ಚಾಮರಾಜ ಕ್ಷೇತ್ರದ 6149 ಕುಟುಂಬಗಳಿಗೆ ಉಚಿತ ಹಾಲು ವಿತರಣೆ ಕಾರ್ಯಕ್ಕೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

ಚಾಮರಾಜ ಕ್ಷೇತ್ರದ 6149 ಕುಟುಂಬಗಳಿಗೆ ಉಚಿತ ಹಾಲು ವಿತರಣೆ ಕಾರ್ಯಕ್ಕೆ ಶಾಸಕ ನಾಗೇಂದ್ರ ಚಾಲನೆ

April 5, 2020

ಮೈಸೂರು,ಏ.4(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಕೊಳಗೇರಿ ನಿವಾಸಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡುವ ಹಾಲನ್ನು ಶನಿವಾರ ವಿತರಿಸಿದರು.

ಮೈಸೂರು ಮಹಾನಗರಪಾಲಿಕೆಯ 21ನೇ ವಾರ್ಡ್‍ನ ಕುದುರೆಮಾಳ ಮತ್ತು ರಾಜರಾಜೇಶ್ವರಿ ನಗರದಲ್ಲಿ ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ಶಾಸಕ ಎಲ್.ನಾಗೇಂದ್ರ, ಮೈಮುಲ್ ಸಹಯೋಗದಲ್ಲಿ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತ ರಿಸಲಾಗುತ್ತಿದೆ. ಚಾಮರಾಜ ಕ್ಷೇತ್ರದಲ್ಲಿ ಒಟ್ಟು 25 ಕೊಳಗೇರಿಗಳಿದ್ದು, 6149 ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ನಿತ್ಯ 1 ಲೀ. ಹಾಲನ್ನು ಉಚಿತವಾಗಿ ನೀಡ ಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆಯ 21ನೇ ವಾರ್ಡ್ ಸದಸ್ಯೆ ಸಿ.ವೇದಾವತಿ, ನೋಡಲ್ ಅಧಿಕಾರಿ ಹರ್ಷಿತ, ಎಇಇ ದೇವರಾಜೇಗೌಡ, ಗಿರೀಶ್, ಮುಖಂಡ ರಾದ ರಮೇಶ್, ಸೋಮಶೇಖರ್, ರಾಜು, ವಾಣಿವಿಲಾಸ ನೀರು ಸರಬ ರಾಜು ಮಂಡಳಿ, ಮಹಾನಗರಪಾಲಿಕೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಹಾಜರಿದ್ದರು.

Translate »