ರಾಜಸ್ಥಾನದ 170 ಕಾರ್ಮಿಕರಿಗೆ `ನಮ್ಮ ಮೈಸೂರು ಪ್ರತಿಷ್ಠಾನ’ದ ನೆರವು
ಮೈಸೂರು

ರಾಜಸ್ಥಾನದ 170 ಕಾರ್ಮಿಕರಿಗೆ `ನಮ್ಮ ಮೈಸೂರು ಪ್ರತಿಷ್ಠಾನ’ದ ನೆರವು

April 5, 2020

ಮೈಸೂರು,ಏ.4(ವೈಡಿಎಸ್)- ಮೈಸೂರು ಸಿದ್ದಾರ್ಥನಗರದ ಸಿಐಟಿಬಿ ಛತ್ರದಲ್ಲಿ ಉಳಿದು ಕೊಂಡಿರುವ ರಾಜಸ್ಥಾನ ಮೂಲದ 170 ಮಂದಿ ನಿರಾಶ್ರಿತರಿಗೆ ನಮ್ಮ ಮೈಸೂರು ಫೌಂಡೇಷನ್‍ನಿಂದ ಶನಿವಾರ ದಿನಸಿ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಲಾಕ್‍ಡೌನ್ ಹಿನ್ನೆಲೆ ಮೈಸೂರು ಸೇರಿದಂತೆ ಸುತ್ತಲಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ 170 ಕಾರ್ಮಿಕರು 3 ದಿನಗಳ ಹಿಂದೆ ವಾಹನದಲ್ಲಿ ರಾಜಸ್ಥಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಅವರನ್ನು ತಡೆದು ಸಿದ್ದಾರ್ಥನಗರದ ಸಿಐಟಿಬಿ ಛತ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಖಾಸಗಿ ಸಂಸ್ಥೆ ಯೊಂದು ಗ್ಯಾಸ್‍ಸ್ಟೌವ್, ಕುಡಿಯುವ ನೀರು, ಸೋಪು, ಪೇಸ್ಟ್, ಬ್ರಶ್, ಔಷಧಿ ಒದಗಿಸಿದೆ.

ಶನಿವಾರ `ನಮ್ಮ ಮೈಸೂರು ಫೌಂಡೇ ಷನ್’ನಿಂದ ಗೋಧಿಹಿಟ್ಟು 450 ಕೆಜಿ, ಈರುಳ್ಳಿ 50 ಕೆಜಿ, ಉದ್ದಿನಬೇಳೆ, ತೊಗರಿಬೇಳೆ, ಕಡಲೆ ಬೇಳೆ, ಕಡಲೆಕಾಳು, ಹೆಸರುಬೇಳೆ, ಹೆಸರುಕಾಳು ತಲಾ 10 ಕೆಜಿ, ಬೆಳ್ಳುಳ್ಳಿ 25 ಕೆಜಿ, ಅಡುಗೆ ಎಣ್ಣೆ 80ಲೀ, ಸಕ್ಕರೆ 10 ಕೆಜಿ, ವೀಲ್‍ಪೌಡರ್ 10 ಕೆಜಿ, ಹ್ಯಾಂಡ್‍ವಾಶ್ 2 ಲೀ. ವಿತರಿಸಲಾಯಿತು.

ಲಾಕ್‍ಡೌನ್ ಇರುವವರೆಗೆ ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನು ವಿತರಿಸಿದ್ದೇವೆ. ಇನ್ನೂ ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸುವಂತೆ ತಿಳಿ ಸಿದ್ದೇವೆ ಎಂದು ನಮ್ಮ ಮೈಸೂರು ಫೌಂಡೇ ಷನ್ ಟ್ರಸ್ಟಿ ಮಲ್ಲೇಶ್ ಹೇಳಿದರು.

ಈ ವೇಳೆ ನ್ಯೂ ಇಂಡಿಯಾ ಇನ್ಷೂರೆನ್ಸ್ ಕಂಪನಿಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸಿದ್ಧಾರ್ಥ ಸಂಚಾರ ಠಾಣೆಯ ಮುಖ್ಯ ಪೇದೆ ಮಹೇಶ್‍ಕುಮಾರ್, ನಮ್ಮ ಮೈಸೂರು ಫೌಂಡೇ ಷನ್‍ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ದಶರಥ, ಟ್ರಸ್ಟಿ ಮಲ್ಲೇಶ್ ಮತ್ತಿತರರು ಹಾಜರಿದ್ದರು.

Translate »