‘ಲಾಕ್‍ಡೌನ್’ ಇದ್ದರೂ ದಿಕ್ಕೆಟ್ಟಂತೆ ಅಲೆಯುತ್ತಿರುವ ಜನ ಇವರಿಗೆ ಕೊರೊನಾ ಭೀತಿಯೇ ಇಲ್ಲವೇನೊ…
ಮೈಸೂರು

‘ಲಾಕ್‍ಡೌನ್’ ಇದ್ದರೂ ದಿಕ್ಕೆಟ್ಟಂತೆ ಅಲೆಯುತ್ತಿರುವ ಜನ ಇವರಿಗೆ ಕೊರೊನಾ ಭೀತಿಯೇ ಇಲ್ಲವೇನೊ…

April 3, 2020

ಮೈಸೂರು, ಏ.2(ಎಂಕೆ)- ವಿಶ್ವದೆಲ್ಲೆಡೆ ಭಯ ಹುಟ್ಟಿಸಿರುವ ಕಿಲ್ಲರ್ ಕೊರೊನೊ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದ್ದರೂ ಮೈಸೂರು ಜನತೆ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಎಲ್ಲೆಂದರಲ್ಲಿ ಅಡ್ಡಾಡುವ ದೃಶ್ಯಗಳು ಗುರುವಾರ ಸಾಮಾನ್ಯವಾಗಿತ್ತು.

ನಗರದಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದರೂ ಮನೆಯಿಂದ ಹೊರಬರುತ್ತಿರುವ ಜನರು ಮಾತ್ರ ನಮಗೆ ಕೊರೊನಾ ತಗುಲುವುದಿಲ್ಲ ಎಂಬ ಅಸಡ್ಡೆತನ ತೋರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಗುರುವಾರ ಬೆಳಿಗ್ಗೆಯಿಂದಲೇ ಕುವೆಂಪುನಗರ, ಶಾರದಾದೇವಿನಗರ, ಇಂದಿರಾನಗರ, ಮಾನಂದವಾಡಿ ರಸ್ತೆ, ಸರಸ್ವತಿಪುರಂ, ಉದಯಗಿರಿ, ತಿಲಕ್‍ನಗರ ಸೇರಿದಂತೆ ನಗರದ ಹಲವೆಡೆ ವಾಹನ ಸಂಚಾರ ಮತ್ತು ರಸ್ತೆಗಳಲ್ಲಿ ಪಾದಚಾರಿಗಳ ತಿರುಗಾಟವೂ ಹೆಚ್ಚಾಗಿದೆ.

ಮೈಸೂರು ನಗರದಲ್ಲಿ ಸಿಆರ್‍ಪಿಸಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅಡ್ಡಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ವಾಹನಗಳನ್ನು ತಡೆದು ಕೇಳಿದರೆ ಇನ್ನಿಲ್ಲದ ಸಬೂಬು ಹೇಳಿಕೊಂಡು ತಿರುಗಾಡುವವರೇ ಹೆಚ್ಚು. ಇದೇ ರೀತಿ ಮುಂದುವರಿದರೆ ಲಾಠಿ ಬೀಸಬೇಕಾಗದ ಅನಿವಾರ್ಯತೆಯಿದೆ ಎಂದು ಕರ್ತವ್ಯ ನಿರತ ಪೊಲೀಸರೊಬ್ಬರು ‘ಮೈಸೂರು ಮಿತ್ರ’ನಲ್ಲಿ ದೂರಿದರು.

ಮೈಸೂರು ಜಿಲ್ಲಾಡಳಿತ ಹಾಲು, ಮಾಂಸ, ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ದುರುಪಯೋಗ ಪಡಿಸಿ ಕೊಂಡು ತಿರುಗಾಡುತ್ತಿದ್ದಾರೆ. ಮನೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಒಬ್ಬರು ಬಂದರೆ ಸಾಕು. ಅಲ್ಲದೆ ಹತ್ತಿರ ಸ್ಥಳಗಳಿಗೆ ವಾಹನಗಳನ್ನು ಬಳಸದೆ ಇರುವುದು ಸೂಕ್ತವೆಂದು ಸಲಹೆ ನೀಡಿದ್ದರೂ ಸಣ್ಣ ಕೆಲಸಕ್ಕೂ ವಾಹನಗಳನ್ನು ಬಳಸುವುದು. ಗುಂಪು ಗುಂಪಾಗಿ ನಿಲ್ಲುವುದು ಸಾಮಾನ್ಯವಾಗಿದೆ ಎಂದು ಕೆಲವರು ದೂರುತ್ತಿದ್ದಾರೆ.

ಯ ವ್ಯಾಪಾರ ನಿರಾತಂಕವಾಗಿ ನಡೆಯುತ್ತಿದೆ. ನಗರದ ಹಲವು ರಸ್ತೆಗಳ ಬದಿಯಲ್ಲಿ ತರಕಾರಿ, ಎಳನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಖರೀದಿ ಮಾಡುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಲ್ಲುವುದು ಹೆಚ್ಚಾಗಿದೆ.

Translate »