ನಿರ್ಗತಿಕರಿಗೆ ಮತ್ತಷ್ಟು ಸಾಂತ್ವನ ಕೇಂದ್ರ ತೆರೆಯಿರಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ನಾಗೇಂದ್ರ ಸೂಚನೆ
ಮೈಸೂರು

ನಿರ್ಗತಿಕರಿಗೆ ಮತ್ತಷ್ಟು ಸಾಂತ್ವನ ಕೇಂದ್ರ ತೆರೆಯಿರಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ನಾಗೇಂದ್ರ ಸೂಚನೆ

April 1, 2020

ಮೈಸೂರು, ಮಾ. 31(ಆರ್‍ಕೆ)- ಮೈಸೂರು ನಗರದಲ್ಲಿ ನಿರ್ಗತಿಕರಿರುವೆಡೆ ಮತ್ತಷ್ಟು ಸಾಂತ್ವನ ಕೇಂದ್ರಗಳನ್ನು ತೆರೆದು ಊಟ-ವಸತಿ ಸೌಲಭ್ಯ ಒದಗಿಸಿ ಎಂದು ಚಾಮ ರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳಿಗೆ ಇಂದು ಸೂಚನೆ ನೀಡಿದರು.

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ತಲೆದೋರಿರುವ ಕಷ್ಟ ಪರಿಸ್ಥಿತಿ ನಿಭಾಯಿಸುವ ಸಂಬಂಧ ಮೈಸೂರು ಮಹಾ ನಗರಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂ ದಿಗೆ ತುರ್ತು ಸಭೆ ನಡೆಸಿದ ಶಾಸಕರು, ಬಿಗಡಾಯಿಸುತ್ತಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಸೋಂಕು ಹರಡು ವುದನ್ನು ತಪ್ಪಿಸಬೇಕು ಹಾಗೂ ಲಾಕ್ ಡೌನ್ ಆಗಿರುವುದರಿಂದ ಯಾರೂ ಹಸಿವು, ದಾಹದಿಂದ ಬಳಲದಂತೆ ನೋಡಿಕೊಳ್ಳ ಬೇಕೆಂದು ನಿರ್ದೇಶನ ನೀಡಿದರು.

ಈಗಿರುವ ನಂಜರಾಜ ಬಹದ್ದೂರ್ ಛತ್ರ, ಸ್ಪೋಟ್ರ್ಸ್ ಹಾಸ್ಟೆಲ್ ಹಾಗೂ ವಿವಿಧ 17 ಕಡೆಯ ಸಾಂತ್ವನ ಕೇಂದ್ರಗಳ ಜೊತೆಗೆ ವಲಸಿಗರು, ಕೂಲಿ ಕಾರ್ಮಿಕರು, ನಿರ್ಗತಿ ಕರು ಹೆಚ್ಚಾಗಿರುವ ಕುಕ್ಕರಹಳ್ಳಿ, ಕುದುರೆ ಮಾಳ, ಮಹದೇಶ್ವರ ಬಡಾವಣೆ, ಜಯ ದೇವನಗರ, ಹೆಬ್ಬಾಳು, ಮೇಟಗಳ್ಳಿ, ಬಿಎಂಶ್ರಿ ನಗರ, ಅಂಬೇಡ್ಕರ್ ಜ್ಞಾನಲೋಕ, ಕೈಲಾಸ ಪುರಂ, ಮೇದರ ಬ್ಲಾಕ್ ಸೇರಿದಂತೆ ಇನ್ನೂ ಹಲವು ಕಡೆ ಸಾಂತ್ವನ ಕೇಂದ್ರಗಳನ್ನು ತೆರೆಯಿರಿ ಎಂದು ಅವರು ತಿಳಿಸಿದರು.

ಕೇಂದ್ರಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಊಟ-ತಿಂಡಿ, ಆರೋಗ್ಯ ತಪಾ ಸಣೆಯಂತಹ ಮೂಲ ಸೌಲಭ್ಯವನ್ನು ನಿರ್ಗತಿಕರಿಗೆ ಪೂರೈಸಬೇಕು ಹಾಗೂ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ಸೋಂಕು ಹರಡ ದಂತೆ ಎಚ್ಚರ ವಹಿಸಿ ಎಂದು ಶಾಸಕರು ಸಲಹೆ ನೀಡಿದರು.

ಹಣಕ್ಕೆ ತೊಂದರೆ ಇಲ್ಲ: ಈಗಾಗಲೇ ಜಿಲ್ಲಾಧಿಕಾರಿಗಳು ಈ ಉದ್ದೇಶಕ್ಕೆ ಅನುದಾನ ಕೊಡುತ್ತಿದ್ದಾರೆ. ಕೊರತೆ ಉಂಟಾದರೆ ಸಂಸದರು, ಶಾಸಕರ ಸ್ಥಳೀಯ ಅನುದಾನ ಬಳಸಿಕೊಳ್ಳಬಹುದು. ಸಂಘ-ಸಂಸ್ಥೆಗಳು ಹಾಗೂ ಸ್ವಯಂ ಸೇವಕರೂ ಸಹ ಊಟ- ತಿಂಡಿ ಹಾಗೂ ದಿನಸಿ ಪದಾರ್ಥ ಕೊಡು ತ್ತಿದ್ದಾರೆ. ಅಗತ್ಯ ಬಿದ್ದರೆ ಮತ್ತಷ್ಟು ಅನು ದಾನ ಕೊಡಲಾಗುವುದು. ಅದನ್ನು ಬಳಸಿ ಕೊಂಡು ಅಗತ್ಯವಿರುವೆಡೆ ಸೌಲಭ್ಯ ತಲು ಪಿಸಿ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ನಾಗೇಂದ್ರ ಅವರು ಅಧಿಕಾರಿ ಗಳಿಗೆ ತಾಕೀತು ಮಾಡಿದರು.

ಔಷಧಿ ಸಿಂಪಡಿಸಿ: ಪಾಲಿಕೆಯ ಜೆಟ್ಟಿಂಗ್ ಮೆಷಿನ್, ಅಗ್ನಿಶಾಮಕ ದಳದ ದೊಡ್ಡ ಹಾಗೂ ಸಣ್ಣ ವಾಹನಗಳನ್ನು ತರಿಸಿಕೊಂಡು ಮೈಸೂರು ನಗರದಾದ್ಯಂತ ಎಲ್ಲಾ ಪ್ರಮುಖ ರಸ್ತೆ ಹಾಗೂ ಬಡಾವಣೆಗಳ ಚಿಕ್ಕ ಚಿಕ್ಕ ರಸ್ತೆ, ಬಯಲು, ಮೋರಿಗಳಿಗೆ ಸಾಂಕ್ರಾಮಿಕ ರೋಗದ ವೈರಾಣು ಹರಡದಂತೆ ಔಷಧಿ ಸಿಂಪಡಿಸಿ ಎಂದು ಪಾಲಿಕೆ ವೈದ್ಯಾಧಿಕಾರಿ ಗಳಿಗೆ ಅವರು ಸೂಚನೆ ನೀಡಿದರು.

Translate »