‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ
ಕೊಡಗು

‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ

April 18, 2020

ಮಡಿಕೇರಿ,ಏ.17-ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಏ.20ರಂದು ಸಂಜೆ 5 ಗಂಟೆಗೆ ‘ಕೊರೊನಾ ವಾರಿಯರ್ಸ್‍ಗೆ ಗೌರವ’ ವಿಶೇಷ ಸರಣಿ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಕೊರೊನಾ-19ರ ಸಂದರ್ಭದಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನೇರ-ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಭಾಗವಹಿಸಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.

ರೇಡಿಯೋ ಕೇಳುಗರು ದೂ.ಸಂ. 9740871827ಕ್ಕೆ ಆರೋಗ್ಯ ಇಲಾಖೆಯ ಕೆಲಸಗಳ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಎಸ್‍ಎಂಎಸ್ ಹಾಗೂ ವಾಟ್ಸ್‍ಆಪ್ ಮೂಲಕ ಕಳುಹಿಸುವುದರೊಂದಿಗೆ ಈ ಕಾರ್ಯಕ್ರಮದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಇದರಂತೆ ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಪ್ರತೀ ದಿನವೂ ಕೊರೊನಾ ವೈರಸ್‍ಗೆ ಸಂಬಂಧಿಸಿದ ಸುದ್ದಿಗಳು, ಸಂದರ್ಶನಗಳು, ಮಾಹಿತಿ, ಹಾಡು, ಸಂವಾದ ಮುಂತಾದವು ಪ್ರಸಾರವಾಗುತ್ತಿವೆ ಎಂದು ಕಾರ್ಯಕ್ರಮ ನಿರ್ವಾಹಕ ವಿಜಯ್ ಅಂಗಡಿ ತಿಳಿಸಿದ್ದಾರೆ.

Translate »