ರೈತರ ಕಲ್ಯಾಣಕ್ಕೆ ಬದ್ಧವಾದ ಕೇಂದ್ರ ಬಜೆಟ್
ಮೈಸೂರು

ರೈತರ ಕಲ್ಯಾಣಕ್ಕೆ ಬದ್ಧವಾದ ಕೇಂದ್ರ ಬಜೆಟ್

February 14, 2021

ಮೈಸೂರು, ಫೆ.13(ಆರ್‍ಕೆಬಿ)- ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದು, 1,197 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ 10,904 ಕೋಟಿ ರೂ., 2021-22ರಲ್ಲಿ ಕರ್ನಾಟಕದಲ್ಲಿ 1,16,144 ಕೋಟಿ ರೂ.ಗಳ ಮೂಲ ಸೌಕರ್ಯ ವ್ಯವಸ್ಥೆ, 2ನೇ ಹಂತದ ಬೆಂಗ ಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋಟಿ ರೂ., ಬೆಂಗಳೂರು ಉಪ ನಗರ ಯೋಜನೆಗೆ 23,093 ಕೋಟಿ ರೂ. ಅನುದಾನ, ಕರ್ನಾಟಕದ ರೈಲ್ವೆ ಯೋಜನೆ ಗಳಿಗೆ 4,870 ಕೋಟಿ ರೂ. ಅನುದಾನ, ತುಮಕೂರು 7,725 ಕೋಟಿ ರೂ. ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಮೂಲಕ 2.8 ಲಕ್ಷ ಉದ್ಯೋಗಾವಕಾಶ ದೊರಕಿಸ ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಕುರಿತು ವಿವರ ನೀಡಿದರು. ಉತ್ತರ ಕರ್ನಾಟಕ ಭಾಗದಲ್ಲಿ 21,000 ಕೋಟಿ ವೆಚ್ಚದಲ್ಲಿ 13 ಹೆದ್ದಾರಿ ನಿರ್ಮಾಣದ ಯೋಜನೆಗೆ ಅನು ಮೋದನೆ ನೀಡಿದೆ ಎಂದು ಹೇಳಿದರು.

ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಕೇಂದ್ರ ಬಜೆಟ್‍ನಲ್ಲಿ ಹಳ್ಳಿಗಳಲ್ಲಿ ಆಸ್ತಿ ಮಾಲೀಕ ರಿಗೆ ಹಕ್ಕುಪತ್ರ ನೀಡುವ `ಸ್ವಾಮಿತ್ವ ಯೋಜನೆ’ ಎಲ್ಲ ರಾಜ್ಯ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. 16.5 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆ ಗುರಿ ಹೊಂದಿದ್ದು, ಹೈನುಗಾರಿಕೆ, ಮೀನುಗಾರಿಕೆಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿದೆ. ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿಗೆ 40,000 ಕೋಟಿಗೆ ಏರಿಸಿದೆ. ಸೂಕ್ಷ್ಮ ನೀರಾವರಿ ಯೋಜನೆಗಳಿಗೆ 10,000 ಕೋಟಿ ರೂ. ಇಟ್ಟಿದ್ದು, ಅನುದಾನ ಇಮ್ಮಡಿ ಯಾಗಿದೆ. ಶೀಘ್ರ ಹಾಳಾಗುವ ಹಣ್ಣು, ತರಕಾರಿಯಂತಹ ಹೆಚ್ಚುವರಿ 22 ಕೃಷಿ ಉತ್ಪನ್ನಗಳು `ಅಪರೇಷನ್ ಗ್ರೀನ್ ಯೋಜನೆ’ ವ್ಯಾಪ್ತಿಗೆ ಬರಲಿದೆ. ಎಪಿಎಂಸಿ ಬಲವರ್ಧ ನೆಗೆ ಕೃಷಿ ಮೂಲ ಸೌಕರ್ಯ ನಿಧಿ ಬಳಕೆಗೆ ಅನುಮತಿ ನೀಡಿದೆ.1000 ಎಪಿಎಂಸಿ ಮಂಡಿ ಗಳನ್ನು ಎಲೆಕ್ಟ್ರಾನಿಕ್ ರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗೆ ಸಂಯೋಜಿಸಲು ಅನುಮತಿ ನೀಡಿದೆ. ನರೇಗಾ ಯೋಜನೆಗೆ 73,000 ಕೋಟಿ ನೀಡಿದೆ. ಗುತ್ತಿಗೆ ಮತ್ತು ಇತರೆ ಕಾರ್ಮಿಕ ರಿಗೆ ಸಾಮಾಜಿಕ ಭದ್ರತಾ ಸೌಲಭ್ಯವನ್ನು ವಿಸ್ತರಿಸಿದೆ ಎಂದು ಹೇಳಿದರು.

ಸಮಗ್ರ ಮತ್ತು ಯೋಗಕ್ಷೇಮಕ್ಕೆ 2,23, 846 ಕೋಟಿ ರೂ. ಹಂಚಿಕೆ ಮಾಡಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.137ರಷ್ಟು ಏರಿಕೆಯಾಗಿದೆ. ಕೋವಿಡ್-19 ಲಸಿಕೆ ನೀಡು ವಿಕೆ ಅಭಿಯಾನಕ್ಕೆ 35,000 ಕೋಟಿ ರೂ., 17,788 ಗ್ರಾಮೀಣ ಮತ್ತು 11,024 ನಗರ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಿಗೆ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆ ಮೂಲಕ ನೆರವು, 602 ಜಿಲ್ಲೆಗಳು ಹಾಗೂ 12 ಕೇಂದ್ರ ಸಂಸ್ಥೆಗಳಲ್ಲಿ ತುರ್ತುನಿಗಾ ಘಟಕಗಳ ಆರಂಭ, ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಸಾರ್ವ ಜನಿಕ ಆರೋಗ್ಯ ಪ್ರಯೋಗಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.

ಮೂಲ ಸೌಕರ್ಯ-ರಾಷ್ಟ್ರೀಯ ಹೆದ್ದಾರಿ: ಎಕ್ಸ್‍ಪ್ರೆಸ್ ಹೆದ್ದಾರಿಗೆ 1,18,000ಕೋಟಿ ರೂ. ನಿಗದಿ, ದೆಹಲಿ-ಮುಂಬೈ, ಬೆಂಗ ಳೂರು-ಚೆನ್ನೈ ಎಕ್ಸ್‍ಪ್ರೆಸ್ ಹೆದ್ದಾರಿ ನಿರ್ಮಾ ಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲನೆ. ದೆಹಲಿ-ಡೆಹರಾಡೂನ್ ಎಕನಾಮಿಕ್ ಕಾರಿ ಡಾರ್ ಪ್ರಸಕ್ತ ವರ್ಷ ಆರಂಭ. ಭಾರತ್ ಮಾಲಾ ಯೋಜನೆಯಡಿ 3.3 ಲಕ್ಷ ಕೋಟಿ ರೂ. ವೆಚ್ಚದಲ್ಲಿ 13,000 ಕಿ.ಮೀ ರಸ್ತೆ ನಿರ್ಮಾಣಕ್ಕೆ ್ಕ ಚಾಲನೆ ನೀಡಲಾಗಿದೆ. (ಈಗಾಗಲೇ 3,800 ಕಿ.ಮೀ ರಸ್ತೆ ಸಿದ್ಧ)

ಭಾರತೀಯ ರೈಲ್ವೆ: ಮೇಕ್ ಇನ್ ಇಂಡಿಯಾ ಯೋಜನೆಯಡಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸುಸಜ್ಜಿತ ಗೊಳಿಸುವುದು. ಈಸ್ಟ್‍ಕೋಸ್ಟ್ ಕಾರಿ ಡಾರ್-ಖಾರಘ್‍ಪುರದಿಂದ ವಿಜಯ ವಾಡ, ಈಸ್ಟ್ ವೆಸ್ಟ್ ಕಾರಿಡಾರ್‍ನಿಂದ ಭೂಸಾವರ್-ಖಾರಘ್‍ಪುರ್, ಧಂಕುಣಿ, ನಾರ್ಥ್ ಸೌತ್ ಕಾರಿಡಾರ್‍ನಿಂದ ಇಟಾರ್ಸಿ – ವಿಜಯವಾಡ ಯೋಜನೆ ರೂಪಿಸಿ 2022ರೊಳಗೆ ಕಾರ್ಯಾರಂಭ. ಪ್ರಸಕ್ತ ವರ್ಷದಲ್ಲಿ ಭಾರತೀಯ ರೈಲ್ವೆಯಲ್ಲಿ ದಾಖ ಲೆಯ 1.07 ಲಕ್ಷ ಕೋಟಿ ರೂ. ಬಂಡ ವಾಳ ಹೂಡಿಕೆ. 2021ರ ಅಂತ್ಯಕ್ಕೆ ಶೇ.72ರಷ್ಟು ಹಾಗೂ 2023ರ ಡಿಸೆಂಬರ್ ವೇಳೆಗೆ ಶೇ.100ರಷ್ಟು ಎಲ್ಲ ಬ್ರಾಡ್‍ಗೇಜ್ ಮಾರ್ಗಗಳ ವಿದ್ಯುದ್ಧೀಕರಣ.

ಸರ್ವರಿಗೂ ನೈಸರ್ಗಿಕ ಅನಿಲ ಪೂರೈಕೆ ಯತ್ನ: ಉಜ್ವಲ ಯೋಜನೆಯಡಿ ಇನ್ನೂ 1 ಕೋಟಿ ಮಹಿಳೆಯರಿಗೆ ಸಬ್ಸಿಡಿ ಸಹಿತ ಉಚಿತ ಅಡುಗೆ ಅನಿಲದ ಸಂಪರ್ಕ. ಮುಂದಿನ 3 ವರ್ಷದಲ್ಲಿ 100 ಜಿಲ್ಲೆಗಳಲ್ಲಿ ಅನಿಲ ವಿತರಣಾ ಜಾಲದ ವ್ಯವಸ್ಥೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನಿಲ ಕೊಳವೆ ಮಾರ್ಗ ಯೋಜನೆಯ ಪ್ರಸ್ತಾಪ. ಸ್ವತಂತ್ರ ಅನಿಲ ಸಾಗಣೆ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ.

ಇಂಧನ ಕ್ಷೇತ್ರ: ಗ್ರಾಹಕರಿಗೆ ತಮಗೆ ಅನುಕೂಲವಾಗುವ ಪವರ್ ಡಿಸ್ಟ್ರಿಬ್ಯೂಷನ್ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ. ಹಸಿರು ಇಂಧನ ಮೂಲಗಳಿಂದ ಸಮಗ್ರ ಹೈಡ್ರೋಜನ್ ಎನರ್ಜಿ ಮಿಷನ್ ಸ್ಥಾಪನೆ. ಪ್ರಸರಣಾ ವ್ಯವಸ್ಥೆಯು ಹೆಚ್ಚು ಗ್ರಾಹಕ ಸ್ನೇಹಿ ಯಾಗಲು ಮುಂದಿನ 5 ವರ್ಷಗಳಲ್ಲಿ 3,05,984 ಕೋಟಿ ರೂ. ವೆಚ್ಚದ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ನೂತನ ಮೂಲ ಸೌಕರ್ಯ ನಿರ್ಮಾಣ.

ಆತ್ಮನಿರ್ಭರ ಭಾರತಕ್ಕೆ ಬೆಂಬಲ: ಹತ್ತಿ ಮೇಲಿನ ಸೀಮಾ ಸುಂಕವನ್ನು ಶೂನ್ಯದಿಂದ ಶೇ.10ಕ್ಕೆ ಹಾಗೂ ಕಚ್ಛಾ ರೇಷ್ಮೆ ಮತ್ತು ರೇಷ್ಮೆ ನೂಲಿನ ಮೇಲಿನ ಸುಂಕವನ್ನು ಶೇ.15ಕ್ಕೆ ಏರಿಕೆ. ಭಾರತದಲ್ಲಿ ತಯಾರಾಗುವ ಸಿದ್ಧ ಉಡುಪುಗಳು, ಚರ್ಮದ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ರಫ್ತಿಗೆ ಬೆಂಬಲ ನೀಡಲು ಈ ಮಾದರಿಯ ವಸ್ತುಗಳ ಆಮದಿನ ಮೇಲೆ ಸುಂಕ. ಸಿಂಥೆಟಿಕ್ ರತ್ನದ ಕಲ್ಲು ಮತ್ತು ಹರಳುಗಳು ಭಾರತದಲ್ಲೇ ಸಂಸ್ಕರಿ ಸಲು ಪೆÇ್ರೀತ್ಸಾಹ, ಸಿದ್ಧಪಡಿಸಿದ ಸಿಂಥೆಟಿಕ್ ರತ್ನ ಮತ್ತು ಹರಳಿನ ಆಮದಿನ ಮೇಲೆ ಸುಂಕ. ಟನಲ್ ಬೋರಿಂಗ್ ಮಿಷಿನ್‍ಗಳು ಮತ್ತು ಆಯ್ಕೆಯಾದ ಆಟೊಮೊಬೈಲ್ ಉಪ ಕರಣಗಳು, ವಾಹನಗಳ ಇಜ್ಞೈಷನ್ ವಯರ್ ಗಳು, ಸುರಕ್ಷಿತ ಗ್ಲಾಸ್‍ಗಳು ಹಾಗೂ ಸಿಗ್ನಲ್ ಸಂಬಂಧಿತ ಪರಿಕರಗಳ ಮೇಲೆ ಆಮದು ಸುಂಕ. ಭಾರತದಲ್ಲೇ ಮೊಬೈಲ್ ಮತ್ತು ಮೌಲ್ಯ ವರ್ಧಿತ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾ ದನೆಗೆ ಬೆಂಬಲವಾಗಿ ಮೊಬೈಲ್‍ನ ಕೆಲವು ಬಿಡಿ ಭಾಗಗಳ ಮೇಲಿನ ಶೂನ್ಯ ಆಮದು ಸುಂಕ ಹಿಂತೆಗೆತ. ಈ ಎಲ್ಲ ಕ್ರಮಗಳಿಂದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ.

Translate »