ರೈತರು, ಸಣ್ಣ ಪುಟ್ಟ ವೃತ್ತಿನಿರತರ ಮೇಲೆ ಖಾಸಗಿ ಹಣಕಾಸು ಸಂಸ್ಥೆಗಳ ಒತ್ತಡ: ಸಚಿವ ಸೋಮಶೇಖರ್ ಬೇಸರ
ಮೈಸೂರು

ರೈತರು, ಸಣ್ಣ ಪುಟ್ಟ ವೃತ್ತಿನಿರತರ ಮೇಲೆ ಖಾಸಗಿ ಹಣಕಾಸು ಸಂಸ್ಥೆಗಳ ಒತ್ತಡ: ಸಚಿವ ಸೋಮಶೇಖರ್ ಬೇಸರ

April 18, 2020

ಬೆಂಗಳೂರು, ಏ.17(ಕೆಎಂಶಿ)- ಕರ್ನಾಟಕದಲ್ಲಿ ಹಲವು ಕಡೆ ಜಿಲ್ಲಾ ಪ್ರವಾಸದ ಸಂದ ರ್ಭದಲ್ಲಿ ರೈತಾಪಿ ವರ್ಗದವರು ಹಾಗೂ ಸಾರ್ವ ಜನಿಕರು ಹಲವಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮ ಶೇಖರ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಖಾಸಗಿ ಹಣಕಾಸು ಬ್ಯಾಂಕು/ಸಂಸ್ಥೆಗಳಾಗಿರುವ ಬಜಾಜ್, ಟಿ.ವಿ.ಎಸ್. ಕ್ರೆಡಿಟ್ ಸೇರಿ ಇನ್ನಿತರೆ ಬ್ಯಾಂಕೇತರ ಹಾಗೂ ಲೇವಾದೇವಿ ದಾರರಿಂದ ಪಡೆದಿರುವ ಸಾಲವನ್ನು ಶೀಘ್ರ ಮರು ಪಾವತಿಸುವಂತೆ ತಮ್ಮ ಮೇಲೆ ತೀವ್ರತರ ಒತ್ತಡ ಹೇರುತ್ತಿರುವ ಬಗ್ಗೆ ಅಂಗವಿಕಲರು, ರೈತ ಕಾರ್ಮಿ ಕರು, ವಿಡಿಯೋಗ್ರಾಫರ್ ಹಾಗೂ ಇನ್ನಿತರ ಸಣ್ಣ ಪುಟ್ಟ ಕೆಲಸ ನಿರ್ವ ಹಿಸುತ್ತಿರುವ ನಾಗರಿಕರು ದೂರು ನೀಡಿದ್ದಾರೆ ಎಂದರು.

ಕೋವಿಡ್-19 ಸಂದಿಗ್ಧ ಪರಿಸ್ಥಿತಿ ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳ ಸಾಲದ ಕಂತು ಗಳನ್ನು ಮರುಪಾವತಿಸಲು ಮಾರ್ಚ್ 2020ರಿಂದ ಜೂನ್ 2020ರ ಅವಧಿಗೆ ವಿಸ್ತರಿಸಿದ್ದಾಗ್ಯೂ, ಖಾಸಗಿ ಹಣಕಾಸು ಸಂಸ್ಥೆಗಳು ಜನ ಸಾಮಾನ್ಯರಿಗೆ ಸಾಲ ಮರುಪಾವತಿ ಮಾಡಲು ನೋಟಿಸ್ ನೀಡುವುದು ಹಾಗೂ ಒತ್ತಾಯ ಮಾಡುತ್ತಿರುವುದು ತಿಳಿದು ಬಂದಿದೆ.

ಹೀಗಾಗಿ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡದಂತೆ ಸಂಬಂಧಪಟ್ಟ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡ ಬೇಕಿದೆ ಎಂದು ತಿಳಿಸಿದ್ದಾರೆ.

Translate »