ಹೊಸ ಚಿತ್ರದಲ್ಲಿ ಪೃಥ್ವಿ ಅಂಬರ್
ಸಿನಿಮಾ

ಹೊಸ ಚಿತ್ರದಲ್ಲಿ ಪೃಥ್ವಿ ಅಂಬರ್

April 3, 2020

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದಂಥ ಚಿತ್ರ ದಿಯಾ. ಅಪರೂಪದ ಪ್ರೇಮಕಥಾನಕ ಹೊಂದಿದ್ದ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿ ಅಂಬರ್ ಅವರಿಗೆ ಫಾರ್ ರಿಜಿಸ್ಟ್ರೇಷನ್ ಎಂಬ ಹೆಸರಿನ ಮತ್ತೊಂದು ಚಿತ್ರಕ್ಕೆ ಅವಕಾಶ ಹುಡುಕಿ ಕೊಂಡು ಬಂದಿದೆ. ಅವರ ಹೊಸ ಚಿತ್ರಕ್ಕೆ “ಈoಡಿ ಡಿegಟಿ” ಎಂದು ಹೆಸರಿಡಲಾ ಗಿದ್ದು ಬರುವ ಮೇ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭಿಸಿ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈ ಚಿತ್ರದಲ್ಲಿ ಹಾಸ್ಯನಟ ತಬಲ ನಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೊಮ್ಯಾಂಟಿಕ್ ಜಾನರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ನವೀನ್ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕಥೆ ಕೂಡ ನಿರ್ದೇಶಕರದೇ ಆಗಿದೆ. ಐ.ಟಿ. ಹಿನ್ನೆಲೆ ಹೊಂದಿರುವ ನವೀನ್ ಅವರಿಗೆ ಸುಮಾರು ಐದಾರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವವಿದೆ.

Translate »