ಕರೋನಾದಿಂದ ಪಾರಾದ ರವಿಚಂದ್ರನ್ ಪುತ್ರ
ಸಿನಿಮಾ

ಕರೋನಾದಿಂದ ಪಾರಾದ ರವಿಚಂದ್ರನ್ ಪುತ್ರ

April 3, 2020

ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲಗೊಳಿಸಿರುವ ಕೊರೊನಾ ವೈರಸ್ ಸ್ಯಾಂಡಲ್‍ವುಡ್ ತಾರೆಯರನ್ನೂ ಬಿಟ್ಟಿಲ್ಲ. ಆದರೆ ಮುಂಜಾಗ್ರತೆ ವಹಿಸಿದ್ದರಿಂದ ಕೆಲವರು ಸ್ವಲ್ಪದರಲ್ಲೇ ಪಾರಾದಂಥ ಪ್ರಕರಣವೂ ನಡೆದಿದೆ. ಈಗ ಎ¯್ಲÉಲ್ಲೂ ಕೊರೊನಾ ವೈರಸ್‍ನz್ದÉೀ ಎಫೆಕ್ಟ್. ಅದನ್ನು ಬಿಟ್ಟರೆ ಬೇರೆ ಮಾತೇ ಇಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿz್ದÁರೆ. ಈ ನಡುವೆ ನಾನು ಅದೃಷ್ಟದಿಂದ ಪಾರಾಗಿz್ದÉೀನೆ ಎಂದು ಕೆಲವರು ತಮಗಾದ ಅನುಭವಗಳನ್ನು ಹೇಳಿಕೊಂಡಿz್ದÁರೆ, ಅಂಥವರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಕೂಡ ಒಬ್ಬರು. ಅವರು ತ್ರಿವಿಕ್ರಮ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ಚಿತ್ರತಂಡದೊಂದಿಗೆ ಕೊರೊನಾ ಸೋಂಕಿತ ರಾಷ್ಟ್ರಗಳಲ್ಲಿ ಹಾಡುಗಳ ಶೂಟಿಂಗ್ ನಡೆಸಲು ಹೋಗುತ್ತಿದ್ದ ಅವರು ಕೊರೊನಾ ಹರಡುತ್ತಿರುವ ವಿಷಯ ತಿಳಿದು ತಕ್ಷಣವೇ ವಾಪಸಾಗಿದ್ದಾರೆ.

ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಹಾಗೂ ಚಿತ್ರದ ನಿರ್ದೇಶಕ ಹೆಚ್.ಎಸ್.ಸಹನಾ ಮೂರ್ತಿ ತ್ರಿವಿಕ್ರಮ ಚಿತ್ರದ ಹಾಡಿನ ಶೂಟಿಂಗ್‍ಗಾಗಿ ತಮ್ಮ ತಂಡದ ಜೊತೆ ಥೈಲ್ಯಾಂಡ್‍ಗೆ ಹೋಗಿದ್ದರು. ವಿಕ್ರಮ್ ಹಾಗೂ ಆಕಾಂಕ್ಷಾ ಶರ್ಮಾ ಅಭಿನಯದ ಡ್ಯುಯೆಟ್ ಹಾಡೊಂದರ ಚಿತ್ರೀಕರಣ ನಡೆಸಿ, ನಂತರ ಐಲ್ಯಾಂಡ್‍ಡನಲ್ಲಿ ಚಿತ್ರದ ಸ್ಟಂಟ್ ಸೀನ್‍ಗಳ ಶೂಟಿಂಗ್ ಕೂಡ ಮಾಡಬೇಕಾಗಿತ್ತು. ಆದರೆ ನಮಗಾಗಲೇ ಕೊರೊನಾ ಎಲ್ಲೆಡೆ ಹರಡುತ್ತಿರುವ ಮುನ್ಸೂಚನೆ ಸಿಕ್ಕಿದ್ದರಿಂದ ತಕ್ಷಣ ತಂಡದೊಂದಿಗೆ ಭಾರತಕ್ಕೆ ಮರಳಿದೆವು. ನಾವು ಭಾರತಕ್ಕೆ ಮರಳಿದ ಕೆಲ ದಿನಗಳಲ್ಲೇ ಥೈಲ್ಯಾಂಡ್‍ನಲ್ಲೂ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ ಎಂಬುದು ತಿಳಿಯಿತು ಎಂದು ತ್ರಿವಿಕ್ರಮ ಚಿತ್ರದ ನಿರ್ಮಾಪಕರು ತಮಗಾದ ಅನುಭವ ಹೇಳಿ ಕೊಂಡಿದ್ದಾರೆ.

ನಂತರ ವಿಕ್ರಮ್ ರವಿಚಂದ್ರನ್ ಮಾತನಾಡುತ್ತ, ನಾವು ಅದೃಷ್ಟವಶಾತ್ ಅಪಾಯದಿಂದ ಪಾರಾಗಿz್ದÉೀವೆ. ನಾವೆಲ್ಲ ಥೈಲ್ಯಾಂಡ್‍ಗೆ ಹೋದಾಗ ನಮಗೆ ಕೊರೊನಾ ವೈರಸ್ ಬಗ್ಗೆ ಯಾವುದೇ ಆಲೋಚನೆಯಿರಲಿಲ್ಲ. ಮೊದಲು ಹಾಡನ್ನು ಶೂಟ್ ಮಾಡಿಕೊಂಡು ನಂತರ ಆಕ್ಷನ್ ಸೀನ್ ಚಿತ್ರೀಕರಿಸ ಬೇಕು ಎಂದುಕೊಂಡು ಥೈಲ್ಯಾಂಡ್‍ನಲ್ಲಿ ಚಿತ್ರೀಕರಣ ನಡೆಸಿದೆವು. ಆದರೆ ಐಲ್ಯಾಂಡ್‍ಗ್ ಹೋಗದೆ ವಾಪಸಾಗಿದ್ದು ಒಳ್ಳೆಯದೇ ಆಯಿತು. ಇಲ್ದಿದ್ರೆ ನಾವೆಲ್ಲ ಖಂಡಿತ ಸಿಕ್ಕಿಹಾಕಿಕೊಳ್ಳಬೇಕಿತ್ತು ಎಂದು ಹೇಳಿದರು. ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಬೆಂಗಳೂರು, ಉಡುಪಿ, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರ, ರಾಜಸ್ಥಾನ, ಜೋಧಪುರ ಸೇರಿದಂತೆ ಸಾಕಷ್ಟು ಸುಂದರ ತಾಣಗಳಲ್ಲಿ ಈ ಚಿತ್ರದ ಹಾಡು ಹಾಗೂ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಗಿದೆ.

ಬಾಲಿವುಡ್ ನಟ ರೋಹಿತ್ ರಾಯï, ಸಾಧು ಕೋಕಿಲ, ಚಿಕ್ಕಣ್ಣ ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನಟಿಸಿz್ದÁರೆ.

Translate »