Tag: Coronavirus scare

ನಿರಾಶ್ರಿತರಿಗೆ ಊಟ-ವಸತಿ, ಮನೆ ಮನೆಗೆ ಪಡಿತರ, ಹಣ್ಣು-ತರಕಾರಿ ತಲುಪಿಸಿ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸಲಹೆ
ಮೈಸೂರು

ನಿರಾಶ್ರಿತರಿಗೆ ಊಟ-ವಸತಿ, ಮನೆ ಮನೆಗೆ ಪಡಿತರ, ಹಣ್ಣು-ತರಕಾರಿ ತಲುಪಿಸಿ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸಲಹೆ

April 2, 2020

ಮೈಸೂರು, ಏ.1(ಎಂಕೆ)- ನಿರಾಶ್ರಿತರಿಗೆ ಊಟ, ವಸತಿ ನೀಡುವುದರ ಜತೆಗೆ ಮನೆ ಮನೆಗೆ ಹಣ್ಣು-ತರಕಾರಿ ಮತ್ತು ಪಡಿತರ ವಿತರಣೆ, ವಾರದಲ್ಲಿ ಮೂರು ದಿನ ಮಟನ್ ಮಾರಾಟಕ್ಕೆ ಅವಕಾಶ ನೀಡುವುದರೊಂದಿಗೆ ಮೈಸೂರು ನಗರದ ಎಲ್ಲಾ ಬಡಾವಣೆಗಳಿಗೂ ರಾಸಾಯ ನಿಕ ಸಿಂಪಡಣೆ ಮೂಲಕ ಸ್ವಚ್ಛತೆ ಕಾಪಾಡಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ, ಮುಡಾ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮನೆಯಿ…

ಹೊಸ ಮಾರುಕಟ್ಟೆಗಳಿಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ
ಮೈಸೂರು

ಹೊಸ ಮಾರುಕಟ್ಟೆಗಳಿಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ

April 2, 2020

ಲಲಿತಮಹಲ್, ದೊಡ್ಡಕೆರೆ ಮೈದಾನದಲ್ಲಿ ಮುಗಿಬಿದ್ದ ವ್ಯಾಪಾರಸ್ಥರು ಬನ್ನಿಮಂಟಪ, ವಿಜಯನಗರ ಸೇರಿ 5 ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ಮೈಸೂರು,ಏ.1(ಎಂಟಿವೈ)- ಒಂದೇ ಸ್ಥಳದಲ್ಲಿ ಹಣ್ಣು-ತರಕಾರಿ ಖರೀದಿಸಲು ಜನರು ಮುಗಿಬೀಳುವುದನ್ನು ತಪ್ಪಿಸಲು ಮೈಸೂರಿನ 7 ಸ್ಥಳಗಳಲ್ಲಿ ಹೊಸದಾಗಿ ಆರಂಭಿಸಿದ ತಾತ್ಕಾಲಿಕ ಸಗಟು ಮಾರು ಕಟ್ಟೆಗಳಲ್ಲಿ ಮೊದಲ ದಿನವಾದ ಬುಧ ವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 7 ಮಾರುಕಟ್ಟೆಗಳಲ್ಲಿ ಲಲಿತಮಹಲ್ ಮೈದಾನ, ದೊಡ್ಡಕೆರೆ ಮೈದಾನದ ಮಾರು ಕಟ್ಟೆಯಲ್ಲಿ ವಹಿವಾಟು ಭರ್ಜರಿಯಾಗಿ ನಡೆದರೆ, 3 ಮಾರುಕಟ್ಟೆಗಳಲ್ಲಿ ಒಬ್ಬ ರೈತರೂ ತರಕಾರಿ ಮಾರಲು ಬಂದಿರ ಲಿಲ್ಲ….

ಚಿಕ್ಕಗಡಿಯಾರ ಸುತ್ತಲಿನ ಅಂಗಡಿಗಳೆದುರು ಜನದಟ್ಟಣೆ
ಮೈಸೂರು

ಚಿಕ್ಕಗಡಿಯಾರ ಸುತ್ತಲಿನ ಅಂಗಡಿಗಳೆದುರು ಜನದಟ್ಟಣೆ

April 2, 2020

`ಅಂತರ ಕಾಯ್ದುಕೊಳ್ಳಿ’ ಎಂದು ಧ್ವನಿವರ್ಧಕದಲ್ಲಿ ಪೊಲೀಸರು ಎಚ್ಚರಿಸಿದರೂ ಜಗ್ಗದ ಜನ ಮೈಸೂರು,ಏ.1(ಎಂಟಿವೈ)- ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಂತೆಪೇಟೆ ಹಾಗೂ ಚಿಕ್ಕ ಗಡಿಯಾರ ವೃತ್ತದ ಸುತ್ತ್ತಲಿನ ಅಂಗಡಿಗಳ ಮುಂದೆ ಬುಧವಾರ ಬೆಳಿಗ್ಗೆ ನೂರಾರು ಗ್ರಾಹಕರು ಸೇರಿದ್ದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಜನದಟ್ಟಣೆ ಉಂಟಾಗಿತ್ತು. ಗ್ರಾಹಕರು ಒತ್ತಟ್ಟಿನಲ್ಲಿ ನಿಂತಿದ್ದ ಪರಿಣಾಮ, `ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ದೇವರಾಜ ಸಂಚಾರ ಠಾಣೆ ಪೊಲೀಸರು ಧ್ವನಿವರ್ಧಕದಲ್ಲಿ ಹೇಳುತ್ತಲೇ ಹೈರಾಣಾದರು. ನಿತ್ಯ ಬಳಕೆ ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ನಿತ್ಯವೂ ಬೆಳಿಗ್ಗೆ…

ಸೋಂಕು ಹರಡದಂತೆ ಚೆಲುವಾಂಬ, ಕೆಆರ್ ಆಸ್ಪತ್ರೆಗೆ ರಾಸಾಯನಿಕ ಸಿಂಪಡಣೆ
ಮೈಸೂರು

ಸೋಂಕು ಹರಡದಂತೆ ಚೆಲುವಾಂಬ, ಕೆಆರ್ ಆಸ್ಪತ್ರೆಗೆ ರಾಸಾಯನಿಕ ಸಿಂಪಡಣೆ

April 2, 2020

ಮೈಸೂರು, ಏ.1(ಆರ್‍ಕೆ)-ಕೋವಿಡ್-19 (ಕೊರೊನಾ ವೈರಸ್) ಮಾರಣಾಂತಿಕ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿ ಸಿದ್ದು, ಮೈಸೂರು ಜಿಲ್ಲೆಯಲ್ಲೂ ಅದು ರುದ್ರ ತಾಂಡವವಾಡುತ್ತಿರುವ ಹಿನ್ನೆಲೆ ಯಲ್ಲಿ ಅಧಿಕ ರೋಗಿಗಳಿರುವ ದೊಡ್ಡಾ ಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ ರೋಗ ನಿರೋಧಕ ರಾಸಾಯನಿಕ ನಿರಂತರ ವಾಗಿ ಸಿಂಪಡಿಸಲಾಗುತ್ತಿದೆ. ಮೂವರು ಕೋವಿಡ್-19 ಸೋಂಕಿತರ ನ್ನಿರಿಸಿ ಚಿಕಿತ್ಸೆ ನೀಡುತ್ತಿದ್ದ ಕೆ.ಆರ್.ಆಸ್ಪತ್ರೆ ನ್ಯೂ ಐಪಿಡಿ-ಓಪಿಡಿ ಬ್ಲಾಕ್ (ಜಯದೇವ ಹೃದ್ರೋಗ ಘಟಕವಿದ್ದ ಕಟ್ಟಡ)ನ ವಾರ್ಡು ಗಳಿಂದ ಸೋಮವಾರ ಮೇಟಗಳ್ಳಿಯ ಜಿಲ್ಲಾ ಆಸ್ಪತ್ರೆಗೆ ಸೋಂಕಿತರನ್ನು ಸ್ಥಳಾಂತರಿ ಸಿದ ನಂತರ ಆ…

ಮಂಡ್ಯ ಸಕ್ಕರೆ ಕಾರ್ಖಾನೆಗಳ ಸ್ಪಿರಿಟ್‍ನಿಂದ ಸ್ಯಾನಿಟೈಸರ್ ಉತ್ಪಾದನೆ
ಮಂಡ್ಯ

ಮಂಡ್ಯ ಸಕ್ಕರೆ ಕಾರ್ಖಾನೆಗಳ ಸ್ಪಿರಿಟ್‍ನಿಂದ ಸ್ಯಾನಿಟೈಸರ್ ಉತ್ಪಾದನೆ

April 2, 2020

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ. ಮಂಡ್ಯ, ಏ.1(ನಾಗಯ್ಯ)- ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳ ಪೈಕಿ ಸದ್ಯ 3 ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರ್ಖಾನೆ ಗಳಲ್ಲಿ ತಯಾರಾಗುವ ರೆಕ್ಟಿಫೈಡ್ ಸ್ಪಿರಿಟ್ ನಿಂದ ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ನಗರದಲ್ಲಿ ಕೊಪ್ಪ ಎನ್.ಎಸ್.ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ನೀಡಿದ 500 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ಸ್ವೀಕರಿಸಿ ಅವರು ಮಾತನಾಡಿದರು. ಕೊಪ್ಪ ಎನ್.ಎಸ್.ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ನೀಡಿದ 500 ಲೀಟರ್…

ಕೊಳ್ಳೇಗಾಲದಲ್ಲಿ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ರೌಂಡ್‍ಅಪ್
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ರೌಂಡ್‍ಅಪ್

April 2, 2020

ಎಪಿಎಂಸಿ, ಉಪವಿಭಾಗ ಆಸ್ಪತ್ರೆ, ಇಂದಿರಾ ಕ್ಯಾಂಟಿನ್ ಪರಿಶೀಲನೆ ಕೊಳ್ಳೇಗಾಲ, ಏ.1(ಎನ್ ನಾಗೇಂದ್ರ)- ಕೃಷಿ ಉತ್ಪನ್ನ ಮಾರುಕಟ್ಟೆ (ತರಕಾರಿ ಮಾರುಕಟ್ಟೆ) ಪ್ರಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸಚಿವರ ಜೊತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಹನೂರು ಶಾಸಕ ಆರ್ ನರೇಂದ್ರ, ಎಸ್ಪಿ ಆನಂದ್ ಕುಮಾರ್, ತಹಸೀಲ್ದಾರ್ ಕುನಾಲ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ಡಿವೈಎಸ್ಪಿ ನವೀನ್ ಕುಮಾರ್, ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸೈ…

ಕೊರೊನಾ ವೈರಸ್‍ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ
ಮೈಸೂರು

ಕೊರೊನಾ ವೈರಸ್‍ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ

April 1, 2020

ಪೊಲೀಸರು, ನಿರ್ಗತಿಕರು, ಪೌರಕಾರ್ಮಿಕರಿಗೆ ವಿತರಿಸುವ ಉದ್ದೇಶ ಮೈಸೂರು, ಮಾ.31(ಎಂಕೆ)- ಮಾರಕ ಕೊರೊನಾ(ಕೋವಿಡ್-19) ವೈರಸ್ ನಿಂದ ರಕ್ಷಿಸಿಕೊಳ್ಳಲು ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ‘ಕೊರೊನಾ ರಕ್ಷಣಾ ಕಿಟ್’ ತಯಾರಿ ನಡೆಯುತ್ತಿದ್ದು, 2000ಕ್ಕೂ ಹೆಚ್ಚು ಕಿಟ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು, ವೈದ್ಯ ಕೀಯ ಸಿಬ್ಬಂದಿ, ಪೌರಕಾರ್ಮಿಕರು, ಬಡ ವರು, ಹಣ್ಣು ತರಕಾರಿ ವ್ಯಾಪಾರಿಗಳು, ನಿರ್ಗತಿಕರ ಆರೋಗ್ಯ ದೃಷ್ಟಿಯಿಂದ ಉಚಿತ ವಾಗಿ ವಿತರಣೆ ಮಾಡಲು ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ರಕ್ಷಣಾ ಕಿಟ್ ಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ 500 ಕಿಟ್‍ಗಳನ್ನು ನಗರದ ಕೆಲವು…

ಕೊಡಗಿನಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್
ಕೊಡಗು

ಕೊಡಗಿನಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್

April 1, 2020

ಮಡಿಕೇರಿ, ಮಾ.31- ಮಡಿಕೇರಿಯಲ್ಲಿ ಮಂಗಳವಾರವೂ ಲಾಕ್‍ಡೌನ್ ಆದೇಶ ಕಟ್ಟು ನಿಟ್ಟಾಗಿ ಪಾಲನೆಯಾಗಿದೆ. ದಿನ ದಿಂದ ದಿನಕ್ಕೆ ಜಿಲ್ಲೆಯ ಜನರೂ ಕೂಡ ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿಗೊಂಡಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದಾರೆ. ಕೊರೊನಾ ಸೋಂಕು ತಗುಲಿರುವ ಒಂದು ಪ್ರಕರಣ ಕೊಡಗು ಜಿಲ್ಲೆಯಲ್ಲಿ ದೃಢಪಟ್ಟ ಬಳಿಕ ಕೊಡಗು ಜಿಲ್ಲಾಡಳಿತ ಸೋಂಕು ವ್ಯಾಪಿಸದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಕೂಡ ಕೈಜೋಡಿಸಿದ್ದಾರೆ. ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ಹಾಲು ಮತ್ತು…

ಮೈಸೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
ಮೈಸೂರು

ಮೈಸೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ

March 31, 2020

* ಕ್ವಾರಂಟೇನ್ ನಲ್ಲಿರುವವರಿ ಮನೆಯಿಂದ ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲು * ಸಚಿವ ವಿ.ಸೋಮಣ್ಣ ಎಚ್ಚರಿಕೆ ಮೈಸೂರು,ಮಾ.30( MTY ) – ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಮತ್ತೆ ನಾಲ್ವರು ನೌಕರರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ, ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗಿದ್ದು ನಿಯಮ ಉಲ್ಲಂಘಿಸಿ ಕ್ವಾರಂಟೇನ್ ನಲ್ಲಿರುವವರು ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಮೈಸೂರು ಜಿಲ್ಲ‍ಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಚ್ಚರಿಸಿದ್ದಾರೆ. ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ…

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ
ಮಂಡ್ಯ

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ

March 30, 2020

* ಕೊರೊನಾ ಭೀತಿಯಿಂದ ಕ್ಲಿನಿಕ್ ಗಳ ಭಾಗಿಲನ್ನೇ ತೆರೆಯದ ಖಾಸಗಿ ವೈದ್ಯರು ಮಂಡ್ಯ,ಮಾ.29 ; ಇಡೀ ದೇಶವನ್ನೇ ಲಾಕ್ ಡೌನ್ ಮಾಡುವಷ್ಟರ ಮಟ್ಟಿಗೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ರೋಗಿಗಳ ಪಾಲಿನ ದೇವಸ್ಥಾನಗಳೆನಿಸಿ ಕೊಂಡಿರುವ ಆಸ್ಪತ್ರೆಗಳಿಗೂ ಕಂಠಕ ತಂದಿಟ್ಟಿದೆ. ಹೌದು, ಇದೀಗ ಆಸ್ಪತ್ರೆಗಳಿಗೂ “ಕೊರೊನಾ’’ ದೊಡ್ಡ ತಲೆನೋವು ತಂದಿಟ್ಟಿದೆ, ಕೊರೊನಾ ಸೋಂಕಿತರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೇ “ ಕೇಂದ್ರ ‘’ತೆರೆದಿರುವುದರಿಂದ ಕೊರೊನಾ ಅಂಟುವ ಭೀತಿಯಿಂದ ಇತರೆ ರೋಗಿಗಳು ಮಂಡ್ಯದ ಸರ್ಕಾರಿ ಆಸ್ಪತ್ರೆಯತ್ತ ಕಾಲಿಡೋದಕ್ಕೂ ಭಯ ಪಡುತ್ತಿದ್ದಾರೆ….

1 2
Translate »