Tag: Coronavirus scare

ವಸ್ತು ಪ್ರದರ್ಶನ ತರಕಾರಿ ಮಾರುಕಟ್ಟೆಯಲ್ಲಿ `ಡಿಸ್ ಇನ್ಫೆಕ್ಷನ್ ಟನಲ್’
ಮೈಸೂರು

ವಸ್ತು ಪ್ರದರ್ಶನ ತರಕಾರಿ ಮಾರುಕಟ್ಟೆಯಲ್ಲಿ `ಡಿಸ್ ಇನ್ಫೆಕ್ಷನ್ ಟನಲ್’

April 5, 2020

ಮೈಸೂರು,ಏ.4(ಎಂಟಿವೈ)- ದಸರಾ ವಸ್ತು ಪ್ರದರ್ಶನ ಮೈದಾನದ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಬರುವ ರೈತರು ಮತ್ತು ಖರೀದಿದಾರರ ಆರೋಗ್ಯ ರಕ್ಷಣೆ ಗಾಗಿ ನಿರ್ಮಿಸಿರುವ `ಡಿಸ್ ಇನ್ಫೆಕ್ಷನ್ ಟನಲ್’(ವೈರಾಣು ನಾಶಕ ಸುರಂಗ) ಸೇವೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಶನಿವಾರ ಚಾಲನೆ ನೀಡಿದರು. ವಸ್ತು ಪ್ರದರ್ಶನ ಮೈದಾನದ ಮಾರು ಕಟ್ಟೆಯಲ್ಲಿ ತಾಜಾ ಹಣ್ಣು, ತರಕಾರಿ ಸಿಗು ವುದರಿಂದ ಜನ ಮುಗಿಬೀಳುತ್ತಿದ್ದಾರೆ. ಇಲ್ಲಿಗೆ ಬರುವ ರೈತರು, ಗ್ರಾಹಕರನ್ನು ಸ್ಯಾನಿ ಟೈಸೇಷನ್‍ಗೆ ಒಳಪಡಿಸಲು 2.5 ಮೀ. ಉದ್ದ, 4 ಅಡಿ ಅಗಲ, 7…

ಕರ್ನಾಟಕದಲ್ಲಿ ಜುಬಿಲಂಟ್ ಲೈಫ್ ಸೈನ್ಸಸ್‍ನಿಂದ ಆರೋಗ್ಯ, ಸುರಕ್ಷತಾ ಸಾಮಗ್ರಿಗಳ ವಿತರಣೆ
ಮೈಸೂರು

ಕರ್ನಾಟಕದಲ್ಲಿ ಜುಬಿಲಂಟ್ ಲೈಫ್ ಸೈನ್ಸಸ್‍ನಿಂದ ಆರೋಗ್ಯ, ಸುರಕ್ಷತಾ ಸಾಮಗ್ರಿಗಳ ವಿತರಣೆ

April 5, 2020

ಮೈಸೂರು,ಏ.4-ಕೋವಿಡ್-19 ಬಿಕ್ಕಟ್ಟು ಪರಿಹಾರಕ್ಕೆ ಕರ್ನಾ ಟಕ ಸರ್ಕಾರ ಕೈಗೊಂಡಿರುವ ಆರೋಗ್ಯ ಮತ್ತು ಸುರಕ್ಷತಾ ಸೇವೆಗಳಿಗೆ ಸಂಪೂರ್ಣ ಬೆಂಬಲ ನೀಡು ವುದಾಗಿ ಸಮಗ್ರ ಜಾಗತಿಕ ಫಾರ್ಮಾಸ್ಯೂಟಿಕಲ್ ಮತ್ತು ಜೀವ ವಿಜ್ಞಾನಗಳ ಕಂಪನಿಯಾಗಿರುವ ಜುಬಿಲಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಪ್ರಕಟಿಸಿದೆ. ನಮ್ಮ ಸಮುದಾಯ, ನೌಕರರ ಆರೋಗ್ಯ ಮತ್ತು ಸುರಕ್ಷತೆಗೆ ಜುಬಿಲಂಟ್ ಲೈಫ್ ಸೈನ್ಸಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಎಲ್ಲರೂ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ನಿರಂತರವಾಗಿ ಖಾತರಿಪಡಿಸಿಕೊಳ್ಳುತ್ತಿದೆ. ಇದಲ್ಲದೇ, ಸರ್ಕಾರ ನೀಡಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸು ತ್ತಿದ್ದಾರೆಯೇ ಎಂಬುದನ್ನು…

ಕೊರೊನಾ ಕುರಿತು ಸ್ವಯಂ ಅರಿವು ಅಗತ್ಯ: ತಹಸೀಲ್ದಾರ್ ಡಿ.ನಾಗೇಶ್
ಮೈಸೂರು ಗ್ರಾಮಾಂತರ

ಕೊರೊನಾ ಕುರಿತು ಸ್ವಯಂ ಅರಿವು ಅಗತ್ಯ: ತಹಸೀಲ್ದಾರ್ ಡಿ.ನಾಗೇಶ್

April 5, 2020

ತಿ.ನರಸೀಪುರ, ಏ.4(ಎಸ್‍ಕೆ)-ಕೊರೊನಾ ಸೋಂಕು ಕುರಿತು ಸ್ವಯಂ ಅರಿವಿನೊಂದಿಗೆ ಸಾರ್ವಜನಿಕರು ತಾಲೂಕು ಆಡಳಿತದೊಂದಿಗೆ ಸಹಕರಿಸ ಬೇಕು ಎಂದು ತಹಸೀಲ್ದಾರ್ ಡಿ.ನಾಗೇಶ್ ಮನವಿ ಮಾಡಿದರು. ತಾಲೂಕಿನಲ್ಲಿ ಲಾಕ್‍ಡೌನ್‍ಗೆ ಸಾರ್ವ ಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿ ದ್ದರೂ ಕೆಲವರು ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರಲ್ಲೇ ಕೊರೊನಾ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರವೇ ಕಿಲ್ಲರ್ ವೈರಾಣು ಹತ್ತಿರ ಸುಳಿಯುವುದಿಲ್ಲ. ಮೊದಲು ಗ್ರಾಮೀಣ ಪ್ರದೇಶದ ಜನತೆ ಅರಳೀಕಟ್ಟೆಗಳಲ್ಲಿ ಗುಂಪಾಗಿ ಸೇರಿ ಚರ್ಚಿಸು ವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದು ಕೊಳ್ಳುವ…

ಜುಬಿಲಂಟ್ ಕಾರ್ಖಾನೆ ಆಮದು ಮಾಡಿಕೊಂಡ ಚೀನಾ ಕಂಟೈನರ್‍ನಿಂದ ಕೊರೊನಾ ಸೋಂಕು ಶಂಕೆ
ಮೈಸೂರು

ಜುಬಿಲಂಟ್ ಕಾರ್ಖಾನೆ ಆಮದು ಮಾಡಿಕೊಂಡ ಚೀನಾ ಕಂಟೈನರ್‍ನಿಂದ ಕೊರೊನಾ ಸೋಂಕು ಶಂಕೆ

April 4, 2020

ಮೈಸೂರು, ಏ.3(ಎಸ್‍ಪಿಎನ್)- ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಕಂಟೈನರ್ ಮೂಲಕ ಕೊರೊನಾ ಸೊಂಕು ಹರಡಿರಬಹುದು ಎಂದು ಜಿಲ್ಲಾಧಿಕಾರಿಗಳ ತಮ್ಮ ಬಳಿ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ ನೋವಿಲ್ ಕೋವಿಡ್-19 ತೀವ್ರ ವಾಗಿ ಹರುಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಇತರೆ ಅಧಿಕಾರಿಗಳಿಂದ ಸೋಂಕು ತಡೆಗಟ್ಟುವ ಬಗ್ಗೆ ಮಾಹಿತಿ ಪಡೆದು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಜುಬಿಲಂಟ್ ಕಾರ್ಖಾನೆಯವರು…

ಪಾಲಿಕೆಯಿಂದ 7 ಸಾವಿರ ನಿರಾಶ್ರಿತರಿಗೆ ನಿತ್ಯ ಆಹಾರ
ಮೈಸೂರು

ಪಾಲಿಕೆಯಿಂದ 7 ಸಾವಿರ ನಿರಾಶ್ರಿತರಿಗೆ ನಿತ್ಯ ಆಹಾರ

April 4, 2020

ಮೈಸೂರು, ಏ.3 (ಆರ್‍ಕೆಬಿ)- ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು, ಪ್ರವಾಸಿಗರು ನಿರಾಶ್ರಿತರಾಗಿದ್ದು, ಮೈಸೂರಿನ ವಿವಿಧೆಡೆ ತೆರೆಯಲಾಗಿರುವ ನಿರಾಶ್ರಿತ ಕೇಂದ್ರಗಳು ಮತ್ತು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ 7,300 ಮಂದಿಗೆ ಮೈಸೂರು ಮಹಾ ನಗರಪಾಲಿಕೆಯಿಂದ ಕಳೆದ 4 ದಿನಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದೆ. ನಗರದಲ್ಲಿ ಹೋಟೆಲ್‍ಗಳು ಮುಚ್ಚಿರು ವುದರಿಂದ ಅಸಂಘಟಿತ ವಲಯದ ಕಾರ್ಮಿಕ ರಿಗೆ ಆಹಾರದ ಸಮಸ್ಯೆ ಉಂಟಾಗಿದೆ. ಜಿಲ್ಲಾಧಿಕಾರಿ, ಮೇಯರ್, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ವಲಯ ಕಚೇರಿ ವ್ಯಾಪ್ತಿಯಲ್ಲಿ ನಿರ್ದಿಷ್ಟ…

ವಸತಿ ಗೃಹವೊಂದರಲ್ಲಿ ಕ್ವಾರಂಟೈನ್‍ಗೆ ಒಳಗಾದವರ ಸ್ಥಳಾಂತರಕ್ಕೆ ನಿವಾಸಿಗಳ ಒತ್ತಾಯ ದೇವರಾಜ ಮೊಹಲ್ಲಾ ನಿವಾಸಿಗಳಿಂದ ಪ್ರತಿಭಟನೆ
ಮೈಸೂರು

ವಸತಿ ಗೃಹವೊಂದರಲ್ಲಿ ಕ್ವಾರಂಟೈನ್‍ಗೆ ಒಳಗಾದವರ ಸ್ಥಳಾಂತರಕ್ಕೆ ನಿವಾಸಿಗಳ ಒತ್ತಾಯ ದೇವರಾಜ ಮೊಹಲ್ಲಾ ನಿವಾಸಿಗಳಿಂದ ಪ್ರತಿಭಟನೆ

April 3, 2020

ಮೈಸೂರು,ಏ.2(ವೈಡಿಎಸ್)- ವಸತಿಗೃಹ ವೊಂದರಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾದ ವರನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ಒತ್ತಾಯಿಸಿ ದೇವರಾಜ ಮೊಹಲ್ಲಾ ನಿವಾಸಿಗಳು ಪ್ರತಿಭಟನೆ ನಡೆಸಿದರು. ಗುರುವಾರ ರಾತ್ರಿ ನಾರಾಯಣಶಾಸ್ತ್ರಿ ರಸ್ತೆಯ ಸಂಗೀತ ವಸತಿ ಗೃಹದ ಬಳಿ ಜಮಾವಣೆಗೊಂಡ ನೂರಾರು ಮಂದಿ ನಿವಾಸಿಗಳು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಈ ಬಡಾವಣೆಯಲ್ಲಿ ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹೋಂ ಕ್ವಾರಂಟೈನ್‍ಗೆ ಒಳಗಾಗಿರುವ ನಂಜನ ಗೂಡಿನ ಜ್ಯುಬಿಲಂಟ್ ಕಾರ್ಖಾನೆಯ ನಾಲ್ವರು ಸೇರಿದಂತೆ 40 ಮಂದಿಯನ್ನು ಸೀಬಯ್ಯ ರಸ್ತೆಯಲ್ಲಿರುವ…

ಬೇಕರಿ ವಹಿವಾಟಿಗೆ ಅವಕಾಶವಿಲ್ಲ: ಒಂದೇ ದಿನದಲ್ಲಿ ಪಾಲಿಕೆ `ಯು’ಟರ್ನ್!
ಮೈಸೂರು

ಬೇಕರಿ ವಹಿವಾಟಿಗೆ ಅವಕಾಶವಿಲ್ಲ: ಒಂದೇ ದಿನದಲ್ಲಿ ಪಾಲಿಕೆ `ಯು’ಟರ್ನ್!

April 3, 2020

ಬೇಕಿದ್ದರೆ ಬ್ರೆಡ್, ಬನ್ ತಯಾರಿಸಿ ಅಂಗಡಿ, ಸೂಪರ್ ಮಾರ್ಕೆಟ್‍ಗೆ ಸರಬರಾಜು ಮಾಡಬಹುದು ಮೈಸೂರು, ಏ.2(ಪಿಎಂ)- ಬೇಕರಿ ಗಳಿಗಿಲ್ಲ ತೆರೆಯುವ ಭಾಗ್ಯ! ಬೇಕರಿಗಳ ಬಾಗಿಲು ತೆರೆದು ವ್ಯಾಪಾರ ಮಾಡುವ ವಿಚಾರದಲ್ಲಿ ಮಹಾನಗರ ಪಾಲಿಕೆಯ ನಡೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಂತಾಗಿದೆ! ಬೇಕರಿಗಳು ಬಾಗಿಲು ತೆರೆದು ಮಾರಾಟ ನಡೆಸಲು ಅವಕಾಶ ಮಾಡಿಕೊಡಲಾಗು ವುದು ಎಂದು ಬುಧವಾರ ಪ್ರಕಟಿಸಿದ್ದ ಪಾಲಿಕೆ ಒಂದೇ ದಿನದಲ್ಲಿ ಯುಟರ್ನ್ ಹೊಡೆದಿದೆ. ನಗರದಲ್ಲಿ ಸದ್ಯಕ್ಕೆ ಬೇಕರಿ ಗಳನ್ನು ತೆರೆಯುವುದು ಬೇಡ ಎಂದು ಗುರುವಾರ ಸಂಜೆ…

ಲಾಕ್‍ಡೌನ್: ಮೈಸೂರಿನಲ್ಲಿ ಆಶ್ರಯ ಪಡೆದಿರುವವರ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ
ಮೈಸೂರು

ಲಾಕ್‍ಡೌನ್: ಮೈಸೂರಿನಲ್ಲಿ ಆಶ್ರಯ ಪಡೆದಿರುವವರ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ

April 3, 2020

ಅಧಿಕಾರಿಗಳ ಜತೆ ನಂಜರಾಜ ಬಹದ್ದೂರ್ ಕಲ್ಯಾಣಮಂಟಪ, ಯೂತ್‍ಹಾಸ್ಟೆಲ್ ಮೊದಲಾದೆಡೆ ಭೇಟಿ, ಪರಿಶೀಲನೆ ಮೈಸೂರು,ಏ.2(ಎಂಟಿವೈ)- ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅತಂತ್ರ ರಾಗಿದ್ದ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಿರುವ ನಂಜರಾಜ ಬಹ ದ್ದೂರ್ ಕಲ್ಯಾಣಮಂಟಪ, ಯೂತ್ ಹಾಸ್ಟೆಲ್ ಮೊದಲಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗುರು ವಾರ ಭೇಟಿ ನೀಡಿ ಪರಿಶೀಲಿಸಿದರು. ನಿರಾಶ್ರಿತರಿಗಾಗಿ ಮೈಸೂರು ಮಹಾ ನಗರ ಪಾಲಿಕೆ ಹಾಗೂ ಮುಡಾ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಆಶ್ರಯ ಕೇಂದ್ರ ಗಳಲ್ಲಿನ ಪರಿಸ್ಥಿತಿ ಅವಲೋಕಿಸುವ ಸಲು ವಾಗಿ ಗುರುವಾರ…

‘ಲಾಕ್‍ಡೌನ್’ ಇದ್ದರೂ ದಿಕ್ಕೆಟ್ಟಂತೆ ಅಲೆಯುತ್ತಿರುವ ಜನ ಇವರಿಗೆ ಕೊರೊನಾ ಭೀತಿಯೇ ಇಲ್ಲವೇನೊ…
ಮೈಸೂರು

‘ಲಾಕ್‍ಡೌನ್’ ಇದ್ದರೂ ದಿಕ್ಕೆಟ್ಟಂತೆ ಅಲೆಯುತ್ತಿರುವ ಜನ ಇವರಿಗೆ ಕೊರೊನಾ ಭೀತಿಯೇ ಇಲ್ಲವೇನೊ…

April 3, 2020

ಮೈಸೂರು, ಏ.2(ಎಂಕೆ)- ವಿಶ್ವದೆಲ್ಲೆಡೆ ಭಯ ಹುಟ್ಟಿಸಿರುವ ಕಿಲ್ಲರ್ ಕೊರೊನೊ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದ್ದರೂ ಮೈಸೂರು ಜನತೆ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಎಲ್ಲೆಂದರಲ್ಲಿ ಅಡ್ಡಾಡುವ ದೃಶ್ಯಗಳು ಗುರುವಾರ ಸಾಮಾನ್ಯವಾಗಿತ್ತು. ನಗರದಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದರೂ ಮನೆಯಿಂದ ಹೊರಬರುತ್ತಿರುವ ಜನರು ಮಾತ್ರ ನಮಗೆ ಕೊರೊನಾ ತಗುಲುವುದಿಲ್ಲ ಎಂಬ ಅಸಡ್ಡೆತನ ತೋರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಗುರುವಾರ ಬೆಳಿಗ್ಗೆಯಿಂದಲೇ ಕುವೆಂಪುನಗರ, ಶಾರದಾದೇವಿನಗರ, ಇಂದಿರಾನಗರ, ಮಾನಂದವಾಡಿ ರಸ್ತೆ, ಸರಸ್ವತಿಪುರಂ, ಉದಯಗಿರಿ, ತಿಲಕ್‍ನಗರ…

ನಂಜನಗೂಡು ಸ್ತಬ್ಧ: ಯಾರೊಬ್ಬರು ಹಸಿವು, ದಾಹದಿಂದ ಬಳಲದಂತೆ ಕ್ರಮ ಕೈಗೊಳ್ಳಿ
ಮೈಸೂರು

ನಂಜನಗೂಡು ಸ್ತಬ್ಧ: ಯಾರೊಬ್ಬರು ಹಸಿವು, ದಾಹದಿಂದ ಬಳಲದಂತೆ ಕ್ರಮ ಕೈಗೊಳ್ಳಿ

April 2, 2020

ಜುಬಿಲಿಯಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಂತರ ಅಧಿಕಾರಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೈಸೂರು, ಏ.1(ಆರ್‍ಕೆ)- ಲಾಕ್‍ಡೌನ್ ಆಗಿರುವುದರಿಂದ ತೊಂದರೆಗೊಳಗಾಗಿರುವ ಪ್ರತಿಯೊಬ್ಬರಿಗೂ ಊಟೋಪಚಾರದ ವ್ಯವಸ್ಥೆ ಮಾಡಿ. ಅವರು ಬಳಲದಂತೆ ನೋಡಿ ಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡಿ ರುವ ನಂಜನಗೂಡಿನ ಜುಬಿಲಿಯಂಟ್ ಜೆನಿರಿಕ್ಸ್ ಔಷಧ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ನಂಜನ ಗೂಡು ರಸ್ತೆಯಲ್ಲಿರುವ ಕೆಇಬಿ ಇಂಜಿನಿ ಯರ್ಸ್ ಅಸೋಸಿಯೇಷನ್…

1 2
Translate »