ಬೇಗೂರಿನಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು
ಚಾಮರಾಜನಗರ

ಬೇಗೂರಿನಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು

April 3, 2020

ಬೇಗೂರು, ಏ.2(ಕಿರಣ್‍ಬೇಗೂರು)- ಗ್ರಾಮದ ರಸ್ತೆ ಚರಂಡಿ ಮತ್ತು ರಾಷ್ಟ್ರೀಯ ಹೆದ್ದಾರಿ(766)ಯ ಎರಡು ಬದಿಯ ಫುಟ್‍ಬಾತ್ ಅಂಗಡಿಗಳು ಮತ್ತು ಫಾಸ್ಟ್ ಫುಡ್, ಪಾನಿಪುರಿ ಅಂಗಡಿ ಗಳನ್ನು ತೆರವುಗೊಳಿಸಿದ್ದು, ಬೇಗೂರು ಗ್ರಾಮ ಸಂಪೂರ್ಣ ವಾಗಿ ಸ್ವಚ್ಛಗೊಳ್ಳುತ್ತಿದೆ.

ಬೇಗೂರು ಗ್ರಾಮ ಪಂಚಾ ಯಿತಿ ವತಿಯಿಂದ ಕಳೆದ 3, 4 ದಿನಗಳಿಂದ ಗ್ರಾಮದ 1 ಬ್ಲಾಕ್ ಮತ್ತು ಹೊಸ ಬಡಾವಣೆಯ ಚರಂಡಿ ಹೂಳು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಫಾಸ್ಟ್‍ಫುಡ್‍ಗಳು ಅತಿಯಾಗಿದ್ದು ಪಾದಚಾರಿಗಳು ಸಂಚರಿಸಲು ಮತ್ತು ವಾಹನಗಳ ನಿಲುಗಡೆಗೆ ತೊಂದರೆಯಾಗುತಿತ್ತು. ಇದನ್ನು ಅರಿತ ಬೇಗೂರು ಗ್ರಾಪಂ, ಅಧ್ಯಕ್ಷ ರಾಜಶೆಟ್ಟಿ, ಮತ್ತು ಪಿಡಿಓ ಶಿವಸ್ವಾಮಿ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಸಹ ತೆರವುಗೊಳಿಸಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಸಮೀಪದ ನಂಜನಗೂಡಿನಲ್ಲೇ ಹೆಚ್ಚಾದ ಹಿನ್ನೆಲೆಯಲ್ಲಿ ಬೇಗೂರು ಗ್ರಾಮ ಪಂಚಾಯಿತ್ತಿ ಸ್ವಚ್ಛತೆಗೆ ಆದ್ಯತೆ ನೀಡಿ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಯಿತು. ಮುಂದಿನ ದಿನಗಳಲ್ಲಿ ರಸ್ತೆ ಬದಿ ಮಾರಾಟಗಾರರು ತಳ್ಳುವ ಗಾಡಿ ಮುಖಾಂತರ ಪದಾರ್ಥಗಳನ್ನು ತಂದು ಮಾರಾಟ ಮಾಡಿ, ರಾತ್ರಿ ವೇಳೆ ತಳ್ಳುವ ಗಾಡಿಗಳನ್ನು ತಮ್ಮ ಮನೆಗಳ ಆವರಣದಲ್ಲೇ ನಿಲ್ಲಿಸಿ ಕೊಳ್ಳುವಂತೆ ಗ್ರಾಮ ಪಂಚಾಯಿತಿ ತಿಳಿಸಿದೆ.

Translate »