ಲಾಕ್‍ಡೌನ್ ವೇಳೆ ಡೋರ್‍ಲಾಕ್ ಮುರಿದು ಕಳವು
ಮೈಸೂರು

ಲಾಕ್‍ಡೌನ್ ವೇಳೆ ಡೋರ್‍ಲಾಕ್ ಮುರಿದು ಕಳವು

April 5, 2020

ಮೈಸೂರು, ಏ.4(ಎಂಕೆ)- ಕೊರೊನಾ ಭಯದಿಂದಲೋ, ಲಾಕ್‍ಡೌನ್ ಕಾರಣ ಎಲ್ಲೆಲ್ಲೂ ಪೊಲೀಸ್ ತಪಾಸಣೆ ಹೆಚ್ಚಾಗಿದ್ದರಿಂದಲೋ ಏನೋ ಕಳೆದು ಎರಡು ವಾರಗಳಿಂದ ಕಳವು ಪ್ರಕರಣಗಳು ಇಲ್ಲವಾಗಿದ್ದವು. ಇದೀಗ ಮೈಸೂರಿನಲ್ಲಿ ಮತ್ತೆ ಮನೆಗಳವು ಶುರುವಾಗಿದೆ. ನಗರದ ಮೇಟಗಳ್ಳಿಯ ಮನೆಯೊಂದರ ಡೋರ್‍ಲಾಕ್ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ.

ಮೇಟಗಳ್ಳಿ ನಿವಾಸಿ ನಾಗೇಂದ್ರ ಅವರ ಮನೆಯಲ್ಲಿ ಚಿನ್ನಾಭರಣ ಕಳವಾಗಿದೆ. ನಾಗೇಂದ್ರ ಮಾ.25ರಂದು ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಪತ್ನಿ, ಮಕ್ಕಳೊಂದಿಗೆ ಶ್ಯಾದನಹಳ್ಳಿಗೆ ತೆರಳಿದ್ದರು. ಏ.3ರಂದು ಮನೆಗೆ ವಾಪಸ್ ಬಂದು ನೋಡಿದಾಗ ಬಾಗಿಲ ಬೀಗ ಮುರಿದು ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳರು ಹೊತ್ತೊಯ್ದಿರುವುದು ಗೊತ್ತಾಗಿದೆ. ಬಳಿಕ ನಾಗೇಂದ್ರ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದು, ಮನೆಗಳವು ಪ್ರಕರಣ ದಾಖಲಾಗಿದೆ.

Translate »