ಫೆ. 10ರಂದು ವೀರಶೈವ ಮಹಾಸಭಾ ಚುನಾವಣೆ
ಮಂಡ್ಯ

ಫೆ. 10ರಂದು ವೀರಶೈವ ಮಹಾಸಭಾ ಚುನಾವಣೆ

January 24, 2019

ಕೆ.ಆರ್.ಪೇಟೆ: ತಾಲೂಕು ವೀರಶೈವ ಮಹಾಸಭಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ.10ರಂದು ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಸಲು ಜ.29 ಮಧ್ಯಾಹ್ನ 3ಗಂಟೆವರೆಗೆ ಕೊನೆಯ ದಿನವಾಗಿರುತ್ತದೆ. ನಾಮಪತ್ರ ವಾಪಸ್ ಪಡೆಯಲು ಫೆ.2ರಂದು ಮಧ್ಯಾಹ್ನ 3ಗಂಟೆಯವರೆಗೆ ಅವಕಾಶವಿರುತ್ತದೆ. ಫೆ.10ರಂದು ಬೆಳಿಗ್ಗೆ 8ರಿಂದ 4ಗಂಟೆಯವರೆಗೆ ನಡೆಯಲಿದೆ ನಂತರ ಚುನಾವಣೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾ ಗುವುದು. ಪಟ್ಟಣದ ಹಳೆ ಕಿಕ್ಕೇರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ರೈಸ್ ಮಿಲ್ ಕಟ್ಟಡದಲ್ಲಿರುವ ತಾಲೂಕು ವೀರಶೈವ ಮಹಾಸಭಾ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ಹಾಗೂ ನಾಮಪತ್ರ ಪರಿಶೀಲನೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ವಕೀಲ ಪುರ ಮಂಜುನಾಥ್ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ: 9448588119 ಸಂಪರ್ಕಿಸಬಹುದು.

Translate »