ಮನೆಯಲ್ಲೇ ಇರಿ… ಸೀರಿಯಲ್ ನೋಡಿ… ಟಿವಿಯಲ್ಲಿ ಮತ್ತೆ `ರಾಮಾಯಣ’, `ಮಹಾಭಾರತ’
ಮೈಸೂರು

ಮನೆಯಲ್ಲೇ ಇರಿ… ಸೀರಿಯಲ್ ನೋಡಿ… ಟಿವಿಯಲ್ಲಿ ಮತ್ತೆ `ರಾಮಾಯಣ’, `ಮಹಾಭಾರತ’

April 2, 2020

`ಲಾಕ್‍ಡೌನ್’ ಸಂದರ್ಭ ಪೌರಾಣಿಕ ಪ್ರಸಂಗ; ಹಿರಿಯರು, ಪುಟಾಣಿಗಳಿಗೆ ಮನರಂಜನೆ

ಮೈಸೂರು, ಏ.1(ಆರ್‍ಕೆಬಿ)- 1980ರ ದಶಕ ದಲ್ಲಿ ಟಿವಿಗಳಲ್ಲಿ ಭಾರೀ ಸದ್ದು ಮಾಡಿದ್ದ `ರಾಮಾ ಯಣ’ ಮತ್ತು `ಮಹಾಭಾರತ’ ಧಾರಾವಾಹಿ ಗಳು ಈಗ ಮತ್ತೆ ಪ್ರಸಾರಗೊಳ್ಳುತ್ತಿದ್ದು, ಜನ ರನ್ನು ತನ್ನತ್ತ ಸೆಳೆಯುತ್ತಿವೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ 21 ದಿನಗಳವರೆಗೆ `ಲಾಕ್‍ಡೌನ್’ ಜಾರಿಗೊಳಿಸಲಾ ಗಿದೆ. `ಮನೆಯಲ್ಲೇ ಇರಿ, ಸ್ವಸ್ಥವಾಗಿರಿ’ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದ ರಿಂದ `ದಿನದೂಡುವುದು ಹೇಗಪ್ಪಾ?’ ಎಂದು ಜನರು ಚಿಂತಿತರಾಗಿದ್ದರು.

ಮನೆಯೊಳಗೆ ಕಡ್ಡಾಯ ರಜೆ ಅಥವಾ ಲಾಕ್‍ಡೌನ್ ಪರಿಣಾಮ ಅನುಭವಿಸಲಾಗದ ಜನತೆ `ಮನೆಯೊಳಗೇ ಕುಳಿತು ಕಾಲ ಕಳೆಯು ವುದು ಕಷ್ಟವಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿ ರುವ ಮನೆಗಳ ಪೋಷಕರಿಗಂತೂ ಮಕ್ಕಳನ್ನು ನಿಯಂತ್ರಿಸುವುದು ಬಲು ಕಷ್ಟವಾಗಿದೆ. ರಾಮಾ ಯಣ, ಮಹಾಭಾರತ ಧಾರಾವಾಹಿಗಳನ್ನು ದೂರದರ್ಶನದಲ್ಲಿ ಮರುಪ್ರಸಾರ ಮಾಡಿದರೆ ಮನರಂಜನೆಯ ಜತೆಗೆ ಮಕ್ಕಳಿಗೂ ಪುರಾಣದ ಕಥೆಗಳನ್ನು ತಿಳಿಸಿಕೊಡಲು ಅನುಕೂಲವಾಗು ತ್ತದೆ’ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ದರು. ಜನರ ಬೇಡಿಕೆ ಈಡೇರಿಸಿದ ವಾರ್ತಾ ಮತ್ತು ಪ್ರಸಾರ ಇಲಾಖೆ, ದೂರದರ್ಶನ ಚಾನೆಲ್ ನಲ್ಲಿ `ರಾಮಾಯಣ’ ಧಾರಾವಾಹಿಯನ್ನು ಪ್ರತಿ ದಿನ ಬೆಳಿಗ್ಗೆ 9ರಿಂದ 10 ಮತ್ತು ರಾತ್ರಿ 9ರಿಂದ 10ರವರೆಗೆ 2 ಕಂತು ಪ್ರಸಾರವಾಗುತ್ತಿವೆ. `ದೂರ ದರ್ಶನ ಭಾರತಿ’ ಚಾನೆಲ್‍ನಲ್ಲಿ `ಮಹಾಭಾರತ’ ಧಾರಾವಾಹಿ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ದಿನಕ್ಕೆ 2 ಕಂತುಗಳಂತೆ ಪ್ರಸಾರವಾಗುತ್ತಿದೆ.

1980ರ ದಶಕದಲ್ಲಿ `ರಾಮಾಯಣ’ ಮತ್ತು `ಮಹಾಭಾರತ’ ಧಾರಾವಾಹಿಗಳು ಪ್ರಸಾರದ ಅವಧಿಯಲ್ಲಿ ಜನರನ್ನು ಅತ್ತಿತ್ತ ಹೋಗದಂತೆ ಇಡೀ ಕುಟುಂಬ ಒಟ್ಟಿಗೆ ಕುಳಿತು ಆನಂದದಿಂದ ಧಾರಾವಾಹಿ ವೀಕ್ಷಿಸುತ್ತಿದ್ದರು. ಕೋಟ್ಯಂತರ ಜನ ಪ್ರಸಾರದ ಅವಧಿಯಲ್ಲಿ ಮನೆಯಲ್ಲೇ ಇರುತ್ತಿದ್ದರು.

ದೇಶದ ಜನರ ಒತ್ತಾಯದ ಮೇರೆಗೆ ಮಾ.28 ರಿಂದ ಈ 2 ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದರು. ಮಾ.28ರಂದು ಮೊದಲ 2 ಎಪಿ ಸೋಡ್ ಪ್ರಸಾರವಾಗುತ್ತಿದ್ದಂತೆ ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಮಹಾಭಾರತದ ಕೃಷ್ಣ, ಪಾಂಡವರು, ದ್ರೌಪದಿ, ದುರ್ಯೋಧನ ಪಾತ್ರಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

`ರಾಮಾಯಣ’ದಲ್ಲಿ ರಾಮನಾಗಿ ಅರುಣ್ ಗೋಯಲ್, ಸೀತೆಯಾಗಿ ದೀಪಿಕಾ, ಲಕ್ಷ್ಮಣನಾಗಿ ಸುನಿಲ್ ಲಹರಿ, ರಾವಣನಾಗಿ ಅರವಿಂದ್ ತ್ರಿವೇದಿ, ರಾಮಭಂಟ ಹನುಮಂತನಾಗಿ ದಾರಾಸಿಂಗ್ ಅಭಿನಯ ಮರೆಯುವಂತೆಯೇ ಇಲ್ಲ. `ಮಹಾಭಾರತ’ದ ಪಾಂಡವರಾಗಿ ಗಜೇಂದ್ರ ಚೌಹಾನ್, ಪ್ರವೀಣ್‍ಕುಮಾರ್, ಅರ್ಜುನ್, ಸಮಿರ್ ಚಿತ್ರೆ, ಸಂಜೀವ್ ಚಿತ್ರೆ, ಕೃಷ್ಣನಾಗಿ ನಿತೀಶ್ ಭಾರದ್ವಾಜ್, ಭೀಷ್ಮನಾಗಿ ಮುಖೇಶ್ ಖನ್ನ, ದುರ್ಯೋಧನನಾಗಿ ಪುನೀತ್ ಇಸ್ಸಾರ್, ದ್ರೌಪದಿ ಯಾಗಿ ರೂಪಾ ಗಂಗೂಲಿ ನೋಡುಗರ ಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ದೇಶದ ಜನರನ್ನು ರಾಮಾಯಣ, ಮಹಾಭಾರತ ಸೆಳೆಯುತ್ತಿದೆ. 4 ದಶಕಗಳ ಹಿಂದೆ ಮನೆ ಮಾತಾಗಿದ್ದ ಈ ಧಾರಾವಾಹಿ ಗಳು ಮತ್ತೊಮ್ಮೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ.

 

 

 

 

Translate »