ಕೊರೊನಾ ವಿರುದ್ಧ ಹೋರಾಟದಲ್ಲಿ ಮೈಸೂರು ಪಾಲಿಕೆ ಅಧಿಕಾರಿಗಳ ಹೊಣೆ ಪಾಲಿಕೆ ಆಯುಕ್ತರಿಂದ ಆದೇಶ
ಮೈಸೂರು

ಕೊರೊನಾ ವಿರುದ್ಧ ಹೋರಾಟದಲ್ಲಿ ಮೈಸೂರು ಪಾಲಿಕೆ ಅಧಿಕಾರಿಗಳ ಹೊಣೆ ಪಾಲಿಕೆ ಆಯುಕ್ತರಿಂದ ಆದೇಶ

April 2, 2020

ಮೈಸೂರು, ಏ.1(ಪಿಎಂ)- ಕೊರೊನಾ ವಿರುದ್ಧದ ಹೋರಾಟದಲ್ಲಿ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಪಾಲಿಕೆ ಅಧಿಕಾರಿ ಗಳಿಗೆ ಹೊಣೆಗಾರಿಕೆ ವಹಿಸಿ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಬುಧವಾರ ಆದೇಶ ಹೊರಡಿಸಿದ್ದಾರೆ. ನಿರಾಶ್ರಿತರ ಕೇಂದ್ರ ಹಾಗೂ ಸಾಂತ್ವನ ಕೇಂದ್ರ ಗಳ ನಿರ್ವಹಣೆಯನ್ನು ಹೆಚ್ಚುವರಿ ಆಯುಕ್ತ ಶಶಿಕುಮಾರ್, ಅವಶ್ಯಕ ಸಾಮಗ್ರಿಗಳ ಖರೀದಿ, ಪಾಸ್‍ಗಳ ವಿತರಣೆ ಮತ್ತು ಆಡಳಿತಾತ್ಮಕ ವಿಷಯಗಳ ನಿರ್ವಹಣೆಯನ್ನು ಒಳಚರಂಡಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಂಜಿತ್‍ಕುಮಾರ್ ಅವರಿಗೆ ವಹಿಸಲಾಗಿದೆ.

ಹೋಂ ಕ್ವಾರಂಟೈನ್ ಜವಾಬ್ದಾರಿ, ಕ್ರಿಮಿನಾಶಕ ಖರೀದಿ-ಸಿಂಪ ಡಣೆ ಮೇಲ್ವಿಚಾರಣೆಯನ್ನು ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಜಯಂತ್ ಹಾಗೂ ಡಾ.ನಾಗರಾಜು ಅವರಿಗೆ ನೀಡಲಾಗಿದೆ. ಮೈಸೂರು ನಗರದಲ್ಲಿ ಆರಂಭಿಸಿದ 7 ತಾತ್ಕಾಲಿಕ ಮಾರುಕಟ್ಟೆಗಳ ಉಸ್ತುವಾರಿಯನ್ನು ಉಪ ಆಯುಕ್ತ (ಕಂದಾಯ) ಕುಮಾರ್ ನಾಯಕ್ ಅವರಿಗೆ ವಹಿಸಲಾಗಿದೆ. ಮನೆಗಳಿಗೆ ದಿನಬಳಕೆ ವಸ್ತು, ಹಣ್ಣು-ತರಕಾರಿ ತಲುಪಿಸುವ ಜವಾಬ್ದಾರಿಯನ್ನು ಉಪ ಆಯುಕ್ತ (ಅಭಿವೃದ್ಧಿ) ಬಿಳಿಗಿರಿ ಹಾಗೂ ನಗರ ಯೋಜನಾಧಿಕಾರಿ ಜಯಸಿಂಹ ಅವರಿಗೆ ವಹಿಸಲಾಗಿದೆ. ಪಾಲಿಕೆ ವಲಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮತ್ತು ಸಮಗ್ರ ಮೇಲ್ವಿಚಾರಣೆ ಹೊಣೆಯನ್ನು ಆಯಾ ವಲಯ ಆಯುಕ್ತರಿಗೇ ವಹಿಸಲಾಗಿದೆ.

ವಲಯ ಆಯುಕ್ತರ ಸಂಪರ್ಕ ಸಂಖ್ಯೆ
ವಲಯ-1 ಐಶ್ವರ್ಯ (ಮೊ: 96207 00762), ವಲಯ-2 ಕುಮಾರ್ ನಾಯಕ್ (99026 38586), ವಲಯ-3 ಬಿ.ಸಿ. ಶಿವಾನಂದಮೂರ್ತಿ (99805 57442), ವಲಯ-4 ಪ್ರಿಯ ದರ್ಶಿನಿ (97319 46699), ವಲಯ-5 ಮತ್ತು ವಲಯ-7 ಶಿವೇಗೌಡ (94494 28066), ವಲಯ-6 ಹೆಚ್. ನಾಗರಾಜ್ (98451 44869), ವಲಯ-8 ಕುಬೇರಪ್ಪ (80739 95839), ವಲಯ-9 ಮುರಳಿಧರ್ (94480 61719).

Translate »