ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ.
ಮಂಡ್ಯ, ಏ.1(ನಾಗಯ್ಯ)- ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳ ಪೈಕಿ ಸದ್ಯ 3 ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರ್ಖಾನೆ ಗಳಲ್ಲಿ ತಯಾರಾಗುವ ರೆಕ್ಟಿಫೈಡ್ ಸ್ಪಿರಿಟ್ ನಿಂದ ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದಲ್ಲಿ ಕೊಪ್ಪ ಎನ್.ಎಸ್.ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ನೀಡಿದ 500 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ಸ್ವೀಕರಿಸಿ ಅವರು ಮಾತನಾಡಿದರು. ಕೊಪ್ಪ ಎನ್.ಎಸ್.ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ನೀಡಿದ 500 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ಪೈಕಿ 250 ಲೀಟರ್ ಪ್ರಮಾಣವನ್ನು ಚಿಕ್ಕಮಂಗಳೂರು ಜಿಲ್ಲೆಗೆ ನೀಡುತ್ತಿದ್ದೇವೆ. ಅದನ್ನು ಚಿಕ್ಕಮಂಗ ಳೂರಿನಲ್ಲಿ ವೈಜ್ಞಾನಿಕವಾಗಿ ಸ್ಯಾನಿಟೈಸರ್ ತಯಾರು ಮಾಡಿ ಸಾರ್ವಜನಿಕರಿಗೆ, ಆರೋಗ್ಯ ವೃತ್ತಿಯಲ್ಲಿರುವವರಿಗೆ ಮತ್ತು ಕೋವಿಡ್-19 ನಿಯಂತ್ರಣ ಮಾಡಬಹುದಾದ ಇತರ ಅಧಿಕಾರಿಗಳಿಗೆ ನೀಡಲಾಗುತ್ತದೆ. ಪ್ರಥಮ ವಾಗಿ ಇಂತಹ ವ್ಯವಸ್ಥೆ ಮಂಡ್ಯ ಜಿಲ್ಲೆಯಲ್ಲಿ ಪ್ರಾರಂಭವಾಗಿ ಇತರ ಜಿಲ್ಲೆಯಲ್ಲು ಇದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ ವಿದೇಶ ದಿಂದ ಬಂದಂತಹ 142 ಮಂದಿ ಯನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಮತ್ತು ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 8 ಜನರನ್ನು ಐಸೋಲೇಷನ್ ವಾರ್ಡ್‍ನಲ್ಲಿರಿಸಿ ಪ್ರತಿದಿನ ನಿಗಾ ವಹಿಸಲಾಗಿದೆ. ಇಲ್ಲಿಯ ವರೆಗೂ ಪರಿಶೀಲನೆ ಮಾಡಿದಂತಹ ಒಟ್ಟು 8 ಪ್ರಕರಣಗಳಲ್ಲೂ ಕೂಡ ಕೊರೊನ ವೈರಸ್ ನೆಗೆಟಿವ್ ಬಂದಿದ್ದು, ಸಾರ್ವಜ ನಿಕರು ಆತಂಕಕ್ಕೆ ಒಳಗಾಗ ಬಾರದು ಎಂದು ತಿಳಿಸಿದರು. ಕೋವಿಡ್-19 ಯಾವುದೇ ಸಂದರ್ಭದಲ್ಲಿ ಹರಡುವ ಸಾಧ್ಯತೆ ಇರುವುದ ರಿಂದ ಸಾರ್ವಜನಿಕರೆಲ್ಲರೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತರಕಾರಿ ಮಾರುಕಟ್ಟೆ ಹಾಗೂ ಇತರ ಪ್ರದೇಶ ಗಳಲ್ಲಿ ಗುಂಪು ಗುಂಪಾಗಿ ಸೇರಿ ಸಮಸ್ಯೆಯನ್ನು ಉಂಟು ಮಾಡಬಾರದು ಎಂದರು.
ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರು ಕನಿಷ್ಠ 1 ಮೀಟರಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೋವಿಡ್-19ನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುಂದಾಗಬೇಕು, ಕೊರೊನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾ ಧಿಕಾರಿ ಟಿ.ಕೆ ಹರೀಶ್, ಅಬಕಾರಿ ಉಪನಿರೀ ಕ್ಷಕ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.