ಕೊರೊನಾ ವೈರಸ್‍ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ
ಮೈಸೂರು

ಕೊರೊನಾ ವೈರಸ್‍ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ

April 1, 2020

ಪೊಲೀಸರು, ನಿರ್ಗತಿಕರು, ಪೌರಕಾರ್ಮಿಕರಿಗೆ ವಿತರಿಸುವ ಉದ್ದೇಶ

ಮೈಸೂರು, ಮಾ.31(ಎಂಕೆ)- ಮಾರಕ ಕೊರೊನಾ(ಕೋವಿಡ್-19) ವೈರಸ್ ನಿಂದ ರಕ್ಷಿಸಿಕೊಳ್ಳಲು ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ‘ಕೊರೊನಾ ರಕ್ಷಣಾ ಕಿಟ್’ ತಯಾರಿ ನಡೆಯುತ್ತಿದ್ದು, 2000ಕ್ಕೂ ಹೆಚ್ಚು ಕಿಟ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಕರ್ತವ್ಯನಿರತ ಪೊಲೀಸರು, ವೈದ್ಯ ಕೀಯ ಸಿಬ್ಬಂದಿ, ಪೌರಕಾರ್ಮಿಕರು, ಬಡ ವರು, ಹಣ್ಣು ತರಕಾರಿ ವ್ಯಾಪಾರಿಗಳು, ನಿರ್ಗತಿಕರ ಆರೋಗ್ಯ ದೃಷ್ಟಿಯಿಂದ ಉಚಿತ ವಾಗಿ ವಿತರಣೆ ಮಾಡಲು ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ರಕ್ಷಣಾ ಕಿಟ್ ಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ 500 ಕಿಟ್‍ಗಳನ್ನು ನಗರದ ಕೆಲವು ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ.

ಕೊರೊನಾ ರಕ್ಷಣಾ ಕಿಟ್‍ನಲ್ಲಿ ಎರಡು ಮಾಸ್ಕ್, ಎರಡು ಸಾಬೂನು, ಒಂದು ಬಂಡಲ್ ಟಷ್ಯೂ ಪೇಪರ್, ಎರಡು ಪ್ಯಾಕೆಟ್ ಬಿಸ್ಕತ್ತು, 100 ಎಂಎಲ್‍ನ ಒಂದು ಸ್ಯಾನಿಟೈಸರ್ ಬಾಟಲ್ ಮತ್ತು 10 ಮಿಟಮಿನ್ ಮಾತ್ರೆ ಗಳು ಇರಲಿವೆ. ಅಲ್ಲದೆ ರಕ್ಷಣಾ ಕಿಟ್ ಬಳಕೆ ಮತ್ತು ಅದರ ಪ್ರಯೋಜನ ಕುರಿತ ಮಾಹಿತಿಯುಳ್ಳ ಕರಪತ್ರಗಳು ಇರಲಿವೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮಾಸ್ಕ್‍ಗಳಿಗೆ ಬೇಡಿಕೆ ಹೆಚ್ಚಿದೆ. ಅದರಂತೆ ತೊಳೆದು ಪುನಃ ಬಳಸಲು ಅನುಕೂಲ ವಾಗುವಂತೆ ಮಾಸ್ಕ್‍ಗಳನ್ನು ತಯಾರು ಮಾಡುತ್ತಿದ್ದು, ಮಾಸ್ಕ್‍ನೊಳಗೆ ಟಿಷ್ಯೂ ಪೇಪರ್ ಇಟ್ಟುಕೊಂಡು ಬಳಸಬಹುದಾ ಗಿದೆ. ಇನ್ನು ಸ್ಯಾನಿಟೈಸರ್, ಮಿಟಮಿನ್ ಮಾತ್ರೆಗಳು, ಸಾಬೂನು ಮತ್ತು ಬಿಸ್ಕತ್ ಪ್ಯಾಕೆಟ್‍ಗಳನ್ನು ಉತ್ತಮ ಕಂಪನಿಗಳಿಂದ ಖರೀದಿ ಮಾಡಿ, ವಿತರಣೆ ಮಾಡಲಾ ಗುತ್ತಿದೆ ಎಂದರು.

‘ಶಿವಜ್ಞಾನೆ ಜೀವ ಸೇವಾ’ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಇತರರಿಗೆ ಅನುಕೂಲವಾಗುವಂತೆ ಮಾಸ್ಕ್ ತಯಾರಿಕೆ ಹಾಗೂ ಊಟ ವಿತರಣೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ 19 ಎನ್ನುವ ಸಾಂಕ್ರಾಮಿಕ ರೋಗ ವಿಶ್ವದಾ ದ್ಯಂತ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಸಮಯದಲ್ಲಿ ನಾವೆ ಲ್ಲರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚಿಸುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವುದರಲ್ಲಿ ನಮ್ಮ ಯೋಗ ಕ್ಷೇಮವಿದೆ ಎಂದು ತಿಳಿಸಿದರು.

ನಾವಿಂದು ಇತಿಹಾಸದಲ್ಲಿ ಕಂಡರಿಯದ ಪರಿಸ್ಥಿತಿಯಲ್ಲಿದ್ದೇವೆ. ಎರಡನೇ ಮಹಾ ಯುದ್ಧ, ನೆರೆಹಾವಳಿ, ಭೂಕಂಪವಾದಾಗ ಪ್ರತ್ಯೇಕ ಸ್ಥಳಗಳಲ್ಲಿ ತೊಂದರೆಯಾಗುವು ದನ್ನು ಕಂಡಿದ್ದೇವು. ಆದರೆ ಇಡೀ ದೇಶವೇ ಲಾಕ್‍ಡೌನ್ ಎಂದರೆ ಕಣ್ಣಿಗೆ ಕಾಣದ ವೈರಸ್ ಯಾವ ಮಟ್ಟಿಗೆ ತಲ್ಲಣಗೊಳಿಸಿದ್ದೇವೆ ಎಂಬು ದನ್ನು ಅರ್ಥಮಾಡಿಕೊಂಡು ಕೊರೊನಾ ವೈರಸ್ ತಡೆಗಟ್ಟಲು ಮನೆಯಲ್ಲಿಯೇ ಇರ ಬೇಕು. ಐಕ್ಯತೆಯಿಂದ ಪರಸ್ಪರ ಕಚ್ಚಾಟ ದಿಂದ ಮುಕ್ತರಾಗಿ ಸಹಕಾರ ಮನೋ ಭಾವನೆಯಿಂದ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.

Translate »