ಹಳ್ಳಕ್ಕೆ ಉರುಳಿದ ಕಾರು: ಅದರಲ್ಲಿದ್ದವರು ಅಪಾಯದಿಂದ ಪಾರು
ಮಂಡ್ಯ

ಹಳ್ಳಕ್ಕೆ ಉರುಳಿದ ಕಾರು: ಅದರಲ್ಲಿದ್ದವರು ಅಪಾಯದಿಂದ ಪಾರು

January 24, 2019

ಮಂಡ್ಯ: ಇಳಿಜಾರು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಹುಂಡೈ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಹಳ್ಳಕ್ಕೆ ಬಿದ್ದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ನಡೆದಿದೆ. ಕಾರು ಮಗುಚಿ ಬಿದ್ದಿದ್ದರು ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇರಳ ನೋಂದಣಿ ಹೊಂದಿರುವ ಈ ಹುಂಡೈ ಕಾರು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿಯಾದ ಕಾರು ಸಿನಿಮೀಯಾ ರೀತಿಯಲ್ಲಿ ಸುಮಾರು ನಾಲ್ಕು ಪಲ್ಟಿ ಆಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Translate »