ಸಾವಿರಾರು ಬಡವರು, ಕೂಲಿ ಕಾರ್ಮಿಕರಿಗೆ ದಿನಬಳಕೆ ಅಗತ್ಯ ವಸ್ತು ವಿತರಿಸಿದ ಶಾಸಕ ಎಲ್.ನಾಗೇಂದ್ರ
ಮೈಸೂರು

ಸಾವಿರಾರು ಬಡವರು, ಕೂಲಿ ಕಾರ್ಮಿಕರಿಗೆ ದಿನಬಳಕೆ ಅಗತ್ಯ ವಸ್ತು ವಿತರಿಸಿದ ಶಾಸಕ ಎಲ್.ನಾಗೇಂದ್ರ

April 3, 2020

ಮೈಸೂರು, ಏ.2(ಎಂಕೆ)- ಕೊರೊನಾ ಸೋಂಕಿನಿಂದಾಗಿ ಕೆಲಸವಿಲ್ಲದೆ ಹಸಿವಿ ನಿಂದ ಬಳಲುತ್ತಿರುವ ಬಡವರು, ಕೂಲಿ ಕಾರ್ಮಿಕರ ಸಾವಿರಾರು ಕುಟುಂಬಗಳಿಗೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಅಗತ್ಯ ವಸ್ತುಗಳ ಕಿಟ್‍ಗಳನ್ನು ಗುರುವಾರ ವಿತರಣೆ ಮಾಡಲಾಯಿತು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ವಿವಿ ಮೊಹಲ್ಲಾ, ಹೆಬ್ಬಾಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 1000ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. 5 ಕೆ.ಜಿ ಅಕ್ಕಿ, 1 ಕೆ.ಜಿ ಉಪ್ಪು, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಬೆಳೆ, 1 ಕೆ.ಜಿ ಸಕ್ಕರೆ ಮತ್ತು ನಿತ್ಯ ಬಳಕೆಗೆ 6 ಸಾಬೂನುಗಳಿದ್ದ ಕಿಟ್‍ಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಲಾಯಿತು.

ಅಗರ್‍ವಾಲ್ ಸಮಾಜದ ಸಹಕಾರ ದೊಂದಿಗೆ ಗೂಡ್ಸ್ ವಾಹನದಲ್ಲಿ ಹೆಬ್ಬಾ ಳದ ಪ್ರಮುಖ ರಸ್ತೆಗಳಲ್ಲಿರುವ ಬಡವರು, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ಅಕ್ಕಿ ಮತ್ತಿತರ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವುದರೊಂದಿಗೆ ಕೊರೊನಾ ಸೋಂಕು ತಡೆಗಟ್ಟಲು ಮನೆಯಿಂದ ಯಾರು ಹೊರಬರದಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಯಿತು.

ಈ ವೇಳೆ ‘ಮೈಸೂರು ಮಿತ್ರ’ ನಿಗೆ ಪ್ರತಿಕ್ರಿಯಿಸಿದ ಶಾಸಕ ಎಲ್.ನಾಗೇಂದ್ರ, ಕಳೆದ ಮೂರು ದಿನಗಳಿಂದ ಅಗತ್ಯ ವಸ್ತು ಗಳ ಕಿಟ್ ವಿತರಣೆ ಮಾಡಲಾಗುತ್ತಿದೆ. ಚಾಮರಾಜ ಕ್ಷೇತ್ರದಲ್ಲಿರುವ ಸುಮಾರು 8000ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದು ಳಿದ ಕುಟುಂಬಗಳಿದ್ದು, ಈಗಾಗಲೇ 5000ಕ್ಕೂ ಹೆಚ್ಚು ಕುಟುಂಬಗಳ ಮನೆ ಮನೆಗೆ ಕಿಟ್ ನೀಡಲಾಗುತ್ತಿದೆ ಎಂದರು.

ಅಗತ್ಯ ವಸ್ತುಗಳ ವಿತರಣೆಗೆ ಕ್ಷೇತ್ರದಲ್ಲಿ ಅಗರ್‍ವಾಲ್ ಸಮಾಜ, ಜೈನ್ ಸಮು ದಾಯ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿದ್ದು, ನಿರಂತರವಾಗಿ ವಿತರಣಾ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ 7000 ಹೆಚ್ಚುವರಿ ಅಗತ್ಯ ವಸ್ತುಗಳ ಕಿಟ್‍ಗಳನ್ನು ತರಿಸಲಾಗುತ್ತಿದ್ದು, ಅವುಗಳೆಲ್ಲವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡ ಲಾಗುವುದು ಎಂದು ಹೇಳಿದರು.

ಕೊರೊನಾ ವೈರಸ್‍ನಿಂದ ಕೆಲಸವಿಲ್ಲದೆ ಸಾಕಷ್ಟು ಜನರು ತೊಂದರೆಯಲ್ಲಿದ್ದಾರೆ. ಸಾಧ್ಯವಾದಷ್ಟು ಸ್ಪಂದಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕ್ಷೇತ್ರ ವಾಪ್ತಿಯ ಸಾರ್ವ ಜನಿಕರು ಮನೆಯಿಂದ ಹೊರ ಬರದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಠಿಣ ಕ್ರಮ: ಸಾರ್ವಜನಿಕರು ಮನೆ ಯಲ್ಲಿಯೇ ಉಳಿಯುವಂತೆ ಮನೆ ಬಾಗಿ ಲಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡ ಲಾಗುತ್ತಿದೆ. ಆದರೂ ಕೆಲವರು ಅನಗತ್ಯ ವಾಗಿ ರಸ್ತೆಗಳನ್ನು ತಿರುಗಾಡುವುದನ್ನು ನೋಡಿದ್ದೇವೆ. ಇದೇ ರೀತಿ ಮುಂದುವರೆ ದರೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಪಾಲಿಕೆ ಸದಸ್ಯ ಸುಬ್ಬಯ್ಯ, ನಗರ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ. ಕಿರಣ್ ಗೌಡ, ಮಹಿಳಾ ಮೊರ್ಚಾ ಅಧ್ಯಕ್ಷೆ ತನುಜಾ, ಮುಖಂಡರಾದ ಸೋಮಶೇಖರ್ ರಾಜು, ರಂಗಸ್ವಾಮಿ, ಬಿ.ಟಿ.ರಾಜೇಂದ್ರ, ಅರುಣ್, ಮದು, ಸರಸ್ವತಿ, ಸಂತೋಷ್ ಅಗರ್‍ವಾಲ್ ಸಮಾಜದ ಮುಖಂಡ ಡಾ.ಎಸ್.ಕೆ.ಮಿತ್ತಲ್ ಮತ್ತಿತರರು ಉಪಸ್ಥಿತರಿದ್ದರು.

Translate »