ಡಿಸಿಎಂ ಡಾ. ಅಶ್ವತ್ಥನಾರಾಯಣರಿಗೆ ಒಪ್ಪಿಗೆ ಪತ್ರ ಸಲ್ಲಿಸಿದ ಆಸ್ಪತ್ರೆ ಆಡಳಿತ ಮಂಡಳಿ
ಬೆಂಗಳೂರು, ಏ.1(ಕೆಎಂಶಿ)- ಕೋವಿಡ್-19 ಚಿಕಿತ್ಸೆಗೆ ಸರ್ಕಾರದ ಜತೆ ಕೈ ಜೋಡಿಸಿರುವ ಸೆಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆ, 200 ಹಾಸಿಗೆಯ ಐಸೋ ಲೇಷನ್ ವಾರ್ಡ್ ಮೀಸಲಿಟ್ಟು ಸೇವೆ ಒದಗಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಪೌಲ್ ಪರತಜಮ್ ಅವರು ಕೊಟ್ಟ ಒಪ್ಪಿಗೆಯ ಪತ್ರ ಪಡೆದು ಮಾತನಾಡಿದರು
ಆಕ್ಸಿಜನ್ ಸೌಲಭ್ಯ ಸಹಿತ ಈ 200 ಹಾಸಿಗೆಯ ಐಸೋಲೇಷನ್ ವಾರ್ಡ್‍ನಿಂದ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ಸರ್ಕಾರ ಈಗಾಗಲೇ ನಮ್ಮಲ್ಲಿರುವ ಸೌಲಭ್ಯದ ವಿವರ ನೀಡಿದೆ. ಇಟಲಿ ಮಾದರಿಯಲ್ಲಿ ಸೋಂಕಿ ತರ ಅಂದಾಜು ಸಂಖ್ಯೆಗೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆದರೂ, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಹಾಸಿಗೆ ಸಮಸ್ಯೆ ಎದುರಾಗ ಬಹುದು ಎಂಬ ಚಿಂತೆ ಕಾಡಿತ್ತು. ಇಂಥ ಸಮಯದಲ್ಲಿ ಸೆಂಟ್ ಜಾನ್ಸ್ ಆಸ್ಪತ್ರೆ ನೆರವಿನ ಹಸ್ತ ಚಾಚಿದೆ ಎಂದರು.
ಕೋವಿಡ್-19 ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಅಗತ್ಯ ಇರುವ ರೋಗಿಗಳು ಆಸ್ಪತ್ರೆ ತಲುಪು ವುದು ಕಷ್ಟವಾಗುತ್ತಿದೆ. ರಾಜ್ಯಮಟ್ಟದ ಸಹಾಯ ವಾಣಿ 104 ಅಡಿಯಲ್ಲಿ ತಂತ್ರಜ್ಞಾನದ ಬಳಕೆ ಮೂಲಕ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ಇಬ್ಬರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 15 ಐಸಿಯು ಹಾಸಿಗೆ ಜತೆಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. 500 ವೈದ್ಯರು 1300 ದಾದಿಯರು, 1400 ಹಾಸಿಗೆ ವ್ಯವಸ್ಥೆ ಇದೆ. ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ ಐಸೋಲೇ ಷನ್ ವಾರ್ಡ್ ನಿರ್ಮಿಸಲಾಗಿದ್ದು, ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ ಎಂದು ಸೆಂಟ್ ಜಾನ್ಸ್ ಆಸ್ಪತ್ರೆ ನಿರ್ದೇಶಕ ರೆವರೆಂಡ್ ಡಾ.ಪಾಲ್ ವಿವರಿಸಿದರು.
ಕೋವಿಡ್ ಅಲ್ಲದೇ ಅಲರ್ಜಿ, ಆಸ್ತಮಾ, ಶೀತ, ಜ್ವರ, ಹಿರಿಯ ನಾಗರಿಕರ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಸಂದೇಹ ಗಳನ್ನು ಬಗೆಹರಿಸಿಕೊಳ್ಳಲು ಜನರೇ ನೇರವಾಗಿ ವೈದ್ಯರೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸಲು `ಟೆಲಿ ಕನ್ಸಲ್ಟೇಷನ್’ ನಿಂದ ಸಾಧ್ಯವಾಗಲಿದೆ. ‘ಟೆಲಿ ಮೆಡಿಸಿನ್’ ಅಂದರೆ ದೂರವಾಣಿ ಮೂಲಕ ವೈದ್ಯರ ನಡುವೆ ಪರಸ್ಪರ ಮಾಹಿತಿ ವಿನಿಮಯಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶ ಇತ್ತು.
ಆದರೆ, ವೈದ್ಯರ ಜತೆ ಜನ ಸಾಮಾನ್ಯರು ದೂರ ವಾಣಿ ಸಮಾಲೋಚನೆ ನಡೆಸಲು ಅವಕಾಶ ಇರಲಿಲ್ಲ. ಈ ಸಂಬಂಧ ಕಾನೂನು ತಿದ್ದುಪಡಿ ತಂದು ಆದೇಶ ಹೊರಡಿಸಲಾಗಿದ್ದು, ವೈದ್ಯರ ಜತೆ ಜನರೇ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರ ದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಹಾಗೂ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಈ ಟೆಲಿಕನ್ಸಲ್ಟೇಷನ್ ಸೇವೆ ಲಭ್ಯವಿರ ಲಿದೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಫೋರ್ಟಿಯಾ ಮೆಡಿಕಲ್ ಸಂಸ್ಥೆ ಉಚಿತವಾಗಿ ಒದಗಿಸುತ್ತಿರುವ `ಟೆಲಿ ಕನ್ಸಲ್ಟೇಷನ್’ ಸೇವೆ ಪ್ರಾಯೋಗಿಕ ವಾಗಿ ಮಲ್ಲೇಶ್ವರದಲ್ಲಿ ಜಾರಿಯಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ.
ಸಭೆಯಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ಸೆಂಟ್ ಜಾನ್ಸ್ ಆಸ್ಪತ್ರೆ ನಿರ್ದೇಶಕ ರೆವರೆಂಡ್ ಡಾ. ಪಾಲ್, ಫೋರ್ಟಿಯಾ ಸಂಸ್ಥೆಯ ಮುಖ್ಯಸ್ಥೆ ಮೀನಾ ಗಣೇಶ್ ಉಪಸ್ಥಿತರಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಕುರಿತು ವೈದ್ಯರಿಂದ ಸಲಹೆ, ಮಾಹಿತಿ ಪಡೆಯಲು ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ: 08066744788.