ವಸತಿ ಗೃಹವೊಂದರಲ್ಲಿ ಕ್ವಾರಂಟೈನ್‍ಗೆ ಒಳಗಾದವರ ಸ್ಥಳಾಂತರಕ್ಕೆ ನಿವಾಸಿಗಳ ಒತ್ತಾಯ ದೇವರಾಜ ಮೊಹಲ್ಲಾ ನಿವಾಸಿಗಳಿಂದ ಪ್ರತಿಭಟನೆ
ಮೈಸೂರು

ವಸತಿ ಗೃಹವೊಂದರಲ್ಲಿ ಕ್ವಾರಂಟೈನ್‍ಗೆ ಒಳಗಾದವರ ಸ್ಥಳಾಂತರಕ್ಕೆ ನಿವಾಸಿಗಳ ಒತ್ತಾಯ ದೇವರಾಜ ಮೊಹಲ್ಲಾ ನಿವಾಸಿಗಳಿಂದ ಪ್ರತಿಭಟನೆ

April 3, 2020

ಮೈಸೂರು,ಏ.2(ವೈಡಿಎಸ್)- ವಸತಿಗೃಹ ವೊಂದರಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾದ ವರನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ಒತ್ತಾಯಿಸಿ ದೇವರಾಜ ಮೊಹಲ್ಲಾ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಗುರುವಾರ ರಾತ್ರಿ ನಾರಾಯಣಶಾಸ್ತ್ರಿ ರಸ್ತೆಯ ಸಂಗೀತ ವಸತಿ ಗೃಹದ ಬಳಿ ಜಮಾವಣೆಗೊಂಡ ನೂರಾರು ಮಂದಿ ನಿವಾಸಿಗಳು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಬಡಾವಣೆಯಲ್ಲಿ ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹೋಂ ಕ್ವಾರಂಟೈನ್‍ಗೆ ಒಳಗಾಗಿರುವ ನಂಜನ ಗೂಡಿನ ಜ್ಯುಬಿಲಂಟ್ ಕಾರ್ಖಾನೆಯ ನಾಲ್ವರು ಸೇರಿದಂತೆ 40 ಮಂದಿಯನ್ನು ಸೀಬಯ್ಯ ರಸ್ತೆಯಲ್ಲಿರುವ ವೈಶಾಕ್ ವಸತಿ ಗೃಹದಲ್ಲಿ ಇರಿಸಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ವಸತಿ ಗೃಹದಲ್ಲಿರುವವರನ್ನು ನಾಳೆ(ಏ.3) ಬೆಳಿಗ್ಗೆ ಸ್ಥಳಾಂತರಿಸುವುದಾಗಿ ನಿವಾಸಿಗಳ ಮನ ವೊಲಿಕೆಗೆ ಯತ್ನಿಸಿದರು. ಆದರೆ, ಇದಕ್ಕೆ ಒಪ್ಪದ ನಿವಾಸಿಗಳು ಈಗಲೇ ಸ್ಥಳಾಂತರಿಸ ಬೇಕೆಂದು ಪಟ್ಟು ಹಿಡಿದರು. ಈ ಹಿನ್ನೆಲೆ ಯಲ್ಲಿ ಸಂಸದ ಪ್ರತಾಪಸಿಂಹ, ಇಂದು (ಏ.2) ರಾತ್ರಿ 11 ಗಂಟೆಯೊಳಗೆ ಬೇರೆಡೆಗೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದರು. ರಾತ್ರಿ 11 ಗಂಟೆಯೊಳಗೆ ಸ್ಥಳಾಂತರಿಸ ದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿ, ಪ್ರತಿಭಟನೆ ಕೈಬಿಟ್ಟರು.

ಪೊಲೀಸ್ ಬಂದೋಬಸ್ತ್: ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ವೇಳೆ ಪೊಲೀಸರು ಗುಂಪಾಗಿ ನಿಲ್ಲದೆ ಅಂತರ ಕಾಯ್ದುಕೊಳ್ಳು ವಂತೆ ನಿವಾಸಿಗಳಲ್ಲಿ ಮನವಿ ಮಾಡಿದರು.

Translate »