ಜುಬಿಲಂಟ್ ಕಾರ್ಖಾನೆ ಆಮದು ಮಾಡಿಕೊಂಡ ಚೀನಾ ಕಂಟೈನರ್‍ನಿಂದ ಕೊರೊನಾ ಸೋಂಕು ಶಂಕೆ
ಮೈಸೂರು

ಜುಬಿಲಂಟ್ ಕಾರ್ಖಾನೆ ಆಮದು ಮಾಡಿಕೊಂಡ ಚೀನಾ ಕಂಟೈನರ್‍ನಿಂದ ಕೊರೊನಾ ಸೋಂಕು ಶಂಕೆ

April 4, 2020

ಮೈಸೂರು, ಏ.3(ಎಸ್‍ಪಿಎನ್)- ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಕಂಟೈನರ್ ಮೂಲಕ ಕೊರೊನಾ ಸೊಂಕು ಹರಡಿರಬಹುದು ಎಂದು ಜಿಲ್ಲಾಧಿಕಾರಿಗಳ ತಮ್ಮ ಬಳಿ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ನೋವಿಲ್ ಕೋವಿಡ್-19 ತೀವ್ರ ವಾಗಿ ಹರುಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಇತರೆ ಅಧಿಕಾರಿಗಳಿಂದ ಸೋಂಕು ತಡೆಗಟ್ಟುವ ಬಗ್ಗೆ ಮಾಹಿತಿ ಪಡೆದು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಜುಬಿಲಂಟ್ ಕಾರ್ಖಾನೆಯವರು ಕಳೆದ ಮಾರ್ಚ್ ತಿಂಗಳಿನಲ್ಲಿ ಚೀನಾದಿಂದ ಕಂಟೈನರ್ ಒಂದನ್ನು ಆಮದು ಮಾಡಿಕೊಂಡಿದ್ದು, ಅದರಿಂದ ಕಾರ್ಖಾ ನೆಯ ನೌಕರರಿಗೆ ವೈರಸ್ ಹರಡಿರಬಹುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಈಗಾಗಲೇ ಕಂಟೈನರ್‍ನಲ್ಲಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದರ ವರದಿ ಬಂದ ನಂತರ ಸೋಂಕು ಹರಡುವಿಕೆ ಬಗ್ಗೆ ನಿಖಿರ ಮಾಹಿತಿ ಲಭ್ಯವಾಗಲಿದೆ ಎಂದರು.

52ನೇ ಸೋಂಕಿತನಿಗೆ(ಜುಬಿಲಂಟ್ ಕಾರ್ಖಾ ನೆಯ ಮೊದಲ ಸೋಂಕಿತ ನೌಕರ) ಕೋವಿಡ್-19 ಹೇಗೆ ಬಂತು? ಎಂಬುದರ ಬಗ್ಗೆ ಜಿಲ್ಲಾಡಳಿತ ತನಿಖೆ ಮಾಡಲಿ ಎಂದು ಒತ್ತಾಯಿಸಿದ್ದೇನೆ. ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರೆಲ್ಲರೂ ಸರ್ಕಾರದೊಂದಿಗೆ ಸಹಕರಿಸ ಬೇಕು. ಕೋವಿಡ್-19 ವೈರಾಣು ಬಗ್ಗೆ ಯಾರೂ ಮುಚ್ಚಿಡಬಾರದು. ಈ ಸೋಂಕು ನಿವಾರಣೆಯಾಗ ಬೇಕಾದರೆ, ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿ ಸುವಂತೆ ಆಯಾಯ ಸಮುದಾಯದ ಮುಖಂಡ ರಲ್ಲಿ ಮನವಿ ಮಾಡಲಾಗಿದೆ ಎಂದರು.

ಲ್ಯಾಕ್‍ಡೌನ್‍ನಿಂದ ರೈತರ ಬೆಳೆಗಳಿಗೆ ಯಾವುದೇ ತೊಂದರೆಯಾಗಬಾರದು. ಈಗಾಗಲೇ ಸರ್ಕಾರ ರೈತರ ಉತ್ಪನ್ನಗಳ ಸಾಗಾಟಕ್ಕಿದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಆದ್ದ ರಿಂದ ಜಿಲ್ಲಾಡಳಿತ ಸಾಧ್ಯ ವಾದಷ್ಟು ರೈತರ ಉತ್ಪನ್ನ ಗಳ ಸಾಗಾಟಕ್ಕೆ ತೊಂದರೆಯಾಗದಂತೆ ನೋಡಿ ಕೊಳ್ಳವಂತೆÉ ನಿರ್ದೇಶನ ನೀಡಿದ್ದೇನೆ ಎಂದರು.

ನಾವಿನ್ನೂ 2ನೇ ಹಂತದಲ್ಲಿದ್ದೇವೆ: ದೇಶದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ 2ನೇ ಹಂತದಲ್ಲಿದೆ. ಮುಂದೆ 3ನೇ ಸ್ಥಾನಕ್ಕೆ ಹೋಗದಂತೆ ತಡೆಗಟ್ಟಲು ರಾಜ್ಯ ಸರ್ಕಾರ ತಯಾರಿ ನಡೆಸಬೇಕಿದೆ. ಇದಕ್ಕೆ ನಾಗರಿಕರು ಸರ್ಕಾರದ ಆದೇಶ ಮತ್ತು ವೈದ್ಯರ ಸಲಹೆಯನ್ನು ಚಾಚೂ ತಪ್ಪಿದೆ ಪಾಲಿಸಬೇಕು. ಇದಕ್ಕೆ ಮುಸ್ಲಿಂ ಸಮುದಾಯವೂ ಹೊರತಾಗಿಲ್ಲ. ಈಗಾಗಲೇ ಎಲ್ಲಾ ಸಮುದಾಯದ ಮುಖಂಡರ ಜೊತೆಗೂ ಮಾತು ಕತೆ ನಡೆಸುವಂತೆ ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯ ಮಂತ್ರಿಗಳಿಗೆ ಸಲಹೆ ನೀಡಿದ್ದೇನೆ. ಇದೀಗ ಮಾಧ್ಯಮ ಗಳ ಮೂಲಕವೂ ಇದನ್ನೇ ಹೇಳುತ್ತೇನೆ ಎಂದರು.

ಕೋವಿಡ್-19 ಸೋಂಕಿಗೆ ಪ್ರಮುಖ ಕಾರಣವಾದ ಜ್ಯುಬಿಲಂಟ್ ಕಾರ್ಖಾನೆ, ಇತರೆ ಕಾರ್ಮಿಕರ ಪರಿಸ್ಥಿತಿ, ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಹಾಗೂ ಮಂಡ್ಯ ಭಾಗದಿಂದ ಮೈಸೂರಿಗೆ ಬರುವ ರೈತರ ಸಮಸ್ಯೆ ಬಗ್ಗೆಯೂ ಚರ್ಚೆ ನಡೆದಿದೆ. ಕರ್ನಾ ಟಕ-ಕೇರಳ ರಾಜ್ಯದ ಗಡಿ ಭಾಗ ಸಂಪೂರ್ಣ ಬಂದ್ ಮಾಡಿದರೆ, ಮೈಸೂರಿಂದ ಕೇರಳಕ್ಕೆ ಹೋಗುತ್ತಿದ್ದ ತರಕಾರಿ ಬಂದ್ ಆಗುತ್ತದೆ. ಇದರಿಂದ ನಮ್ಮ ರೈತ ರಿಗೆ ನಷ್ಟವಾಗುತ್ತದೆ. ಆದ್ದರಿಂದ ರೈತರ ಉತ್ಪನ್ನಗಳ ಸಾಗಾಟ ಮಾಡಲು ಗಡಿಯಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವಂತೆಯೂ ಸಲಹೆ ನೀಡಿರುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ವಿಧಾನಪರಿಷತ್ ಸದಸ್ಯ ಧರ್ಮ ಸೇನಾ, ಜಿಲ್ಲಾ ಕಾಂಗೆಸ್ ಅಧ್ಯಕ್ಷ ಡಾ.ಬಿ.ಜಿ.ವಿಜಯ್ ಕುಮಾರ್ ಇತರರು ಉಪಸ್ಥಿತರಿದ್ದರು.

Translate »