ಮೈಸೂರು, ಏ.3 (ಆರ್‍ಕೆಬಿ)- ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು, ಪ್ರವಾಸಿಗರು ನಿರಾಶ್ರಿತರಾಗಿದ್ದು, ಮೈಸೂರಿನ ವಿವಿಧೆಡೆ ತೆರೆಯಲಾಗಿರುವ ನಿರಾಶ್ರಿತ ಕೇಂದ್ರಗಳು ಮತ್ತು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ 7,300 ಮಂದಿಗೆ ಮೈಸೂರು ಮಹಾ ನಗರಪಾಲಿಕೆಯಿಂದ ಕಳೆದ 4 ದಿನಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದೆ.
ನಗರದಲ್ಲಿ ಹೋಟೆಲ್‍ಗಳು ಮುಚ್ಚಿರು ವುದರಿಂದ ಅಸಂಘಟಿತ ವಲಯದ ಕಾರ್ಮಿಕ ರಿಗೆ ಆಹಾರದ ಸಮಸ್ಯೆ ಉಂಟಾಗಿದೆ. ಜಿಲ್ಲಾಧಿಕಾರಿ, ಮೇಯರ್, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ವಲಯ ಕಚೇರಿ ವ್ಯಾಪ್ತಿಯಲ್ಲಿ ನಿರ್ದಿಷ್ಟ ಸ್ಥಳಗಳನ್ನು ಗುರು ತಿಸಿದ ಮೇರೆಗೆ 17 ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ನಂಜರಾಜ ಬಹದ್ದೂರ್ ಛತ್ರ, ಟಿ.ಕೆ.ಲೇಔಟ್‍ನ ಯೂತ್ ಹಾಸ್ಟೆಲ್, ಬಂಬೂಬಜಾರ್ ನೈಟ್ ಶೆಲ್ಟರ್, ಮುಡಾ ಸಿಐಟಿಬಿ ಛತ್ರ, ಲಕ್ಷ್ಮಿಪುರಂ ಹೊಯ್ಸಳ ಕರ್ಣಾಟಕ ಸಂಘ, ಚಾಮುಂಡೇಶ್ವರಿ ಕರಿ ಮಾರಮ್ಮ ಕಲ್ಯಾಣ ಮಂಟಪ, ಅಶೋಕ ಪುರಂ ವನಿತಾ ಸದನ ಶಾಲೆ, ಜಯನಗ ರದ ಇಸ್ಕಾನ್ ದೇವಸ್ಥಾನದ ಎದುರು ಸಮು ದಾಯ ಭವನ, ಶಾರದಾದೇವಿನಗರ ಇಂದಿರಾ ಕ್ಯಾಂಟೀನ್, ಕುವೆಂಪುನಗರ ಕೆಹಚ್‍ಬಿ ಕಾಂಪ್ಲೆಕ್ಸ್, ಕುಕ್ಕರಹಳ್ಳಿ ಸಮುದಾಯ ಭವನ, ಕುದುರೆಮಾಳ ಸಮುದಾಯ ಭವನ, ಕುಂಬಾರಕೊಪ್ಪಲು ಮಹದೇಶ್ವರ ಸಮುದಾಯ ಭವನ, ಹೆಬ್ಬಾಳು ಕಾಮಧೇನು ಶಿಕ್ಷಣ ಸಂಸ್ಥೆ, ಮೇಟಗಳ್ಳಿ ಕುವೆಂಪು ದಶ ಮಾನೋತ್ಸವ ಸರ್ಕಾರಿ ಪ್ರೌಢಶಾಲೆ, ಆರ್‍ಎಂಸಿ ವೃತ್ತ, ಕೆ.ಆರ್.ಆಸ್ಪತ್ರೆಯ ಇಂದಿರಾ ಕ್ಯಾಂಟೀನ್, ಪುಲಿಕೇಶಿ ರಸ್ತೆಯ ಕೈಲಾಸ ಪುರಂ ಸರ್ಕಾರಿ ಪ್ರೌಢ ಶಾಲೆ, ಉದಯಗಿರಿ ಅಬ್ದುಲ್ ರೆಹಮಾನ್ ರಸ್ತೆಯ ಡಾ. ಅಂಬೇಡ್ಕರ್ ಸಮುದಾಯ ಭವನ, ನಾಯ್ಡು ನಗರದ ಭೋವಿ ಸಮುದಾಯ ಭವನ, ಗಾಯಿತ್ರಿಪುರಂನ ಜಲಪುರಿ ಸಮುದಾಯ ಭವನ, ಕ್ಯಾತಮಾರನ ಹಳ್ಳಿ ಹುಲಿಯಮ್ಮನ ದೇವಸ್ಥಾನದ ಬಳಿಯ ಸಮುದಾಯ ಭವನ, ಕ್ಯಾತಮಾರನಹಳ್ಳಿ ಎ.ಕೆ.ಕಾಲೋನಿಯ ಸಮುದಾಯ ಭವನದಲ್ಲಿ 7300 ನಿರಾಶ್ರಿತ ರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ.
ಇವರಿಗೆ ನಿತ್ಯವೂ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸಲಾಗು ತ್ತಿದೆ. ಮಾನವೀಯ ನೆಲೆಯಲ್ಲಿ ದಾನಿಗಳು ಸಹ ನಿರಾಶ್ರಿತರಿಗೆ ತಿಂಡಿ, ಊಟ ನೀಡಲು ಅವಕಾಶವಿದ್ದು, ಅನೇಕ ಸಂಘ ಸಂಸ್ಥೆಗಳು, ದಾನಿಗಳು ಆಹಾರ ಪೂರೈಸುತ್ತಿದ್ದಾರೆ ಎಂದು ಆಶ್ರಯ ಕೇಂದ್ರಗಳ ಉಸ್ತುವಾರಿ, ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ತಿಳಿಸಿದರು.
ಹೆಚ್.ವಿ.ರಾಜೀವ್, ಗೌರಿಶಂಕರ್, ಬಾಲಚಂದ್ರ, ನಾಗರಾಜ್, ರಾಜೇಂದ್ರ, ಬಸವ ರಾಜು, ಸೌಮ್ಯ, ಪಿ.ಮಹದೇವ, ಪಾರ್ಥಿವ್ ಪಟೇಲ್, ಬಿಷಪ್ ಕೆ. ವಿಲಿಯಂ, ಹರೀಶ್, ಕಿರಣ್, ವಿರೂಪಾಕ್ಷ ಹಾಗೂ ಅನ್ವೇಷಣ ಸೇವಾ ಟ್ರಸ್ಟ್, ಬದ್ರೀಶ್, ಆಸ್ಪದ ಗ್ಲೋಬಲ್ ಸಂಸ್ಥೆ ದಾನಿಗಳ ಪಟ್ಟಿಯಲ್ಲಿವೆ ಎಂದರು.