ಮೈಸೂರು,ಏ.4(ಎಂಟಿವೈ)- ಕೊರೊನಾ ವಿರುದ್ಧದ ಈ ಹೋರಾಟದ ಕಾಲದಲ್ಲಿ `ನಾವೆಲ್ಲಾ ಒಂದು’ ಎಂಬ ಸಂದೇಶ ಸಾರಲು ಏ.5ರ ರಾತ್ರಿ 9ಕ್ಕೆ ಮನೆಯ ಹೊರಗೆ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ನೀಡಿರುವ ಕರೆಗೆ ಸ್ಪಂದಿಸುವಂತೆ ಮನವಿ ಮಾಡಿದ ಅಪೂರ್ವ ಸ್ನೇಹ ಬಳ ಗದ ಸದಸ್ಯರು, ಶನಿವಾರ ಚಾಮುಂಡಿಪುರಂ ಹಾಗೂ ಮೇದರಕೇರಿಯಲ್ಲಿ 150 ಮನೆ ಗಳಿಗೆ ಜೋಡಿ ಮಣ್ಣಿನ ಹಣತೆ ವಿತರಿಸಿ ದರು. ಭಾನುವಾರ ರಾತ್ರಿ 9ಕ್ಕೆ 9 ನಿಮಿಷ ಪ್ರತಿ ಮನೆಯವರೂ ಎಲ್ಲಾ ಲೈಟ್ ಆರಿಸಿ, ಮಣ್ಣಿನ ದೀಪ, ಮೇಣದ ಬತ್ತಿ ಅಥವಾ ಟಾರ್ಚ್ ಬೆಳಗಿಸುವ ಮೂಲಕ ಪ್ರದಾನಿ ಕರೆಯನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಈ ವೇಳೆ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಮಾತನಾಡಿ, ದೇಶದಲ್ಲಿ ಕೊರೊನಾ ವೈರಸ್ ಹರಡಬಾರದೆಂದು ದೇಶದ ಕೈಗೊಂಡಿರುವ ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಪ್ರಶಂಸೆ ವ್ಯಕ್ತಪಡಿ ಸಿದೆ. ಏ.5ರಂದು ದೀಪ ಬೆಳಗಿಸುವ ಮೂಲಕ ದೇಶದ 130 ಕೋಟಿ `ಜನ ರೆಲ್ಲಾ ಒಂದೇ’ ಎನ್ನುತ್ತಾ ವಸುದೈವ ಕುಟುಂಬಕಂ, ಸರ್ವೇ ಜನಾಃ ಸುಖಿನೋ ಭವಂತು ಎಂದು ಸಂದೇಶ ಸಾರುವಂತೆ ಕೋರಿದರು. ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಮುಖಂಡ ವಿ.ರಾಮಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಯುವ ಮುಖಂಡ ರಾದ ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಸಿದ್ದೇಶ್, ಬಿ.ಸಿ.ಶಶಿಕಾಂತ್, ನಟ ರಾಜ, ಸಂದೀಪ್ ಉಪಸ್ಥಿತರಿದ್ದರು