ಇಂದಿನಿಂದ ಕೊಳಚೆ ಪ್ರದೇಶ ವಾಸಿಗಳು, ಕಾರ್ಮಿಕರಿಗೆ ಉಚಿತ ಹಾಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ
ಚಾಮರಾಜನಗರ

ಇಂದಿನಿಂದ ಕೊಳಚೆ ಪ್ರದೇಶ ವಾಸಿಗಳು, ಕಾರ್ಮಿಕರಿಗೆ ಉಚಿತ ಹಾಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ

April 3, 2020

ಚಾಮರಾಜನಗರ, ಏ.2- ಸರ್ಕಾರದ ನಿರ್ದೇಶನ ಅನುಸಾರ ಲಾಕ್‍ಡೌನ್ ಸಂದರ್ಭದಲ್ಲಿ ಕೊಳಚೆ ಪ್ರದೇಶದ ವಾಸಿಗಳಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ನಾಳೆ ಯಿಂದಲೇ ಉಚಿತವಾಗಿ ಹಾಲನ್ನು ವಿತರಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉz್ದÉೀಶಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ 9300 ಕುಟುಂಬಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಸಾವಿರ ಕುಟುಂಬಗಳು ಕೊಳಚೆ ಪ್ರದೇಶದವರಾಗಿದ್ದಾರೆ. 150 ಕುಟುಂಬ ಗಳು ಕಟ್ಟಡ ಕಾರ್ಮಿಕರು, ಇನ್ನೂ 150 ಕುಟುಂಬಗಳು ವಲಸೆ ಕಾರ್ಮಿಕರಿದ್ದು, ಒಟ್ಟಾರೆ 9300 ಕುಟುಂಬಗಳಿಗೆ ಹಾಲನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಚಾಮುಲ್ ಪ್ರತಿನಿತ್ಯ 10 ಸಾವಿರ ಲೀಟರ್ ಹಾಲನ್ನು ಪೂರೈಸಲಿದೆ. ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆಯ ಮೂಲಕ ವಿತರಣೆ ಮಾಡಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಮಾಜಿಕ ಪಿಂಚಣಿಗಳು, ಪಿ.ಎಂ. ಕಿಸಾನ್ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆ ಯಾಗಿದ್ದು, ಬ್ಯಾಂಕುಗಳಿಗೆ ಠೇವಣಿ ಮಾಡಲಾಗಿದೆ. ನಾಳೆಯಿಂದಲೇ ಎಲ್ಲಾ ಬ್ಯಾಂಕ್‍ಗಳಲ್ಲಿ ಅವರಿಗೆ ಸಿಗಬೇಕಾದ ಪಿಂಚಣಿ, ಯೋಜನೆಗಳಿಂದ ಸಿಗುವ ಹಣ ಖಾತೆಗೆ ಜಮಾ ಆಗಲು ಪ್ರಾರಂಭ ವಾಗುತ್ತದೆ. ಜಿಲ್ಲೆಯಲ್ಲಿ 129 ಶಾಖೆಗಳಿವೆ. 1.62 ಲಕ್ಷ ಪಿಂಚಣಿ ಫಲಾನುಭವಿ ಗಳಿದ್ದಾರೆ. ಇವರ ಖಾತೆಗೆ ಜಮೆಯಾದ ಹಣ ಬ್ಯಾಂಕಿನಲ್ಲಿ ಡ್ರಾ ಮಾಡಲು ಅನುಕೂಲ ಕಲ್ಪಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬ್ಯಾಂಕ್ ಗಳ ಮುಂದೆ ಶಾಮಿಯಾನ ಹಾಕಿಸಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾ ಗುವುದು ಎಂದು ತಿಳಿಸಿದರು.

ದೆಹಲಿಯ ನಿಜಾಮುದ್ದೀನ್ ಪ್ರದೇಶ ದಲ್ಲಿ ನಡೆದ ಧರ್ಮ ಸಭೆಯಲ್ಲಿ ಜಿಲ್ಲೆಯ ಇಬ್ಬರು ಮಾತ್ರ ಭಾಗವಹಿಸಿದ್ದು, ಒಬ್ಬ ರನ್ನು ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಇನ್ನೊಬ್ಬರು ಬೆಂಗಳೂರಿ ನಲ್ಲೇ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಿನ್ನೆ ಬೆಂಗಳೂರಿನಿಂದ ಎರಡು ಮೂರು ಲಿಸ್ಟ್ ಬಂತು. ಆರಂಭದಲ್ಲಿ ಜಿಲ್ಲೆಯ ನಾಲ್ಕು ಜನ, 12 ಜನರು ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಂತು. ನಂತರ ಫೆÇೀನ್ ನಂಬರ್ ಮೂಲಕ ಪರಿಶೀಲಿಸಿದಾಗ ನಮ್ಮ ಜಿಲ್ಲೆಯಿಂದ ಇಬ್ಬರು ಮಾತ್ರ ಭಾಗವಹಿಸಿರುವುದು ಖಚಿತವಾಯಿತು. ಈ ಪೈಕಿ ಒಬ್ಬರನ್ನು ಗುರುತಿಸಿ ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿರಿಸಿ ನಿಗಾ ವಹಿಸಲಾಗಿದೆ. ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದರು.

ನಿನ್ನೆ 12 ಜನರ ಲಿಸ್ಟ್ ಸಿಕ್ಕಿತ್ತು. ಅವರು ನಿಜಾಮುದ್ದೀನ್‍ಗೆ ಹೋಗಿರಲಿಲ್ಲ. ಗುಜರಾತಿನ ಗೋದ್ರಾಕ್ಕೆ ಹೋಗಿದ್ದರು. ಮಾ. 13ಕ್ಕೇ ಜಿಲ್ಲೆಗೆ ಬಂದಿದ್ದಾರೆ. ಅವರ ಕ್ವಾರಂಟೈನ್ ಅವಧಿ ಕೂಡ ಮುಗಿದಿದೆ. ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಎಂ.ಸಿ. ರವಿ ಹಾಜರಿದ್ದರು.

ವೈದ್ಯರು, ಅಧಿಕಾರಿ, ಸಿಬ್ಬಂದಿಗೆ ಸರ್ಕಾರಿ ನೌಕರರಿಂದ ಮಾಸ್ಕ್
ಚಾಮರಾಜನಗರ, ಏ.2- ಕೊರೊನಾ ವೈರಸ್ ತಡೆಗಾಗಿ ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ಅಧಿಕಾರಿ, ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘಟನೆ, ಹೋಟೆಲ್ ಮಾಲೀಕರೊಬ್ಬರು ನೆರವು ನೀಡುವ ಮೂಲಕ ಬೆಂಬಲವಾಗಿ ನಿಂತಿ ದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಇಂದು ಕೊರೊನಾ ತಡೆಗಾಗಿ ಕರ್ತವ್ಯ ನಿರ್ವಹಿ ಸುತ್ತಿರುವ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಾಧ್ಯಮ ಪ್ರತಿ ನಿಧಿಗಳಿಗೆ ಉಚಿತವಾಗಿ ಮಾಸ್ಕ್‍ಗಳನ್ನು ವಿತರಿಸಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್, ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಗುರುಲಿಂಗಯ್ಯ ಅವರಿಗೆ ಮಾಸ್ಕ್ ಬಾಕ್ಸ್‍ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಹದೇವ ಸ್ವಾಮಿ. ಗೌರವ ಅಧ್ಯಕ್ಷರಾದ ವಾರೀಶ್, ಖಜಾಂಚಿ ಮಹದೇವಯ್ಯ ಇದ್ದರು.

Translate »