ನಂಜನಗೂಡು ಸ್ತಬ್ಧ: ಯಾರೊಬ್ಬರು ಹಸಿವು, ದಾಹದಿಂದ ಬಳಲದಂತೆ ಕ್ರಮ ಕೈಗೊಳ್ಳಿ
ಮೈಸೂರು

ನಂಜನಗೂಡು ಸ್ತಬ್ಧ: ಯಾರೊಬ್ಬರು ಹಸಿವು, ದಾಹದಿಂದ ಬಳಲದಂತೆ ಕ್ರಮ ಕೈಗೊಳ್ಳಿ

April 2, 2020

ಜುಬಿಲಿಯಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಂತರ ಅಧಿಕಾರಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ
ಮೈಸೂರು, ಏ.1(ಆರ್‍ಕೆ)- ಲಾಕ್‍ಡೌನ್ ಆಗಿರುವುದರಿಂದ ತೊಂದರೆಗೊಳಗಾಗಿರುವ ಪ್ರತಿಯೊಬ್ಬರಿಗೂ ಊಟೋಪಚಾರದ ವ್ಯವಸ್ಥೆ ಮಾಡಿ. ಅವರು ಬಳಲದಂತೆ ನೋಡಿ ಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡಿ ರುವ ನಂಜನಗೂಡಿನ ಜುಬಿಲಿಯಂಟ್ ಜೆನಿರಿಕ್ಸ್ ಔಷಧ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ನಂಜನ ಗೂಡು ರಸ್ತೆಯಲ್ಲಿರುವ ಕೆಇಬಿ ಇಂಜಿನಿ ಯರ್ಸ್ ಅಸೋಸಿಯೇಷನ್ ಸಭಾಂಗಣ ದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್-19 ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.

ನಂಜನಗೂಡು ಪ್ರದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡಿ ರೆಡ್ ಝೋನ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜನ ಜೀವನ ಸಂಪೂರ್ಣ ಸ್ತಬ್ಧವಾಗಿದೆ. ಅದರಿಂದ ಆಹಾರ ಪದಾರ್ಥ, ಔಷಧ ಸೇರಿದಂತೆ ಅಗತ್ಯ ಸೇವೆಗಳು ಬಂದ್ ಆಗಿರುವ ಕಾರಣ, ತಾಲೂಕು ಆಡಳಿ ತವು ಜನ ಸಾಮಾನ್ಯನ ಅಗತ್ಯತೆ ತಿಳಿದು ತಕ್ಷಣ ಸ್ಪಂದಿಸಬೇಕು. ಯಾರೊಬ್ಬರೂ ಹಸಿವು, ದಾಹದಿಂದ ನರಳಬಾರದು. ಅವರ ಆರೋ ಗ್ಯದ ಕಡೆಯೂ ಗಮನ ಹರಿಸಬೇಕೆಂದು ತಹಸೀಲ್ದಾರ್‍ರಿಗೆ ತಾಕೀತು ಮಾಡಿದರು.

ಕೋವಿಡ್-19 ಸೋಂಕಿನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರುವುದು ರಾಷ್ಟ್ರೀಯ ವಿಕೋಪ ಎನಿಸಿರುವುದರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ ಈ ಪರಿಸ್ಥಿತಿಯನ್ನು ನಿಭಾ ಯಿಸಬೇಕು. ಹೋಂ ಕ್ವಾರಂಟೈನ್ ಮತ್ತು ಐಸೊಲೇಷನ್‍ನಲ್ಲಿರುವವರು ಹೊರ ಬಾರದಂತೆ ಎಚ್ಚರ ವಹಿಸಬೇಕೆಂದು ಸಚಿವರು ನಿರ್ದೇಶನ ನೀಡಿದರು.

ಜುಬಿಲಿಯಂಟ್ ಕಾರ್ಖಾನೆಯ 1,458 ನೌಕರರನ್ನು ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಆ ಪೈಕಿ 761 ಮಂದಿ ನಂಜನಗೂಡಿನವರಾ ಗಿದ್ದು, 697 ನೌಕರರು ಬೇರೆ ಬೇರೆ ತಾಲೂಕಿ ನವರಾಗಿದ್ದು, ಅವರನ್ನೂ ಕ್ವಾರಂಟೈನ್ ಮಾಡಿ ನಿಗಾ ವಹಿಸಲಾಗಿದೆ. ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಿ ಫ್ಯೂಮಿಗೇಷನ್ ಅನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಸಚಿವರಿಗೆ ಕೈಗೊಂಡಿರುವ ಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು.

ಕ್ವಾರಂಟೈನ್‍ನಲ್ಲಿರುವ ನೌಕರರು ಹೊರ ಬಾರದಂತೆ ನಿಗಾ ವಹಿಸಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ಆ ಕಾರ್ಯಕ್ಕೆ ನಿಯೋ ಜಿಸಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ಜುಬಿಲಿಯಂಟ್ ಕಾರ್ಖಾನೆ ಸಂಪೂರ್ಣ ಲಾಕ್ ಆಗಿರುವುದರಿಂದ ಕಾವಲು ಕಾಯು ತ್ತಿರುವ ಸೆಕ್ಯೂರಿಟಿ ಸಿಬ್ಬಂದಿಗೂ ಊಟ, ವಸತಿ, ಆರೋಗ್ಯ ಸೌಕರ್ಯ ಒದಗಿಸಿ. ಅವರೂ ಸಹ ಹೊರಗೆ ಬರದಂತೆ ನೋಡಿ ಕೊಳ್ಳಿ ಎಂದು ಸೋಮಣ್ಣ ನಂಜನಗೂಡು ತಹಸೀಲ್ದಾರ್‍ರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಿ.ಹರ್ಷವರ್ಧನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಡಿಎಸ್ಪಿ ಪ್ರಭಾಕರರಾವ್ ಸಿಂಧೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಚಿವರು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲ ಯದ ದಾಸೋಹ ಭವನಕ್ಕೂ ಭೇಟಿ ನೀಡಿ ಪರಿಶೀಲಿಸಿ, ದೇವಸ್ಥಾನದ ಕಾರ್ಯನಿರ್ವಾ ಹಕ ಅಧಿಕಾರಿಗಳಿಂದ ಮಾಹಿತಿ ಪಡೆದರು.

Translate »