ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ 3 ಸಾವಿರ ಮಂದಿಗೆ ವೈದ್ಯಕೀಯ ಕಿಟ್ ವಿತರಣೆ
ಚಾಮರಾಜನಗರ

ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ 3 ಸಾವಿರ ಮಂದಿಗೆ ವೈದ್ಯಕೀಯ ಕಿಟ್ ವಿತರಣೆ

April 3, 2020

ಕೊಳ್ಳೇಗಾಲ, ಏ.2(ಎನ್.ನಾಗೇಂದ್ರ)- ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ಚಾ.ನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿ ಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮೂರು ಸಾವಿರ ವೈದ್ಯಕೀಯ ಕಿಟ್‍ಗಳನ್ನು ಗುರುವಾರ ಹನೂರು ಶಾಸಕ ಆರ್ ನರೇಂದ್ರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ಈಗಾ ಗಲೇ ಮೈಸೂರಿನಲ್ಲಿ ಐದು ಸಾವಿರ ಮಂದಿಗೆ ಕಿಟ್ ವಿತರಿಸಲಾಗಿದೆ. ಚಾ.ನಗರ ಜಿಲ್ಲೆಯೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ವೃತ್ತಿನಿರತರ ಪತ್ರಕರ್ತರುಗಳಿಗೆ ಇಂದು 3 ಸಾವಿರ ಕಿಟ್ ವಿತರಿಸಲಾಗಿದೆ. ಈ ಕಿಟ್‍ನಲ್ಲಿ ಸ್ಯಾನಿಟೈಜರ್, ಸೋಪು ಹಾಗೂ ಮಾಸ್ಕ್ ಇದ್ದು ಇದರ ವೆಚ್ಚ ಸುಮಾರು 9 ಲಕ್ಷವಾಗಲಿದೆ. ವೃತ್ತಿನಿರತ ಪತ್ರಕರ್ತ ರಿಗೂ ಸಹಾ ಇಂತಹ ಕಿಟ್ ಅವಶ್ಯವಿದ್ದು, ವರದಿಗಾಗಿ ತೆರಳುವ ಪತ್ರಕರ್ತರು ಆರೋಗ್ಯ ಕಾಪಾಡಿಕೊಳ್ಳು ವುದು ಮುಖ್ಯ, ಇದನ್ನು ಮನಗಂಡು ಇಂದು ವೃತ್ತಿನಿರತ ಪತ್ರಕರ್ತ ರಿಗೂ ಸಹಾ ಕಿಟ್ ವಿತರಿಸಲಾಗಿದೆ ಎಂದು ಶಾಸಕ ನರೇಂದ್ರ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಆರೋ ಗ್ಯಾಧಿಕಾರಿ ಡಾ. ಗೋಪಾಲ್, ಸಾರ್ವ ಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಗಣೇಶ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ. ನಟರಾಜು, ಪ್ರಧಾನ ಕಾರ್ಯದರ್ಶಿ ನಿಂಪುರಾಜೇಶ್, ಮಲ್ಲಪ್ಪ, ಗುರುಸ್ವಾಮಿ, ಪ್ರಧಾನ ವ್ಯವಸ್ಥಾಪಕ ವಿನೋದ್‍ಕುಮಾರ್, ಜಿಲ್ಲಾ ವ್ಯವಸ್ಥಾಪಕ ರವಿ, ಕೊಳ್ಳೇಗಾಲ ಶಾಖೆ ವ್ಯವಸ್ಥಾಪಕ ಪ್ರವೀಣ್, ಡಾ. ರವೀಂದ್ರ, ಡಾ.ಗೋಪಾಲ್ ಇನ್ನಿತರರು ಇದ್ದರು.

Translate »