ಮೈಸೂರು, ಏ.1(ಆರ್‍ಕೆ)-ಕೋವಿಡ್-19 (ಕೊರೊನಾ ವೈರಸ್) ಮಾರಣಾಂತಿಕ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿ ಸಿದ್ದು, ಮೈಸೂರು ಜಿಲ್ಲೆಯಲ್ಲೂ ಅದು ರುದ್ರ ತಾಂಡವವಾಡುತ್ತಿರುವ ಹಿನ್ನೆಲೆ ಯಲ್ಲಿ ಅಧಿಕ ರೋಗಿಗಳಿರುವ ದೊಡ್ಡಾ ಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ ರೋಗ ನಿರೋಧಕ ರಾಸಾಯನಿಕ ನಿರಂತರ ವಾಗಿ ಸಿಂಪಡಿಸಲಾಗುತ್ತಿದೆ.
ಮೂವರು ಕೋವಿಡ್-19 ಸೋಂಕಿತರ ನ್ನಿರಿಸಿ ಚಿಕಿತ್ಸೆ ನೀಡುತ್ತಿದ್ದ ಕೆ.ಆರ್.ಆಸ್ಪತ್ರೆ ನ್ಯೂ ಐಪಿಡಿ-ಓಪಿಡಿ ಬ್ಲಾಕ್ (ಜಯದೇವ ಹೃದ್ರೋಗ ಘಟಕವಿದ್ದ ಕಟ್ಟಡ)ನ ವಾರ್ಡು ಗಳಿಂದ ಸೋಮವಾರ ಮೇಟಗಳ್ಳಿಯ ಜಿಲ್ಲಾ ಆಸ್ಪತ್ರೆಗೆ ಸೋಂಕಿತರನ್ನು ಸ್ಥಳಾಂತರಿ ಸಿದ ನಂತರ ಆ ಕಟ್ಟಡದಲ್ಲಿರುವ ಎಲ್ಲಾ 5 ಮಹಡಿಯ ವಾರ್ಡುಗಳನ್ನು ವೈದ್ಯಕೀಯ ಪ್ರೊಟೋಕಾಲ್ ಮತ್ತು ಪ್ರೊಸೀಜರ್ ಪ್ರಕಾರ ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂದು ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ ಅವರು ತಿಳಿಸಿದ್ದಾರೆ.
ಸೋಮವಾರದಿಂದಲೂ ಪಿಪಿಇ (ಪರ್ಸ ನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) ಸಲಕರಣೆ ಗಳನ್ನು ಧರಿಸಿಕೊಂಡು ಮೆಡಿಸಿನ್ ಮತ್ತು ಅನೆಸ್ತೇಷಿಯಾ ವಿಭಾಗದ ಅಸಿಸ್ಟೆಂಟ್ ಪ್ರೊಫೆ ಸರ್‍ಗಳ ಮೇಲ್ವಿಚಾರಣೆಯಲ್ಲಿ ಸ್ವಚ್ಛತೆ ಯಲ್ಲಿ ನುರಿತ ಸಿಬ್ಬಂದಿಗಳಿಂದ ಹೈಡ್ರೋಪೆ ರಾಕ್ಸೈಡ್ ಅನ್ನು ಸಿಂಪಡಿಸಿದ ನಂತರ ಸೋಡಿಯಂ ಹೈಪೋಕ್ಲೋರೈಟ್ ಮಿಶ್ರಿತ ರಾಸಾಯನಿಕದೊಂದಿಗೆ ಫ್ಯೂಮಿಗೇಷನ್ ಮಾಡಿ ಬಳಿಕ ಸೋಪ್ ಆಯಿಲ್ ಹಾಕಿ ಇಡೀ ಆಸ್ಪತ್ರೆ ವಾರ್ಡ್‍ಗಳನ್ನು ತೊಳೆಯ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದೇ ರೀತಿ ಬೆಳಿಗ್ಗೆಯಿಂದ ರಾತ್ರಿವರೆಗೆ ಮೂರು ಬಾರಿ ಕ್ಲೀನಿಂಗ್ ಮತ್ತು ಫ್ಯೂಮಿ ಗೇಷನ್ ಮಾಡುತ್ತಿದ್ದು, ಈ ವಾರ ಪೂರ್ತಿ ಈ ಪ್ರಕ್ರಿಯೆ ಮಾಡಬೇಕಾಗುತ್ತದೆ. ನಂತರ ವಷ್ಟೇ ಅಲ್ಲಿ ಇನ್ನಾವುದೇ ವೈರಾಣು ಬದು ಕಿಲ್ಲ ಎಂಬುದನ್ನು ದೃಢಪಡಿಸಿಕೊಂಡ ನಂತರವೇ ಆ ವಾರ್ಡ್‍ಗಳನ್ನು ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗು ವುದು ಎಂದೂ ಡಾ. ರಾಜೇಶ ತಿಳಿಸಿದರು.
ಈ ಪ್ರಕ್ರಿಯೆ ನಡೆಸುತ್ತಿರುವುದರಿಂದ ಆ ಬ್ಲಾಕ್ ಸುತ್ತ ಯಾರೂ ಸುಳಿಯದಂತೆ ಎಚ್ಚರ ವಹಿಸಲಾಗಿದೆಯಲ್ಲದೆ, ಸೂಚನಾ ಫಲಕಗಳನ್ನೂ ಹಾಕಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನಿಲ್ಲಿಸಿ ಹತ್ತಿರ ಸುಳಿಯದಂತೆ ನಿಗಾ ವಹಿಸಲಾಗಿದೆ ಎಂದು ಅವರು ನುಡಿದರು.
ಅದೇ ರೀತಿ ಪಕ್ಕದಲ್ಲೇ ಇರುವ ಚೆಲು ವಾಂಬ ಆಸ್ಪತ್ರೆ, ಓಪಿಡಿ ಬ್ಲಾಕ್, ಹೆರಿಗೆ ವಾರ್ಡ್, ಬಾಣಂತಿಯರ ವಾರ್ಡ್, ನವಜಾತ ಶಿಶು ಐಸಿಯು, ಮಕ್ಕಳ ವಿಭಾಗದ ಕಟ್ಟಡಗಳಿಗೂ ರಸಾಯನಿಕ ಸಿಂಪಡಣೆ ಹಾಗೂ ಫ್ಯೂಮಿಗೇಷನ್ ಮಾಡುತ್ತಿದ್ದು, ಇಡೀ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ.