ಕೊರೊನಾ ಕುರಿತು ಸ್ವಯಂ ಅರಿವು ಅಗತ್ಯ: ತಹಸೀಲ್ದಾರ್ ಡಿ.ನಾಗೇಶ್
ಮೈಸೂರು ಗ್ರಾಮಾಂತರ

ಕೊರೊನಾ ಕುರಿತು ಸ್ವಯಂ ಅರಿವು ಅಗತ್ಯ: ತಹಸೀಲ್ದಾರ್ ಡಿ.ನಾಗೇಶ್

April 5, 2020

ತಿ.ನರಸೀಪುರ, ಏ.4(ಎಸ್‍ಕೆ)-ಕೊರೊನಾ ಸೋಂಕು ಕುರಿತು ಸ್ವಯಂ ಅರಿವಿನೊಂದಿಗೆ ಸಾರ್ವಜನಿಕರು ತಾಲೂಕು ಆಡಳಿತದೊಂದಿಗೆ ಸಹಕರಿಸ ಬೇಕು ಎಂದು ತಹಸೀಲ್ದಾರ್ ಡಿ.ನಾಗೇಶ್ ಮನವಿ ಮಾಡಿದರು.

ತಾಲೂಕಿನಲ್ಲಿ ಲಾಕ್‍ಡೌನ್‍ಗೆ ಸಾರ್ವ ಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿ ದ್ದರೂ ಕೆಲವರು ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರಲ್ಲೇ ಕೊರೊನಾ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರವೇ ಕಿಲ್ಲರ್ ವೈರಾಣು ಹತ್ತಿರ ಸುಳಿಯುವುದಿಲ್ಲ. ಮೊದಲು ಗ್ರಾಮೀಣ ಪ್ರದೇಶದ ಜನತೆ ಅರಳೀಕಟ್ಟೆಗಳಲ್ಲಿ ಗುಂಪಾಗಿ ಸೇರಿ ಚರ್ಚಿಸು ವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ತಾಲೂಕು ಆಡಳಿತ ದೊಂದಿಗೆ ಸಹಕರಿಸಬೇಕು ಎಂದರು.

ತಾಲೂಕಿನಲ್ಲಿ 6 ಕಡೆಗಳಲ್ಲಿ ಚೆಕ್‍ಪೆÇೀಸ್ಟ್ ನಿರ್ಮಾಣ ಮಾಡಿದ್ದು, ಪಟ್ಟಣಕ್ಕೆ ಅಂತರ ರಾಜ್ಯಗಳಿಂದ ಹೋಗಿ ಬರುವ ವಾಹನ ಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲಾ ಗಿದೆ. ಅವಶ್ಯಕತೆ ಇದ್ದಲ್ಲಿ ಮಾತ್ರವೇ ವಾಹನಗಳನ್ನು ಬಿಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಲಾಕ್‍ಡೌನ್‍ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಕೆಲವೊಂದು ಪಡ್ಡೆ ಗಳ ಗುಂಪು ಅನಾವಶ್ಯಕವಾಗಿ ಪಟ್ಟಣ ಸುತ್ತುತ್ತಿದ್ದು, ಅವರ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕದಂತೆ ಬಂಕ್ ಮಾಲೀಕ ರಿಗೆ ಸೂಚಿಸಲಾಗಿದೆ. ಅಲ್ಲದೆ ಅನವಶ್ಯಕ ವಾಗಿ ಪಟ್ಟಣಕ್ಕೆ ಬರುವ ವಾಹನಗಳನ್ನು ಜಪ್ತಿ ಮಾಡುವಂತೆ ಪೆÇಲೀಸರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಆರ್‍ಐಗಳಿಗೆ ಪ್ರತಿದಿನ ಗ್ರಾಮಕ್ಕೆ ಭೇಟಿ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದ್ದು, ಆ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಜನರಿಗೆ ಪ್ರತಿ ಯೂನಿಟ್‍ಗೆ 10 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ನೀಡುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂ ಸ್ವಾಧೀನಾಧಿಕಾರಿ ದೇವರಾಜು ಇದ್ದರು.

Translate »