ಐಸೋಲೇಷನ್ ಕೋಚ್‍ಗಳಾಗುತ್ತಿವೆ ರೈಲ್ವೆ ಬೋಗಿಗಳು
ಮೈಸೂರು

ಐಸೋಲೇಷನ್ ಕೋಚ್‍ಗಳಾಗುತ್ತಿವೆ ರೈಲ್ವೆ ಬೋಗಿಗಳು

April 3, 2020
  • ಕೊರೊನಾ ಸೋಂಕಿತರ ಕ್ವಾರಂಟೈನ್‍ಗಾಗಿ ಮೈಸೂರು ರೈಲ್ವೆ ವರ್ಕ್‍ಶಾಪ್‍ನಲ್ಲಿ ಐಸೋಲೇಷನ್ ವಾರ್ಡ್‍ಗಳ ವ್ಯವಸ್ಥೆ ಕ್ಷಿಪ್ರಗತಿಯಲ್ಲಿ ಸಾಗಿದೆ
  • ಸರ್ಕಾರದ ಬೇಡಿಕೆಗೆ ರೈಲ್ವೆ ಮಂಡಳಿ ಸ್ಪಂದನೆ, ನೈರುತ್ಯ ರೈಲ್ವೆಯ 320 ಕೋಚ್‍ಗಳು ಸೇರಿ 5000 ಪ್ಯಾಸೆಂಜರ್ ಕೋಚ್‍ಗಳನ್ನು ಪರಿವರ್ತಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆ

– ಎಸ್.ಟಿ.ರವಿಕುಮಾರ್

ಮೈಸೂರು, ಏ.2-ವಿಶ್ವವನ್ನೇ ಬೆಚ್ಚಿ ಬೀಳಿಸಿ ರುವ ಕೋವಿಡ್-19 (ಕೊರೊನಾ ವೈರಸ್) ಮಾರಣಾಂತಿಕ ವೈರಾಣು ಅದೆಷ್ಟೋ ಜೀವ ವನ್ನು ಬಲಿ ತೆಗೆದುಕೊಂಡಿದ್ದು, ಮುಂದೆ ಇನ್ನೂ ಸೋಂಕು ಹರಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಭಾರತದಂತಹ ಜನಸಂದಣಿ ಉಳ್ಳ ದೇಶ ದಲ್ಲಿ ಒಂದು ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಸೋಂಕಿತರನ್ನು ಕ್ವಾರಂಟೈನ್‍ನಲ್ಲಿ ರಿಸಿ ಚಿಕಿತ್ಸೆ ನೀಡಲು ಅಗತ್ಯವಿರುವ ಆಸ್ಪತ್ರೆ ಗಳು ಲಭ್ಯವಿಲ್ಲದ ಕಾರಣ, ಕೇಂದ್ರ ಸರ್ಕಾರವು ಸೌಲಭ್ಯದೊಂದಿಗೆ ಸಜ್ಜಾಗಲು ಪ್ರಯಾಣಿ ಕರ ರೈಲ್ವೇ ಬೋಗಿಗಳನ್ನೇ ಕೋವಿಡ್-19 ಐಸೋಲೇಷನ್ ವಾರ್ಡ್‍ಗಳನ್ನಾಗಿ ಮಾರ್ಪಡಿಸುವಂತೆ ಕೋರಿಕೊಂಡಿದೆ.

ಮೈಸೂರು ರೈಲ್ವೇ ವರ್ಕ್‍ಶಾಪ್: ಭಾರ ತೀಯ ರೈಲ್ವೇಸ್ ನಿರ್ದೇಶನದಂತೆ ರೈಲ್ವೇ ಮಂಡಳಿಯು ನೈರುತ್ಯ ರೈಲ್ವೇಗೆ ಸೇರಿದ (SWR) ರೈಲು ಬೋಗಿಗಳನ್ನು ಐಸೋ ಲೇಷನ್ ಕೋಚ್‍ಗಳನ್ನಾಗಿ ಪರಿವರ್ತಿ ಸುವ ಕಾರ್ಯವು ಮೈಸೂರಿನ ಅಶೋಕ ಪುರಂ ರೈಲ್ವೇ ಕಾರ್ಯಾಗಾರದಲ್ಲಿ ನಡೆಸು ತ್ತಿದೆ. ಕಳೆದ 10 ದಿನದಿಂದ ನುರಿತ ಇಂಜಿ ನಿಯರ್‍ಗಳು ಈ ಕೆಲಸದಲ್ಲಿ ನಿರತರಾಗಿದ್ದು, ನಾಲ್ಕು ದಿನದೊಳಗಾಗಿ ಎರಡು ಐಸೋ ಲೇಷನ್ ಕೋಚ್‍ಗಳು ಸಿದ್ಧವಾಗಲಿವೆ.

ದೇಶದಲ್ಲಿ ಐಸೋಲೇಷನ್ ಸಾಮಥ್ರ್ಯ ಹೆಚ್ಚಿಸಲು ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಕೋವಿಡ್-19 ಐಸೋಲೇಷನ್ ವಾರ್ಡ್ ಗಳನ್ನಾಗಿ ಮಾರ್ಪಡಿಸಿ ರೈಲ್ವೇ ಮಂಡಳಿ ನಿಗದಿಪಡಿಸಿರುವ ನಿಯಮಾವಳಿಯಂತೆ (Proto type) ಅವುಗಳನ್ನು ಕ್ವಾರಂಟೈನ್- ಹೆಚ್ ಆಗಿ ಸಜ್ಜುಗೊಳಿಸಲಾಗುತ್ತಿದೆ.

ಮೂಲ ಸೌಕರ್ಯ: ಬೋಗಿಗಳನ್ನು ಸ್ವಚ್ಛ ಗೊಳಿಸಿ ಸ್ಯಾನಿಟೈಸ್ ಮಾಡಿ ಸುತ್ತಲಿನ ಪ್ರದೇಶವನ್ನು ಹೈಜೆನಿಕ್ಕಾಗಿರಿಸುವುದು, ಪ್ರಯಾಣಿಕರ ಆಸನಗಳ ಮೇಲೆ ಹಾಸಿಗೆ, ದಿಂಬು ಹಾಕಿ ಸಿದ್ಧಗೊಳಿಸುವುದು, ವೆಂಟಿ ಲೇಟರ್‍ಗೆ ಅಗತ್ಯ ಸೌಲಭ್ಯ, ಕುಡಿಯುವ ನೀರು, ಶೌಚಾಲಯ, ವೆಂಟಿಲೇಷನ್‍ನಿಂದ ಗಾಳಿ-ಬೆಳಕಿಗೆ ಅವಕಾಶ, ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡಲು ವ್ಯವಸ್ಥೆ ಸೇರಿ ದಂತೆ ಕೋವಿಡ್-19 ವಾರ್ಡ್‍ಗೆ ಬೇಕಾದ ಎಲ್ಲಾ ಸೌಲಭ್ಯವನ್ನೂ ಅಲ್ಲಿ ಒದಗಿಸಲಾಗುತ್ತಿದೆ.

5000 ಕೋಚ್‍ಗಳು: ನೈರುತ್ಯ ರೈಲ್ವೇ (South Western Railway)ಯಿಂದ 320 ಕೋಚ್‍ಗಳು ಸೇರಿದಂತೆ ದೇಶದಾ ದ್ಯಂತ 5,000 ಬೋಗಿಗಳನ್ನು ಇಂಡಿಯನ್ ರೈಲ್ವೆ ಸಿದ್ಧಪಡಿಸಲು ಮುಂದಾಗಿದ್ದು, ಸರ್ಕಾರಗಳು ಕೇಳಿದಾಗ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಒದಗಿಸಲು ಸಕಲ ತಯಾರಿ ನಡೆಸಿದೆ.

ವೈದ್ಯಕೀಯ ಮಾರ್ಗದರ್ಶಿ ಪಾಲನೆ: ಮೆಡಿಕಲ್ ಗೈಡ್‍ಲೈನ್ಸ್ ಪ್ರಕಾರವೇ ಬೆಡ್ ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮೈಸೂರಿನ ಅಶೋಕಪುರಂನಲ್ಲಿರುವ ಸೆಂಟ್ರಲ್ ರೈಲ್ವೇ ವರ್ಕ್‍ಶಾಪ್‍ನಲ್ಲಿ 120, ಹುಬ್ಬಳ್ಳಿ ವರ್ಕ್‍ಶಾಪ್ ನಲ್ಲಿ 120 ಸೇರಿ ನೈರುತ್ಯ ರೈಲ್ವೇ ವ್ಯಾಪ್ತಿಯಲ್ಲಿ 320 ಕೋಚ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರಿನ ಅಶೋಕ ಪುರಂನಲ್ಲಿರುವ ಸೆಂಟ್ರಲ್ ರೈಲ್ವೇ ವರ್ಕ್ ಶಾಪ್‍ನ ಪ್ರಧಾನ ವ್ಯವಸ್ಥಾಪಕ (CWM) ಪಿ.ಶ್ರೀನಿವಾಸ, ರೈಲು ಬೋಗಿಗಳನ್ನು ಕೋವಿಡ್-19 ವಾರ್ಡ್‍ಗಳಾಗಿ ಪರಿವರ್ತಿ ಸುವ ಕೆಲಸ ಆರಂಭವಾಗಿದ್ದು, ಸದ್ಯದಲ್ಲೇ ಐಸೋಲೇಷನ್ ವಾರ್ಡುಗಳು ಸಿದ್ಧ ಗೊಳ್ಳಲಿವೆ ಎಂದರು.
ನಮಗೆ ಕಚ್ಛಾ ಸಾಮಗ್ರಿಗಳು ದೊರೆತರೆ ಒಂದು ದಿನದಲ್ಲಿ 6ರಿಂದ 8 ಕೋಚ್ ಗಳನ್ನು ಸಿದ್ಧಪಡಿಸುವ ಉದ್ದೇಶ ಇದೆ. ಇನ್ನೊಂದು 12 ರಿಂದ 20 ದಿನದೊಳಗಾಗಿ 120 ಕೋಚ್‍ಗಳನ್ನು ಕೋವಿಡ್-19 ವಾರ್ಡ್‍ಗಳನ್ನಾಗಿ ಮಾರ್ಪಡಿಸಲಾಗು ವುದು ಎಂದರು.

ಮದ್ಯದ ಬರ್ತ್ (ಆಸನ) ಮತ್ತು ಸರಳು ಗಳನ್ನು ತೆಗೆದು ಸೂಕ್ತ ಸ್ಥಳಾವಕಾಶ ಮಾಡಿ ಅಲ್ಲಿಗೆ ಪ್ಲಾಸ್ಟಿಕ್ ಟ್ರಾನ್ಸ್‍ಪರೆಂಟ್ ಏರ್ ಕರ್ಟನ್ ಹಾಕಲಾಗುವುದು. ವೈದ್ಯ ಕೀಯ ಸಲಕರಣೆಗಳನ್ನು ಇರಿಸಲು ಸ್ಥಳಾವ ಕಾಶವನ್ನು ಬೋಗಿಗಳಲ್ಲಿ ಒದಗಿಸಲಾಗು ತ್ತಿದೆ ಎಂದು ಅವರು ತಿಳಿಸಿದರು.

Translate »