ವಿಜಯೇಂದ್ರ ಬಳಗದಿಂದ ಬಡವರಿಗೆ ಔಷಧ ವಿತರಣೆ
ಮೈಸೂರು

ವಿಜಯೇಂದ್ರ ಬಳಗದಿಂದ ಬಡವರಿಗೆ ಔಷಧ ವಿತರಣೆ

April 5, 2020

ಮೈಸೂರು, ಏ.4(ಪಿಎಂ)- ಮೈಸೂರಿನ ಜಯನಗರ, ಬೋಗಾದಿ, ಹೆಚ್‍ಡಿ ಕೋಟೆ, ನಂಜನಗೂಡು ಹಾಗೂ ವರುಣಾ ಮತ್ತಿತರೆಡೆ ಬಡವರು, ಕೂಲಿ ಕಾರ್ಮಿಕರು, ಮನೆಗೆಲಸದವರಿಗೆ ಬಿ.ವೈ. ವಿಜಯೇಂದ್ರ ಬಳಗದಿಂದ ಶನಿವಾರ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು.

ಇದೇ ಸಂದರ್ಭ ಮಾತನಾಡಿದ ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮೈಸೂರು ನಗರ ಹಾಗೂ ತಾಲೂಕು ಮಟ್ಟದಲ್ಲಿ ಔಷಧಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ. ಏ.14ರವರೆಗೂ ಈ ಸೇವೆ ಮುಂದುವರೆಯಲಿದೆ ಎಂದರು.

ಮುಖಂಡರಾದ ಮಹದೇವಸ್ವಾಮಿ, ಲಕ್ಷ್ಮೀದೇವಿ, ಆನಂದ್, ನಿಖಿಲ್, ಜೆಸ್ವಿನ್, ನಂದೀಶ್, ಅಪ್ಪು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »