ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಗೊಂಡಿತು  ಮೈಸೂರು `7 ಸ್ಟಾರ್’ ಪಟ್ಟಕ್ಕೇರುವ ಪ್ರಕ್ರಿಯೆ!
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಗೊಂಡಿತು ಮೈಸೂರು `7 ಸ್ಟಾರ್’ ಪಟ್ಟಕ್ಕೇರುವ ಪ್ರಕ್ರಿಯೆ!

January 10, 2021

ಮೈಸೂರು, ಜ.9(ಪಿಎಂ)- ಶುದ್ಧೀಕರಿ ಸಿದ ತ್ಯಾಜ್ಯ ನೀರು ಬಳಕೆ ಮೂಲಕ 2021ರ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ `ಮೈಸೂರು ನಗರ’ `7 ಸ್ಟಾರ್’ ಪಟ್ಟ ಪಡೆಯಲು ಚಾಮುಂ ಡೇಶ್ವರಿ ಕ್ಷೇತ್ರದ ಮೈಸೂರಿನ ನಿವೇದಿತಾ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾ ನವನದಿಂದ ಮಹಾ ನಗರಪಾಲಿಕೆ ಕಾರ್ಯಚಟುವಟಿಕೆ ಆರಂಭಿಸಿದೆ.

ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನವನದಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರಿನಿಂದ ಕಾರ್ಯ ನಿರ್ವಹಿಸುವ ಕಾರಂ ಜಿಗೆ ಶನಿವಾರ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ಎಲ್ಲಾ ಕಾರಂಜಿಗಳಿಗೂ ಇದನ್ನು ವಿಸ್ತರಿ ಸಲು ಪಾಲಿಕೆ ಯೋಜನೆ ರೂಪಿಸುತ್ತಿದೆ.

ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರಂಜಿ ಉದ್ಘಾಟಿಸಿದರು.

ಪ್ರಸಕ್ತ ವರ್ಷದ ಸ್ವಚ್ಛ ಸರ್ವೇಕ್ಷಣಾ 2021 ಜ.1ರಿಂದ ಪ್ರಾರಂಭವಾಗಿದ್ದು, ಸದರಿ ಸ್ಪರ್ಧೆಯ ಮಾರ್ಗಸೂಚಿಗಳ ಅನ್ವಯ `ವಾಟರ್ ಪ್ಲಸ್’ ನಗರ ಎಂಬ ಗರಿಮೆ ಪಡೆಯಲು ಶುದ್ಧೀಕರಿಸಿದ ತ್ಯಾಜ್ಯ ನೀರು ಮರುಬಳಕೆಗೆ ಪಾಲಿಕೆ ಮುಂದಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಕೆಸರೆ, ರಾಯನಕೆರೆ ಮತ್ತು ವಿದ್ಯಾರಣ್ಯ ಪುರಂನ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಒಟ್ಟು 157.65 ಎಂಎಲ್‍ಡಿ ತ್ಯಾಜ್ಯ ನೀರು ಶುದ್ಧೀಕರಣಗೊಳಿಸುವ ಸಾಮಥ್ರ್ಯ ಹೊಂದಿವೆ.

ಈ ಘಟಕಗಳ ಶುದ್ಧೀಕರಿಸಿದ ನೀರನ್ನು ಕೃಷಿ ಚಟುವಟಿಕೆ ಹಾಗೂ ಗಾಲ್ಫ್ ಕೋರ್ಸ್ ಗಳಿಗೆ ನಿತ್ಯ ಸರಬರಾಜು ಮಾಡಲಾಗು ತ್ತಿದೆ. ಇದೀಗ ನಗರದ ಎಲ್ಲಾ ಕಾರಂಜಿಗಳಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬಳಸುವ ಉದ್ದೇಶದೊಂದಿಗೆ ಇಂದು ಮೊಟ್ಟ ಮೊದಲಿಗೆ ಸುಬ್ಬರಾವ್ ಉದ್ಯಾನವನದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂಬಂಧ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿದ ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜ್, ಮುಂದಿನ ದಿನ ಗಳಲ್ಲಿ ನಗರದ ಎಲ್ಲಾ ಕಾರಂಜಿಗಳಲ್ಲಿ ಇದನ್ನು ಅಳವಡಿಸುವ ಉದ್ದೇಶ ಹೊಂದಲಾಗಿದೆ. ಪಾಲಿಕೆ ಮೂರು ತ್ಯಾಜ್ಯ ನೀರು ಶುದ್ಧೀ ಕರಣ ಘಟಕಗಳಿಂದ ಪ್ರತಿದಿನ 120ರಿಂದ 125 ಎಂಎಲ್‍ಡಿ ನೀರು ಶುದ್ಧೀಕರಿಸ ಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಸೀವೇಜ್ ಫಾರಂನಲ್ಲಿ ಹುಲ್ಲು ಬೆಳೆಯಲು ಶುದ್ಧೀಕರಿಸಿದ ತ್ಯಾಜ್ಯ ನೀರು ಮರು ಬಳಕೆ ಮಾಡಲಾಗುತ್ತಿದೆ. ಗಾಲ್ಫ್ ಕ್ಲಬ್ ತೋಟಗಾರಿಕೆಗೂ ನೀಡಲಾಗುತ್ತಿದೆ. ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣಾದಲ್ಲಿ ಮೈಸೂ ರಿಗೆ `5 ಸ್ಟಾರ್’ ಸ್ಥಾನ ದೊರೆತಿದೆ. ಈ ಬಾರಿ `ವಾಟರ್ ಪ್ಲಸ್’ ಸ್ಥಾನ ಪಡೆದರೆ `7 ಸ್ಟಾರ್’ ಶ್ರೇಯಾಂಕ ಲಭಿಸಲಿದೆ. ಇದ ಕ್ಕಾಗಿ ಪ್ರತಿದಿನ ಶೇ.30ರಷ್ಟು ತ್ಯಾಜ್ಯ ನೀರು ಶುದ್ಧೀಕರಿಸಿ, ಬಳಸಿಕೊಳ್ಳುವಲ್ಲಿ ಯಶಸ್ವಿ ಯಾಗಬೇಕಿದೆ ಎಂದರು. ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ವಲಯ ಆಯುಕ್ತ ಸತ್ಯಮೂರ್ತಿ, ಅಧೀಕ್ಷಕ ಇಂಜಿನಿಯರ್ ರಂಗಯ್ಯ, ಮುಖಂಡ ಡಾ.ವಿಶ್ವನಾಥಯ್ಯ ಇತರರಿದ್ದರು.

Translate »