ಕರ್ನಾಟಕದಲ್ಲಿ ಜುಬಿಲಂಟ್ ಲೈಫ್ ಸೈನ್ಸಸ್‍ನಿಂದ ಆರೋಗ್ಯ, ಸುರಕ್ಷತಾ ಸಾಮಗ್ರಿಗಳ ವಿತರಣೆ
ಮೈಸೂರು

ಕರ್ನಾಟಕದಲ್ಲಿ ಜುಬಿಲಂಟ್ ಲೈಫ್ ಸೈನ್ಸಸ್‍ನಿಂದ ಆರೋಗ್ಯ, ಸುರಕ್ಷತಾ ಸಾಮಗ್ರಿಗಳ ವಿತರಣೆ

April 5, 2020

ಮೈಸೂರು,ಏ.4-ಕೋವಿಡ್-19 ಬಿಕ್ಕಟ್ಟು ಪರಿಹಾರಕ್ಕೆ ಕರ್ನಾ ಟಕ ಸರ್ಕಾರ ಕೈಗೊಂಡಿರುವ ಆರೋಗ್ಯ ಮತ್ತು ಸುರಕ್ಷತಾ ಸೇವೆಗಳಿಗೆ ಸಂಪೂರ್ಣ ಬೆಂಬಲ ನೀಡು ವುದಾಗಿ ಸಮಗ್ರ ಜಾಗತಿಕ ಫಾರ್ಮಾಸ್ಯೂಟಿಕಲ್ ಮತ್ತು ಜೀವ ವಿಜ್ಞಾನಗಳ ಕಂಪನಿಯಾಗಿರುವ ಜುಬಿಲಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಪ್ರಕಟಿಸಿದೆ.

ನಮ್ಮ ಸಮುದಾಯ, ನೌಕರರ ಆರೋಗ್ಯ ಮತ್ತು ಸುರಕ್ಷತೆಗೆ ಜುಬಿಲಂಟ್ ಲೈಫ್ ಸೈನ್ಸಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಎಲ್ಲರೂ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ನಿರಂತರವಾಗಿ ಖಾತರಿಪಡಿಸಿಕೊಳ್ಳುತ್ತಿದೆ. ಇದಲ್ಲದೇ, ಸರ್ಕಾರ ನೀಡಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸು ತ್ತಿದ್ದಾರೆಯೇ ಎಂಬುದನ್ನು ಗಮನಿಸುತ್ತಿದೆ. ಈ ನಿಟ್ಟಿನಲ್ಲಿ ನಾವು ಜಿಲ್ಲಾ ಮತ್ತು ರಾಜ್ಯದ ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರೊಂದಿಗೆ ಸೇರಿ ಕಾರ್ಯಪ್ರವೃತ್ತರಾಗಿ ದ್ದೇವೆ. ಈ ಮೂಲಕ ಕೋವಿಡ್-19 ಬಿಕ್ಕಟ್ಟು ನಿವಾರಣೆಗೆ ಪ್ರಯ ತ್ನಿಸಲಾಗುತ್ತಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಕಂಪನಿಯು ಇದುವರೆಗೆ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ರಕ್ಷಣೆ, ಆಡಳಿತ ಸಿಬ್ಬಂದಿ ಹಾಗೂ ನೀತಿ ನಿರೂಪಕರಿಗೆ 7000ಕ್ಕೂ ಅಧಿಕ ಮಾಸ್ಕ್‍ಗಳು, ಸುಮಾರು 325 ಲೀಟರ್‍ನಷ್ಟು ಸ್ಯಾನಿಟೈಸರ್‍ಗಳನ್ನು ವಿತರಣೆ ಮಾಡಿದೆ. ಇದಲ್ಲದೇ, ದಿನಗೂಲಿ ನೌಕರರಿಗೆ ಆಹಾರ, ಮಾಸ್ಕ್ ಮತ್ತು ಸೋಪ್‍ಗಳನ್ನೂ ವಿತರಿಸುವ ಕಾರ್ಯದಲ್ಲಿ ತೊಡ ಗಿದೆ. ಪ್ರಸ್ತುತ ತಲೆದೋರಿರುವ ಪರಿಸ್ಥಿತಿಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿರುವ ಕಂಪನಿಯು, ಹಲವಾರು ಸ್ಥಳಗಳಲ್ಲಿ ಜಾಗೃತಿ ಅಭಿ ಯಾನವನ್ನು ನಡೆಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನಂಜನಗೂಡು ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿನ ಎಲ್ಲಾ ಸಿಬ್ಬಂದಿಗೆ ಸ್ವಯಂಕ್ವಾರಂಟೈನ್‍ನಲ್ಲಿಡಲಾಗಿದೆ. ಕಂಪನಿಯು ತನ್ನ ಎಲ್ಲಾ ಘಟಕಗಳ ಸುತ್ತಮುತ್ತಲಿನ ಪ್ರದೇಶ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೊರಗಿನ ಸಂಸ್ಥೆಯಿಂದ ಸೋಂಕು ನಿವಾರಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದರು. ಇದರೊಂದಿಗೆ ಕಂಪನಿ ತನ್ನೆಲ್ಲಾ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ 5000ಕ್ಕೂ ಅಧಿಕ ಮಾಸ್ಕ್‍ಗಳು ಮತ್ತು 200 ಲೀಟರ್‍ನಷ್ಟು ಸ್ಯಾನಿಟೈಸರ್ ಗಳನ್ನು, ಅಗತ್ಯ ಆಹಾರ ಉತ್ಪನ್ನಗಳು ಮತ್ತು ವೈದ್ಯಕೀಯ ಸೌಲಭ್ಯ ವನ್ನು ಒದಗಿಸಿದೆ ಎಂದರು. ಜುಬಿಲಂಟ್ ಲೈಫ್ ಸೈನ್ಸಸ್ ಕೋವಿಡ್ -19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಕೈಗೊಂಡಿ ರುವ ಕ್ರಮಗಳಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಹ ನೀಡಿದೆ ಎಂದರು.

Translate »