ಮೈಸೂರು,ಏ.4(ಎಂಟಿವೈ)- ದಸರಾ ವಸ್ತು ಪ್ರದರ್ಶನ ಮೈದಾನದ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಬರುವ ರೈತರು ಮತ್ತು ಖರೀದಿದಾರರ ಆರೋಗ್ಯ ರಕ್ಷಣೆ ಗಾಗಿ ನಿರ್ಮಿಸಿರುವ `ಡಿಸ್ ಇನ್ಫೆಕ್ಷನ್ ಟನಲ್’(ವೈರಾಣು ನಾಶಕ ಸುರಂಗ) ಸೇವೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಶನಿವಾರ ಚಾಲನೆ ನೀಡಿದರು.
ವಸ್ತು ಪ್ರದರ್ಶನ ಮೈದಾನದ ಮಾರು ಕಟ್ಟೆಯಲ್ಲಿ ತಾಜಾ ಹಣ್ಣು, ತರಕಾರಿ ಸಿಗು ವುದರಿಂದ ಜನ ಮುಗಿಬೀಳುತ್ತಿದ್ದಾರೆ. ಇಲ್ಲಿಗೆ ಬರುವ ರೈತರು, ಗ್ರಾಹಕರನ್ನು ಸ್ಯಾನಿ ಟೈಸೇಷನ್‍ಗೆ ಒಳಪಡಿಸಲು 2.5 ಮೀ. ಉದ್ದ, 4 ಅಡಿ ಅಗಲ, 7 ಅಡಿ ಎತ್ತರದ ಟನಲ್ ನಿರ್ಮಿಸಲಾಗಿದೆ. ಟನಲ್‍ಗೆ ಸುತ್ತ ಹಸಿರು ಪರದೆ ಹೊದಿಸಲಾಗಿದೆ.
ವಿಶೇಷವೇನು?: ಎಂಜಿ ರಸ್ತೆಯಿಂದ ಹೊಸ ಮಾರುಕಟ್ಟೆ ಪ್ರವೇಶಿಸುವ ಎಲ್ಲರೂ ಕಡ್ಡಾಯವಾಗಿ ಈ ವೈರಾಣು ನಾಶದ ಸುರಂಗದೊಳಕ್ಕೆ ಎರಡೂ ಕೈ ಮೇಲೆತ್ತಿ ಪ್ರವೇಶಿಸಿ ಹೊರಬರಬೇಕು. ಮೇಲ್ಭಾಗ ದಿಂದ ಮಂಜಿನಂತಹ ವೈರಾಣು ನಾಶಕ ಮೈಮೇಲೆ ಸಿಂಪಡಣೆಯಾಗುತ್ತದೆ. ಸಾವಿರ ಲೀ. ಸಾಮಥ್ರ್ಯದ 2 ಟ್ಯಾಂಕ್‍ಗಳಿಗೆ ನೀರು ತುಂಬಿ, ಸೋಡಿಯಂ ಹೈಪ್ಲೋಕ್ಲೋರೈಡ್ ದ್ರಾವಣ ಬೆರೆಸಲಾಗಿದೆ. ಮೈಗೆ ವೈರಾಣು ಅಂಟಿದ್ದರೆ ದ್ರಾವಣ ಸಿಂಪಡಣೆಯಿಂದ ನಾಶವಾಗಲಿದೆ. ಪಾಲಿಕೆಯೊಂದಿಗೆ ರಮೇಶ್ ಕಿಕ್ಕೇರಿ, ಡಿಆರ್‍ಸಿಯ ಹನುಮಂತ್, ಡಾ. ನಾಗರಾಜು, ಡಾ.ಪ್ರವೀಣ್ ಸೇರಿಕೊಂಡು ಈ ಡಿಸ್‍ಇನ್ಫೆಕ್ಷನ್ ಟನಲ್ ನಿರ್ಮಿಸಿದ್ದಾರೆ. ಪರಿಣಾಮಕಾರಿಯಾಗಿ ಕೆಲಸ ಮಾಡುವ ಈ ಟನಲ್ ಕಡಿಮೆ ವೆಚ್ಚದ್ದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮೇಯರ್ ತಸ್ನೀಂ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಎಡಿಸಿ ಕೆ.ಎನ್.ಶಶಿಕುಮಾರ್, ಆರೋಗ್ಯಾ ಧಿಕಾರಿ ಡಾ.ಡಿ.ಜಿ.ನಾಗರಾಜು, ಪಾಲಿಕೆ ಸದಸ್ಯೆ ಛಾಯಾದೇವಿ, ರಮೇಶ್ ಕಿಕ್ಕೇರಿ, ಡಿಆರ್ ಸಿಯ ಹನುಮಂತ್ ಇನ್ನಿತರರಿದ್ದರು.