲು ನಿನ್ನೆಯಿಂದ ಖಾಸಗಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಮಾರಾಟ ನಿರ್ಬಂಧ ಮಾಡಲಾಗಿತ್ತು.

ಇಂದು ವಿಷಯ ತಿಳಿಯದ ಅನೇಕ ದ್ವಿಚಕ್ರ ವಾಹನ ಸವಾರರು ಪೆಟ್ರೋಲ್ ಬಂಕ್‍ಗೆ ಬಂದರೂ ಸಹ ಬಂಕ್ ಸಿಬ್ಬಂದಿ ಅವರಿಗೆ ಪೆಟ್ರೋಲ್ ನೀಡದೆ ಕಳುಹಿಸು ತ್ತಿದ್ದುದು ಕಂಡ ಬಂತು. ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರಿ ವಾಹನಗಳು ಗುರುತಿನ ಚೀಟಿ, ಹೊಂದಿದ್ದವರಿಗೆ ಅಲ್ಲದೆ ಅಧಿಕೃತ ವಾಗಿ ಪೆÇಲೀಸ್ ಅನುಮತಿ ಪತ್ರ ಇರುವವರಿಗೆ ಮಾತ್ರ ಪರಿಶೀಲಿಸಿ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಸಿದರು.

ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಿ ರುವ ಬಗ್ಗೆ ದಾಖಲು ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವೆಡೆ ಯಾವುದೇ ದಾಖಲು ಮಾಡಿ ಕೊಳ್ಳದೆ ಪೆಟ್ರೋಲ್ ಹಾಕಿ ಕಳುಹಿಸಲಾಗು ತ್ತಿತ್ತು. ಕೆಲವು ದ್ವಿಚಕ್ರವಾಹನ ಸವಾರರು ಪೆಟ್ರೋಲ್ ಸಿಗದ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡು ಬಂಕ್ ಸಿಬ್ಬಂದಿ ಯೊಂದಿಗೆ ವಾಗ್ವಾದಕ್ಕಿಳಿದು ಪೆÇಲೀಸರ ಮೂಲಕ ಅಂತಹವರನ್ನು ಹೊರಕಳುಹಿಸು ತ್ತಿದ್ದುದು ಕೂಡ ಗೋಚರಿಸಿತು. ಮುಂಜಾ ಗೃತಾ ಕ್ರಮವಾಗಿ ಎಲ್ಲಾ ಪೆಟ್ರೋಲ್ ಬಂಕ್‍ಗಳ ಬಳಿಯೂ ಪೆÇಲೀಸ್ ಸಿಬ್ಬಂದಿ ಯನ್ನು ನಿಯೋಜಿಸಲಾಗಿತ್ತು.

ವಾಹನಗಳ ಜಪ್ತಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದರೂ ಇದನ್ನು ಮೀರಿ ರಸ್ತೆಗಿಳಿದ ಸುಮಾರು 300 ಕ್ಕೂ ಹೆಚ್ಚು ಕಾರ್, ಬೈಕ್ ಸೇರಿದಂತೆ ಇತರೆ ವಾಹನ ಗಳನ್ನು ಪೆÇಲೀಸರು ವಶಕ್ಕೆ ಪಡೆದುಕೊಂ ಡಿದ್ದು ಅಡ್ಡಾದಿಡ್ಡಿ ಓಡಾಟ ನಡೆಸುವವ ರಿಗೆ ಬಿಸಿಮುಟ್ಟಿಸಿದ್ದಾರೆ. ಜಿಲ್ಲಾದ್ಯಂತ ಇಂದು ಲಾಕ್‍ಡೌನ್ ಆದೇಶ ಉಲ್ಲಂಘಿಸಿದ 7 ಮಂದಿಯ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದ್ದು, 24 ಮಂದಿಯನ್ನು ಬಂಧಿಸಲಾಗಿದೆ, ವಾಹನ ಸವಾರರಿಂದ 96500ರೂ. ದಂಡ ವಸೂಲಿ ಮಾಡಲಾ ಗಿದೆ ಎಂದು ಜಿಲ್ಲಾಪೆÇಲೀಸ್ ವರಿಷ್ಠಾಧಿ ಕಾರಿ ಪರಶುರಾಮ್ ತಿಳಿಸಿದರು.

ಕಾರ್, ಬೈಕ್ ಸೇರಿದಂತೆ ಇನ್ನಿತರೆ ವಾಹನ ಗಳು ಸರ್ಕಾರದ ಆದೇಶ ಮೀರಿ ಸ್ವಚ್ಚಂದ ವಾಗಿ ಓಡಾಟ ನಡೆಸುತ್ತಿದ್ದವು, ಇಂತಹ ವಾಹನಗಳನ್ನು ವಶಕ್ಕೆ ತೆಗೆದು ಕೊಂಡು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕೈ ಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Translate »