ಹೊಸ ಮಾರುಕಟ್ಟೆಗಳಿಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ
ಮೈಸೂರು

ಹೊಸ ಮಾರುಕಟ್ಟೆಗಳಿಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ

April 2, 2020
  • ಲಲಿತಮಹಲ್, ದೊಡ್ಡಕೆರೆ ಮೈದಾನದಲ್ಲಿ ಮುಗಿಬಿದ್ದ ವ್ಯಾಪಾರಸ್ಥರು
  • ಬನ್ನಿಮಂಟಪ, ವಿಜಯನಗರ ಸೇರಿ 5 ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ

ಮೈಸೂರು,ಏ.1(ಎಂಟಿವೈ)- ಒಂದೇ ಸ್ಥಳದಲ್ಲಿ ಹಣ್ಣು-ತರಕಾರಿ ಖರೀದಿಸಲು ಜನರು ಮುಗಿಬೀಳುವುದನ್ನು ತಪ್ಪಿಸಲು ಮೈಸೂರಿನ 7 ಸ್ಥಳಗಳಲ್ಲಿ ಹೊಸದಾಗಿ ಆರಂಭಿಸಿದ ತಾತ್ಕಾಲಿಕ ಸಗಟು ಮಾರು ಕಟ್ಟೆಗಳಲ್ಲಿ ಮೊದಲ ದಿನವಾದ ಬುಧ ವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

7 ಮಾರುಕಟ್ಟೆಗಳಲ್ಲಿ ಲಲಿತಮಹಲ್ ಮೈದಾನ, ದೊಡ್ಡಕೆರೆ ಮೈದಾನದ ಮಾರು ಕಟ್ಟೆಯಲ್ಲಿ ವಹಿವಾಟು ಭರ್ಜರಿಯಾಗಿ ನಡೆದರೆ, 3 ಮಾರುಕಟ್ಟೆಗಳಲ್ಲಿ ಒಬ್ಬ ರೈತರೂ ತರಕಾರಿ ಮಾರಲು ಬಂದಿರ ಲಿಲ್ಲ. ಬನ್ನಿಮಂಟಪದ ಪಂಜಿನ ಕವಾ ಯತು ಮೈದಾನದ ಮಾರುಕಟ್ಟೆಯಲ್ಲಿ 30 ರೈತರು ತರಕಾರಿ ಮಾರಾಟಕ್ಕೆ ಬಂದಿ ದ್ದರೆ, ಚಾಮುಂಡಿವಿಹಾರ ಕ್ರೀಡಾಂಗಣದ ಮೈದಾನದಲ್ಲಿ ಒಬ್ಬ ರೈತರಷ್ಟೇ ತರಕಾರಿ ಮಾರಾಟಕ್ಕೆ ತಂದಿದ್ದರು. ಮಾಹಿತಿ ಕೊರತೆಯಿಂದ ಕೆಲವೆಡೆ ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಇತ್ತು.

110 ರೈತರು: ಲಲಿತ ಮಹಲ್ ಮೈದಾನ ದಲ್ಲಿನ ಮಾರುಕಟ್ಟೆಯಲ್ಲಿ 50 ರೈತರಿಗಷ್ಟೇ ವ್ಯಾಪಾರಕ್ಕೆ ಅವಕಾಶ ನೀಡಿದ್ದರೂ ಬುಧವಾರ ಮುಂಜಾನೆ 110 ರೈತರು ತಾವು ಬೆಳೆದ ಹಣ್ಣು, ತರಕಾರಿ, ಸೊಪ್ಪನ್ನು ಮಾರಾಟ ಮಾಡಲು ಬಂದಿದ್ದರು. ಜನರೂ ತಾಜಾ ಹಣ್ಣು, ತರಕಾರಿ ಖರೀದಿಗೆ ಮುಗಿಬಿದ್ದರು.

120 ಮಂದಿ: ದೊಡ್ಡಕೆರೆ ಮೈದಾನದಲ್ಲಿ 80 ಮಂದಿಗೆ ವ್ಯಾಪಾರಕ್ಕೆ ಅವಕಾಶವಿ ದ್ದರೆ, 120 ರೈತರು ವ್ಯಾಪಾರಕ್ಕೆ ಬಂದಿದ್ದರು. ನಗರದ ಹೃದಯ ಭಾಗವಾಗಿದ್ದರಿಂದ ದೊಡ್ಡ ಕೆರೆ ಮೈದಾನದ ಮಾರುಕಟ್ಟೆಯಲ್ಲೂ ಭರ್ಜರಿ ವ್ಯಾಪಾರ ನಡೆಯಿತು.

30 ಮಂದಿ: ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ 70 ರೈತರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾ ಗಿತ್ತು. ಆದರೆ ಇಂದು ಕೇವಲ 30 ರೈತ ರಷ್ಟೇ ತರಕಾರಿ ತಂದಿದ್ದರು. ಅವರಲ್ಲಿ ಕೆಲವರು ಚಿಲ್ಲರೆ ವ್ಯಾಪಾರಿಗಳೂ ಇದ್ದರು. ಇದನ್ನು ಗಮನಿಸಿದ ಪೊಲೀಸರು ಚಿಲ್ಲರೆ ವ್ಯಾಪಾರಿಗಳನ್ನು ಹೊರಗೆ ಕಳುಹಿಸಿದರು. ಅಲ್ಲದೆ ತರಕಾರಿ ಕೊಳ್ಳುವವರ ಸಂಖ್ಯೆಯೂ ಕಡಿಮೆ ಇತ್ತು.

ಒಬ್ಬರೂ ಸುಳಿಯಲಿಲ್ಲ: ಶ್ರೀರಾಂಪುರದ ಬೆಮೆಲ್ ಲಾಸ್ಟ್ ಬಸ್‍ಸ್ಟಾಂಡ್ ಬಳಿಯ ಮಾರುಕಟ್ಟೆಯಲ್ಲಿ 60 ಮಂದಿ, ದೇವನೂರು 1ನೇ ಹಂತದ ನಿಮ್ರಾ ಮಸೀದಿ ಬಳಿಯ ಸ್ಟೇಡಿಯಂನಲ್ಲಿ 60 ಮಂದಿ, ವಿಜಯ ನಗರ 2ನೇ ಹಂತದ ಸಂಡೇ ಮಾರುಕಟ್ಟೆ ಯಲ್ಲಿ 60 ರೈತರು ತರಕಾರಿ ಮಾರಾಟ ಮಾಡಲು ಅವಕಾಶವಿತ್ತು. ಆದರೆ ಮೂರೂ ಮಾರುಕಟ್ಟೆಗೆ ಒಬ್ಬ ರೈತರೂ ಹಣ್ಣು-ತರಕಾರಿ ಮಾರಾಟಕ್ಕೆ ಬರಲಿಲ್ಲ. ರೈತರು ಬರುವ ನಿರೀಕ್ಷೆಯಿಂದ ಎಲ್ಲಾ ಮಾರುಕಟ್ಟೆ ಬಳಿಯೂ ಮುಂಜಾನೆ 4ರಿಂದಲೇ ಭದ್ರತೆ ಗಾಗಿ ಪೊಲೀಸರನ್ನು ನಿಯೋಜಿಸಲಾ ಗಿತ್ತು. ಬ್ಯಾರಿಕೇಡ್ ಜೋಡಿಸಿ ಕಾಯುತ್ತಿದ್ದ ಪೊಲೀಸರಿಗೆ ಸಮಯ ವ್ಯರ್ಥವಾಯಿತು.

ಈ ಮಧ್ಯೆ, ಏಳೂ ಮಾರುಕಟ್ಟೆಗಳಲ್ಲಿ ಕುಡಿಯುವ ನೀರು, ಮೊಬೈಲ್ ಶೌಚಾ ಲಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.

ಸಾಮಾಜಿಕ ಅಂತರಕ್ಕೆ ಮನವಿ: ಲಲಿತ ಮಹಲ್ ಹಾಗೂ ದೊಡ್ಡಕೆರೆ ಮೈದಾನ ದಲ್ಲಿ ಇಂದು ನಡೆದ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ, ಸೊಪ್ಪು ಖರೀದಿ ಸಲು ಜನರು ಮುಗಿಬಿದ್ದಿದ್ದರು. ಸಾಮಾ ಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಲಾಗಿ ನಿಲ್ಲಿ ಎಂದು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಮನವಿ ಮಾಡುತ್ತಿದ್ದರೂ ಜನರು ಕಿವಿಗೊಡಲಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂ ಡಂತೆ ನಿಂತು ತರಕಾರಿ ಖರೀದಿಸಿದರು!

ಒಬ್ಬರೇ!
ನಜರ್‍ಬಾದ್‍ನಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಮಾರುಕಟ್ಟೆ ಯಲ್ಲಿ 40 ರೈತರು ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇಂದು ಬಂದಿದ್ದು ಒಬ್ಬರೇ ರೈತರು!

Translate »