ಲಾಕ್‍ಡೌನ್: ಮೈಸೂರಿನಲ್ಲಿ ಆಶ್ರಯ ಪಡೆದಿರುವವರ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ
ಮೈಸೂರು

ಲಾಕ್‍ಡೌನ್: ಮೈಸೂರಿನಲ್ಲಿ ಆಶ್ರಯ ಪಡೆದಿರುವವರ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ

April 3, 2020

ಅಧಿಕಾರಿಗಳ ಜತೆ ನಂಜರಾಜ ಬಹದ್ದೂರ್ ಕಲ್ಯಾಣಮಂಟಪ, ಯೂತ್‍ಹಾಸ್ಟೆಲ್ ಮೊದಲಾದೆಡೆ ಭೇಟಿ, ಪರಿಶೀಲನೆ

ಮೈಸೂರು,ಏ.2(ಎಂಟಿವೈ)- ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅತಂತ್ರ ರಾಗಿದ್ದ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಿರುವ ನಂಜರಾಜ ಬಹ ದ್ದೂರ್ ಕಲ್ಯಾಣಮಂಟಪ, ಯೂತ್ ಹಾಸ್ಟೆಲ್ ಮೊದಲಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗುರು ವಾರ ಭೇಟಿ ನೀಡಿ ಪರಿಶೀಲಿಸಿದರು.

ನಿರಾಶ್ರಿತರಿಗಾಗಿ ಮೈಸೂರು ಮಹಾ ನಗರ ಪಾಲಿಕೆ ಹಾಗೂ ಮುಡಾ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಆಶ್ರಯ ಕೇಂದ್ರ ಗಳಲ್ಲಿನ ಪರಿಸ್ಥಿತಿ ಅವಲೋಕಿಸುವ ಸಲು ವಾಗಿ ಗುರುವಾರ ಬೆಳಿಗ್ಗೆ ಸಂಸದ ಪ್ರತಾಪ ಸಿಂಹ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ಕಾಂತರಾಜು ಮೊದ ಲಾದ ಅಧಿಕಾರಿಗಳೊಂದಿಗೆ ಸಾಂತ್ವನ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಆಶ್ರಯ ಪಡೆದಿರುವವರ ಜತೆ ಸಮಾ ಲೋಚಿಸಿ ಆತ್ಮಸ್ಥೈರ್ಯ ತುಂಬಿದರು.

ಮೊದಲಿಗೆ ಸಿದ್ದಾರ್ಥ ಬಡಾವಣೆಯ ಸಿಐಟಿಬಿ ಚೌಲ್ಟ್ರಿಗೆ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದಿರುವ ರಾಜಸ್ತಾನದ 162 ಪ್ರವಾಸಿ ಗರ ಆರೋಗ್ಯ ವಿಚಾರಿಸಿದರು. ಏ.14 ರವರೆಗೆ ಲಾಕ್‍ಡೌನ್ ಆಗಿರುವುದರಿಂದ ರಾಜಸ್ತಾನಕ್ಕೆ ಮರಳಲು ಸಾಧ್ಯವಿಲ್ಲ. ಅಲ್ಲಿ ವರೆಗೂ ಇಲ್ಲಿಯೇ ತಂಗಿರಬೇಕು. ನಿಮಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಸಿದ್ಧವಿದೆ. ಜೈನ ಸಮಾಜವೂ ನಿಮಗೆ ನೆರವು ನೀಡುತ್ತಿದೆ. ಧೃತಿಗೆಡದೆ ಇನ್ನು 12 ದಿನ ಇಲ್ಲೇ ಇರಿ. ನಿಮ್ಮ ಆರೋಗ್ಯ ಕಾಪಾಡುವ ಹೊಣೆ ನಮ್ಮದು ಎಂದು ಭರವಸೆ ನೀಡಿದರು.

ಉಪಾಹಾರ ಬಡಿಸಿದರು: ನಂಜರಾಜ ಬಹದ್ದೂರ್ ಕಲ್ಯಾಣಮಂಟಪದಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ತೆರಳಿದ ಸಚಿವರು, ಅಲ್ಲಿ ತಂಗಿದ್ದವರಿಗೆ ಉಪಾಹಾರ ಬಡಿಸಿ ದರು. ಎಲ್ಲರಿಗೂ ಸೋಪ್, ಮಾಸ್ಕ್, ಸ್ಯಾನಿ ಟೈಸರ್ ವಿತರಿಸಿದರು. ಬಳಿಕ, ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಶಲೋಪರಿ: ಬಳಿಕ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್‍ನಲ್ಲಿ ತಂಗಿ ರುವ ಮಹಾರಾಷ್ಟ್ರ, ಆಂಧ್ರಪ್ರದೇಶ, ಬೆಂಗಳೂರು, ಮುಂಬೈ, ಕೊಳ್ಳೇಗಾಲ, ಚಾಮರಾಜ ನಗರ, ಕನಕಪುರ, ಮಳವಳ್ಳಿ ನಿವಾಸಿಗಳ ಕುಶಲೋಪರಿ ವಿಚಾರಿಸಿದರು.

ಮೈಸೂರಿಗೆ ಪ್ರವಾಸ ಬಂದಿದ್ದ ರಾಜ ಸ್ತಾನದ 162 ಮಂದಿ ವಾಪಸಾಗುವಾಗ ಮಹಾರಾಷ್ಟ್ರ ಗಡಿ ಬಂದ್ ಆಗಿದ್ದ ಪರಿ ಣಾಮ ಮೈಸೂರಿಗೆ ವಾಪಸ್ ಬಂದರು. ಅವರಿಗೆ ಸಿದ್ದಾರ್ಥನಗರದ ಸಿಐಟಿಬಿ ಕಲ್ಯಾಣ ಮಂಟಪದಲ್ಲಿ ಆಶ್ರಯ ನೀಡಲಾಗಿದೆ. ಆರೋಗ್ಯ ತಪಾಸಣೆ ನಡೆಸಿದ್ದು, ಎಲ್ಲರೂ ಆರೋಗ್ಯದಿಂದ ಇದ್ದಾರೆ. ಇಂದು ಮೂವ ರಿಗೆ ಸಣ್ಣದಾಗಿ ಆರೋಗ್ಯ ಸಮಸ್ಯೆ ಕಂಡು ಬಂದಿತು. ಅವರಿಗೆ ಚಿಕಿತ್ಸೆ ಕೊಡಿಸಲಾ ಗಿದೆ. ಜೈನ ಸಮುದಾಯ ಮೊದಲಾದ ಸಂಘ ಸಂಸ್ಥೆಗಳು ನೆರವು ನೀಡುತ್ತಿವೆ. ನಂಜರಾಜ ಬಹದ್ದೂರ್ ಕಲ್ಯಾಣಮಂಟಪ ದಲ್ಲಿ 217 ಮಂದಿ, ಯೂತ್ ಹಾಸ್ಟೆಲ್ ನಲ್ಲಿ 450 ಮಂದಿಗೆ ಸದ್ಯ ಆಶ್ರಯ ನೀಡ ಲಾಗಿದೆ. ದಿನದ 3 ಹೊತ್ತು ಊಟ, ತಿಂಡಿ ನೀಡಲಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡ ಲಾಗಿದೆ. ಆರೋಗ್ಯ ತಪಾಸಣೆ ಮಾಡ ಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ವಿವರ ನೀಡಿದರು.

ಚಾಮುಂಡಿಬೆಟ್ಟಕ್ಕೆ ಪ್ರವಾಸ ಬಂದು ಈಗ ನಿರಾಶ್ರಿತರ ಕೇಂದ್ರ ಸೇರಿರುವ ಬೆಂಗ ಳೂರಿನ ಮಾಗಡಿ ರಸ್ತೆಯ ಕುಟುಂಬ, ಮುರಿದ ಮೂಳೆಗೆ ಚಿಕಿತ್ಸೆ ಪಡೆಯಲು ಬಂದು ಲಾಕ್‍ಡೌನ್‍ನಿಂದಾಗಿ ಅತಂತ್ರನಾ ಗಿದ್ದ ಕನಕಪುರದ ನಿವಾಸಿ, ಕೆಲಸದ ನಿಮಿತ್ತ ಮಹಾರಾಷ್ಟ್ರದಿಂದ ಬಂದು ಬಸ್, ರೈಲು ಸಂಚಾರವಿಲ್ಲದೆ ಕಂಗೆಟ್ಟಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಿದ ಸಚಿವರು, ಏ.14ರ ನಂತರ ನಿಮ್ಮ ಊರಿಗೆ ಹೋಗಲು ಅವಕಾಶ ದೊರೆಯುತ್ತದೆ. ಅಲ್ಲಿಯವರೆಗೂ ಇಲ್ಲಿಯೇ ತಂಗಿರಿ ಎಂದು ಸಲಹೆ ನೀಡಿದರು.

ಈ ಸಂದರ್ಭ ಪಾಲಿಕೆ ಎಡಿಸಿ ಶಶಿ ಕುಮಾರ್, ಆರೋಗ್ಯಾಧಿಕಾರಿ ಜಯಂತ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮುಖಂಡ ರಾದ ಪ್ರದೀಪ್, ಮಹೇಶ್ ಮತ್ತಿತರಿದ್ದರು.

3 ತಿಂಗಳಿಂದ ಪಿಂಚಣಿ ಇಲ್ಲ!
ಯೂತ್ ಹಾಸ್ಟೆಲ್‍ನಲ್ಲಿ ಆಶ್ರಯ ಪಡೆದಿರುವ ಗ್ಯಾಂಗ್ರಿನ್ ಹಾಗೂ ಪಾಶ್ರ್ವವಾಯು ಸಮಸ್ಯೆಗೆ ತುತ್ತಾಗಿರುವ ವ್ಯಕ್ತಿಯೊಬ್ಬನನ್ನು ಕಂಡು ಸಚಿವ ಸೋಮಣ್ಣ ಆರೋಗ್ಯ ವಿಚಾರಿಸಿ, `ದಿನಾ ಎಷ್ಟು (ಮದ್ಯ) ಕುಡಿಯುತ್ತಿದ್ದೆ?’ ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲೆ ಮಳವಳ್ಳಿಯ ಆ ವ್ಯಕ್ತಿ, `ನಾನು ಕುಡಿಯಲ್ಲ ಸ್ವಾಮಿ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಪಘಾತದಿಂದ ಈ ಸ್ಥಿತಿಗೆ ಬಂದಿದ್ದೇನೆ. ನಾನು ಚೆನ್ನಾಗಿದ್ದಾಗ ಕುಟುಂಬ ಜತೆಗೇ ಇತ್ತು. ಈಗ ಯಾರೂ ಇಲ್ಲ. ಸರ್ಕಾರದ ಅಂಗವಿಕಲರ ಪಿಂಚಣಿ ಯಿಂದ ಹೇಗೋ ಜೀವನ ಸಾಗಿಸುತ್ತಿದ್ದೆ. 3 ತಿಂಗಳಿಂದ ಆ ಪಿಂಚಣಿಯೂ ಬಂದಿಲ್ಲ. ಇಂಥ ಸ್ಥಿತಿಯಲ್ಲಿ ಹೇಗೆ ಬದುಕುವುದು? ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಪಿಂಚಣಿ ಬರುತ್ತದೆ. ನಿನಗೆ ಚಿಕಿತ್ಸೆಯನ್ನೂ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಗ್ಯಾಂಗ್ರಿನ್‍ನಿಂದ ಕೀವು ಸೋರುತ್ತಿದ್ದ ಕಾಲಿಗೆ ಚಿಕಿತ್ಸೆ ಕೊಡಿಸುವಂತೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರಿಗೆ ಸೂಚನೆ ನೀಡಿದರು.

Translate »