ಸೂಯೆಜ್‍ಫಾರಂ ಕಸದ ರಾಶಿಗೆ ಬೆಂಕಿ; 9 ಗಂಟೆ ಬಳಿಕ ಶಮನ
ಮೈಸೂರು

ಸೂಯೆಜ್‍ಫಾರಂ ಕಸದ ರಾಶಿಗೆ ಬೆಂಕಿ; 9 ಗಂಟೆ ಬಳಿಕ ಶಮನ

April 2, 2020

ಮೈಸೂರು,ಏ.1(ಎಸ್‍ಪಿಎನ್)-ಮೈಸೂರಿನ ವಿದ್ಯಾರಣ್ಯಪುರಂ ಸೂಯೆಜ್ ಫಾರಂನಲ್ಲಿರುವ ಕಸದ ರಾಶಿಗೆ ಬುಧವಾರ ಬೆಳಿಗ್ಗೆ 11ರ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಸತತ 9 ಗಂಟೆಗಳ ಪರಿಶ್ರಮದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕಸದ ರಾಶಿಗೆ ಬೆಂಕಿ ಬಿದ್ದಿರುವ ಬಗ್ಗೆ ಸಾರ್ವಜನಿಕರೊಬ್ಬರು ಸರಸ್ವತಿಪುರಂ ಅಗ್ನಿಶಾಮಕ ದಳ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 5 ಅಗ್ನಿಶಾಮಕ ಟ್ಯಾಂಕರ್‍ಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಬೆಂಕಿ ನಂದಿಸಿದರು. ಸರಸ್ವತಿಪುರಂನ 16 ಸಿಬ್ಬಂದಿ, ಬನ್ನಿಮಂಟಪ ಹಾಗೂ ಹೆಬ್ಬಾಳದ ತಲಾ 6 ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು. ಬೆಂಕಿ ನಂದಿಸಲು 4500 ಲೀ. ಸಾಮಥ್ರ್ಯದ ಟ್ಯಾಂಕರ್‍ನಲ್ಲಿ 10 ಬಾರಿ, 9500 ಲೀ. ಸಾಮಥ್ರ್ಯದ ಟ್ಯಾಂಕರ್ ಹಾಗೂ 16 ಸಾವಿರ ಲೀ. ಸಾಮಥ್ರ್ಯದ ಟ್ಯಾಂಕರ್‍ನಲ್ಲಿ ತಲಾ 2 ಬಾರೀ ನೀರನ್ನು ತಂದು ಬಳಸಲಾಗಿದೆ ಎಂದು ಠಾಣಾಧಿಕಾರಿ ರಾಜು `ಮೈಸೂರು ಮಿತ್ರ’ನಿಗೆ ವಿವರಿಸಿದ್ದಾರೆ. ಈ ವೇಳೆ ಅಗ್ನಿಶಾಮಕ ದಳದ ಅಧಿಕಾರಿ ನಾಗರಾಜ್ ಅರಸ್ ಸ್ಥಳದಲ್ಲಿದ್ದರು.

Translate »