ಮೈಸೂರು,ಏ.3(ಎಂಟಿವೈ)-ಬಿ.ವೈ. ವಿಜಯೇಂದ್ರ ಅಭಿಮಾನಿಗಳು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹ ದೇವ ಸ್ವಾಮಿ ನೇತೃತ್ವದಲ್ಲಿ ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆ, ಶಾರದಾ ದೇವಿನಗರ ಸೇರಿದಂತೆ ವಿವಿಧೆಡೆ ಅನಾ ರೋಗ್ಯಪೀಡಿತರಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಿದರು.
ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಔಷಧಿ ಪಡೆಯಲಾಗದೆ ಸಂಕಷ್ಟಕ್ಕೀಡಾಗಿರುವ ರೋಗಿಗಳಿಗೆ ಔಷಧಿ ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರಲ್ಲಿ ಬಿ.ವೈ.ವಿಜಯೇಂದ್ರ ಅಭಿ ಮಾನಿಗಳು ಕಾರ್ಯಪ್ರವೃತ್ತರಾಗಿ ವಿವಿ ಧೆಡೆ ರೋಗಿಗಳಿಗೆ ಅಗತ್ಯವಿರುವ ಔಷಧಿ ಸರಬರಾಜು ಮಾಡಿದರು.
ಇದೇ ವೇಳೆ ಪತ್ರಕರ್ತರ ಜತೆ ಮಾತ ನಾಡಿದ ಮಹದೇವಸ್ವಾಮಿ, ಮುಖ್ಯ ಮಂತ್ರಿಗಳ ಸೂಚನೆ ಮೇರೆಗೆ ಮೈಸೂರು ಜಿಲ್ಲೆಯಲ್ಲಿ ರೋಗಿಗಳಿಗೆ ಔಷಧ ವಿತರಿ ಸುವ ಕೆಲಸ ಮಾಡುತ್ತಿದ್ದೇವೆ. ಮೊದಲ ದಿನವಾದ ಶುಕ್ರವಾರ ನಂಜನಗೂಡಲ್ಲಿ ಮಗುವಿಗೆ ತುರ್ತಾಗಿ ಬೇಕಾಗಿದ್ದ ಔಷಧಿ, ಹುಡ್ಕೋ ಬಡಾವಣೆ 28, ಶಾರದಾದೇವಿ ನಗರ ಇಬ್ಬರು ಹೃದ್ರೋಗಿಗಳು, ಲಲಿ ತಾದ್ರಿಪುರದಲ್ಲಿ 16 ಮಂದಿ, ದಂಡೀಕೆರೆ ಯಲ್ಲಿ ಇಬ್ಬರು ವೃದ್ಧರು ಹಾಗೂ ಬೆಳ ವಾಡಿಯಲ್ಲಿ ಒಬ್ಬರಿಗೆ ಔಷಧಿ ವಿತರಿ ಸಿದ್ದೇವೆ ಎಂದು ತಿಳಿಸಿದರು.
ಹೆಚ್.ಡಿ.ಕೋಟೆಯಿಂದ ಓರ್ವ ರೋಗಿಯನ್ನು ಮೈಸೂರಿನ ಆಸ್ಪತ್ರೆಗೆ ಕರೆತರಲು ಅಲ್ಲಿನ ಪೊಲೀಸರ ಸಹಕಾರ ಪಡೆಯಲಾಗಿದೆ. ವಿವಿಧೆಡೆಯಿಂದ ಔಷಧಿ ಗಾಗಿ ಕರೆ ಬಂದಿದೆ. ಶನಿವಾರವೂ ಔಷಧಿ ಪೂರೈಸಲಾಗುವುದು ಎಂದರು.
ಆಹಾರ ಪೂರೈಕೆ: ಕೆಲ ದಿನಗಳಿಂದ ಕರ್ತವ್ಯನಿರತ ಪೊಲೀಸರು ಹಾಗೂ ಬಡವರಿಗೆ ಉಚಿತವಾಗಿ ಮಧ್ಯಾಹ್ನದ ಊಟದ ಪ್ಯಾಕ್ ನೀಡುತ್ತಿರುವ ಬಿ.ವೈ. ವಿಜಯೇಂದ್ರ ಅಭಿಮಾನಿಗಳ ಸಂಘ ದವರು, ಶುಕ್ರವಾರ ಏಕಲವ್ಯ ನಗರ, ಕೊಳೆಗೇರಿ, ಇಂದಿರಾನಗರ, ಡಾ.ಬಿ. ಆರ್. ಅಂಬೇಡ್ಕರ್ ನಗರ, ಯೂತ್ ಹಾಸ್ಟ್ಟೆಲ್ ಮೊದಲಾದೆಡೆ ಆಹಾರ ವಿತ ರಿಸಿದರು. ಈ ಸಂದರ್ಭ ಮುಖಂಡರಾದ ಲಕ್ಷ್ಮೀದೇವಿ, ಆನಂದ್, ನಿಖಿಲ್, ಜೆಸ್ವಿನ್, ನಂದೀಶ್, ಅಪ್ಪು ಹಾಜರಿದ್ದರು.