ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಆಹಾರ ವಿತರಿಸಿದ ಶಿಕ್ಷಕಿ
ಕೊಡಗು

ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಆಹಾರ ವಿತರಿಸಿದ ಶಿಕ್ಷಕಿ

April 18, 2020

ಮಡಿಕೇರಿ, ಏ.17- ತಾಲೂಕಿನ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಕೆ.ಎಂ.ವಿಮಲ ಸರ್ಕಾರದ ಆದೇಶದಂತೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿ ಗಳ ಪೋಷಕರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಒಂದನೇ ಹಂತದಲ್ಲಿ ಶೇ. 60 ಅಕ್ಷರ ದಾಸೋಹ ಆಹಾರವನ್ನು ಪೋಷಕರಿಗೆ ವಿತರಿಸಿದರು.

ಶಾಲೆಯಿಂದ ಬಟ್ಟೆಯ ಚೀಲದಲ್ಲಿ ಆಹಾರವನ್ನು ಅವರ ಸ್ವಂತ ಕಾರಿನಲ್ಲಿ ತುಂಬಿ ವಿದ್ಯಾರ್ಥಿಗಳ ಪೋಷಕರಿಗೆ ಆಹಾರವನ್ನು ವಿತರಿಸಿದ್ದು, ಇದರಿಂದ ಹಷರ್Àಗೊಂಡ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿ ಕೆ.ಎಂ.ವಿಮಲ ಅವರ ಮಾನವೀಯತೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಶಿಕ್ಷಕಿ ವಿಮಲ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾದಳ ರಚಿಸಿ ಬಡ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ಈ ಶಿಕ್ಷಕರು ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಮಾಜಿ ಸೈನಿಕ ಅವರ ಪತಿ ಬೆಳ್ಯಪ್ಪನವರ ಪ್ರೋತ್ಸಾಹ ಸಹಕಾರ ಶ್ಲಾಘನೀಯ. ವಿಮಲರವರ ಹಲವು ಉತ್ತಮ ಕಾರ್ಯಗಳನ್ನು ಮೆಚ್ಚಿ ಶಾಲೆಯ ಮುಖ್ಯ ಶಿಕ್ಷಕಿ ವೈ.ಎ.ತಂಗಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷÀ ಪೌಜಿಯ ಶಿಕ್ಷಕಿ ವಿಮಲರವರ ಸಮಾಜಿಮುಖಿ ಕಾರ್ಯ ಮೆಚ್ಚಿ ಅಭಿನಂದಿಸಿದ್ದಾರೆ.

Translate »