ಕೊಳ್ಳೇಗಾಲದಲ್ಲಿ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ರೌಂಡ್‍ಅಪ್
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ರೌಂಡ್‍ಅಪ್

April 2, 2020

ಎಪಿಎಂಸಿ, ಉಪವಿಭಾಗ ಆಸ್ಪತ್ರೆ, ಇಂದಿರಾ ಕ್ಯಾಂಟಿನ್ ಪರಿಶೀಲನೆ
ಕೊಳ್ಳೇಗಾಲ, ಏ.1(ಎನ್ ನಾಗೇಂದ್ರ)- ಕೃಷಿ ಉತ್ಪನ್ನ ಮಾರುಕಟ್ಟೆ (ತರಕಾರಿ ಮಾರುಕಟ್ಟೆ) ಪ್ರಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಸಚಿವರ ಜೊತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಹನೂರು ಶಾಸಕ ಆರ್ ನರೇಂದ್ರ, ಎಸ್ಪಿ ಆನಂದ್ ಕುಮಾರ್, ತಹಸೀಲ್ದಾರ್ ಕುನಾಲ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ಡಿವೈಎಸ್ಪಿ ನವೀನ್ ಕುಮಾರ್, ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸೈ ರಾಜೇಂದ್ರ, ಅಶೋಕ್ ಸೇರಿದಂತೆ ಹಲವರು ಸಾಥ್ ನೀಡಿದರು. ಕೊರೊನಾ ತಡೆ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಹಾಗೂ ಪೆÇಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಇದೇ ವೇಳೆ ಶ್ಲಾಘಿಸಿದರು. ತರಕಾರಿ ಮಾರಾಟಗಾರರ ಸಮಸ್ಯೆಗಳ ಬಗ್ಗೆಯೂ ಇದೇ ವೇಳೆ ಸಚಿವರು ಮಾಹಿತಿ ಪಡೆದರು.

ಸೊಪ್ಪು ಮಾರಾಟ ಮಾಡುವ ಮಹಿಳೆಯ ಉಭಯ ಕುಶಲೋಪರಿ ವಿಚಾರಿಸಿದ ಸಚಿವರು, ಏಕೆ ಆರೀತಿ ಕ್ರಮ ಕೈಗೊಳ್ಳಲಾಗಿದೆ ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದರು. ಸಚಿವರ ಪ್ರಶ್ನೆಗೆ ಉತ್ತರಿಸಿದ ಮಹಿಳೆ ಸ್ವಾಮಿ ಕೊರೊನಾ ಕಾಯಿಲೆ ಎಲ್ಲರಿಗೂ ಬರದಿರಲಿ ಎಂದು ಕ್ರಮಕೈ ಗೊಳ್ಳಲಾಗಿದೆ ಎಂದು ಉತ್ತರಿಸಿದಾಗ ಸಚಿವರು ನಗುತ್ತಲೆ ಮುಂದೆ ಸಾಗಿದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಇಂದಿರಾ ಕ್ಯಾಂಟೀನ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಕೊರೊನಾ (ಜ್ವರ) ತಪಾಸಣಾ ಕೇಂದ್ರಕ್ಕೂ ಬೇಟಿ ನೀಡಿ ಪರಿಶೀಲಿಸಿದರು.

ಮೊದಲಿಗೆ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ತಿಂಡಿ ತಿನ್ನಲು ಸರತಿ ಸಾಲಿನಲ್ಲಿ ನಿಂತಿದ್ದ ಸಂಜಯ್ ಎಂಬ ಬಾಲಕನ ಉಭಯ ಕುಶಲೋಪರಿ ವಿಚಾರಿಸಿದರು. ದಿಡೀರ್ ಎಂದು ಸಚಿವರು ಕುಶಲೋಪರಿ ವಿಚಾರಿಸು ತ್ತಿದ್ದಂತೆ ಯುವಕ ತಬ್ಬಿಬ್ಬಾದ ಘಟನೆ ಸಹಾ ಜರುಗಿತು. ತಿಂಡಿ ತಿನ್ನುತ್ತಿದ್ದ

ಕೆಲವರನ್ನು ಮಾತನಾಡಿಸಿದ ಸಚಿವರು, ಕ್ಯಾಂಟಿನ್ ಸೌಲಭ್ಯಗಳ ಹಾಗೂ ತಿಂಡಿ ಚನ್ನಾಗಿದೆಯೇ ಎಂದು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೆಲವರು ಇಲ್ಲಿ ಇಡ್ಲಿ ಬಿಟ್ಟು ಬೇರೆನೂ ಸಿಗಲ್ಲ ಎಂದು ದೂರಿದರು.

ಜ್ವರ ತಪಾಸಣಾ ಕೇಂದ್ರಕ್ಕೆ ಭೇಟಿ: ಸಚಿವರು ನೂತನ ಕಟ್ಟಡದಲ್ಲಿ ತೆರೆಯಲಾಗಿ ರುವ ಜ್ವರ ತಪಾಸಣಾ ಕೇಂದ್ರಕ್ಕೂ ಬೇಟಿ ನೀಡಿ ಅಲ್ಲಿ ಕೈಗೊಳ್ಳಲಾಗಿರುವ ವ್ಯವಸ್ಥೆಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದರು. ಇದೇ ವೇಳೆ ಮುಖ್ಯ ವೈದ್ಯಾಧಿಕಾರಿ ಡಾ. ಗಣೇಶ್ ಕುಮಾರ್ ಅವರು ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ, ತುರ್ತು ಸೇವೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಜ್ವರ ತಪಾಸಣೆಗಾಗಿ ಪ್ರತ್ಯೇಕ ವಾರ್ಡ್ (ಕೊರೋನಾ ವೈರಸ್) ಮೀಸಲಿಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ನಂತರ ಪ್ರವಾಸಿ ಮಂದಿರದಲ್ಲಿ ಕರೆಯ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಸಚಿವರು, ಇಂದಿರಾ ಕ್ಯಾಂಟಿನ್ ನಲ್ಲಿ ಕೇವಲ ಇಡ್ಲಿ ಮಾತ್ರ ದಿನಂಪ್ರತಿ ನೀಡಲಾಗತ್ತಿದೆ ಎಂದು ಹಲವರು ದೂರು ನೀಡಿದ್ದಾರೆ. ಹಾಗಾಗಿ ಮೆನುವಿನಂತೆ ಆಹಾರ ನೀಡಲು ಸೂಚಿಸಲಾಗಿದೆ. ಮಾರುಕಟ್ಟೆಯಲ್ಲೂ ಸಹಾ ತರಕಾರಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಕ್ರಮವಹಿಸಲು ಆಯಾ ದಿನದ ದರ ಪ್ರಕಟಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

\

Translate »