ಪ್ರಸಕ್ತ ಸಾಲಿನಲ್ಲೇ ನೂತನ ರಾಷ್ಟ್ರೀಯ  ಶಿಕ್ಷಣ ನೀತಿ ಜಾರಿಗೆ ನಿರ್ಧಾರ
ಮೈಸೂರು

ಪ್ರಸಕ್ತ ಸಾಲಿನಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ

January 10, 2021
  • ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಪುನರುಚ್ಛಾರ
  • ಈಗಾಗಲೇ ಅಗತ್ಯ ಸಿದ್ಧತೆ

ಮೈಸೂರು,ಜ.9(ಎಂಟಿವೈ)- ನವ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕಾರಿ ಯಾಗಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಯನ್ನು ರಾಜ್ಯದಲ್ಲಿ ಪ್ರಸಕ್ತ(2021) ಸಾಲಿನಿಂದಲೇ ಜಾರಿಗೊಳಿ ಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮೈಸೂರು ವಿವಿ, ಮುಕ್ತ ವಿವಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ವಿಜ್ಞಾನಭವನದಲ್ಲಿ ಶನಿವಾರ ಆಯೋಜಿಸಿದ್ದ `ಕರ್ನಾಟಕ ದಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನ; ಅವಕಾಶಗಳು ಮತ್ತು ಮುಂದಿನ ದಾರಿ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತ ನಾಡಿದ ಅವರು, ನೂತನವಾಗಿ ಸಿದ್ಧ ಪಡಿಸಲಾಗಿರುವ ಎನ್‍ಇಪಿ ಜಾರಿ ಮಾಡು ವುದು ನವ ಹಾಗೂ ಬಲಿಷ್ಠ ಭಾರತ ಸೃಷ್ಟಿಗೆ ನಾಂದಿ ಹಾಡಲಿದೆ. ಎಲ್ಲ ಕ್ಷೇತ್ರ ಗಳಲ್ಲೂ ಗುಣಮಟ್ಟ ಹೆಚ್ಚಿಸಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಇದನ್ನು ಹೊಸ ನೀತಿ ಕಲ್ಪಿಸಿಕೊಡಲಿದೆ. ರಾಜ ಕೀಯ, ಆರ್ಥಿಕ, ಸಾಮಾಜಿಕ ಪರಿ ವರ್ತನೆಗೂ ಇದು ಕಾರಣವಾಗಲಿದೆ. ಸುಸ್ಥಿರ ಅಭಿವೃದ್ಧಿ, ಸ್ವಾವಲಂಬನೆ ಬದು ಕಿಗೆ ಪ್ರೇರಣೆಯಾಗಲಿದ್ದು, ಆತ್ಮನಿರ್ಭರ್ ಭಾರತ ಪರಿಕಲ್ಪನೆಗೆ ಪೂರಕವಾಗುವ ಮೂಲಕ ಬಲಿಷ್ಠ ಭಾರತ ಕಟ್ಟಲು ಈ ನೀತಿ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶೈಕ್ಷಣಿಕ ಕ್ಷೇತ್ರದ ಸಮಗ್ರ ಬದಲಾವಣೆ ಎನ್‍ಇಪಿ ಮಾಡಲಿದೆ. ವಿದ್ಯಾರ್ಥಿಗಳು ತಮಗೆ ಆಸಕ್ತಿದಾಯಕ, ಇಚ್ಛಿಸಿದ ವಿಷಯಗಳನ್ನು ಅಧ್ಯಯನ, ಸಂಶೋಧನೆ ಮಾಡಲು ಅವಕಾಶ ದೊರೆಯಲಿದೆ. ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪಠ್ಯೇತರ ಚಟುವಟಿಕೆಗೂ ಆದ್ಯತೆ ಸಿಗಲಿದೆ. ಅಲ್ಲದೆÀ ಸಾಮಾಜಿಕ ಪರಿವರ್ತನೆಗೆ ಉತ್ತೇಜನವೂ ಹೊಸ ನೀತಿ ಕಲ್ಪಿಸಲಿದೆ. ಸಂಶೋಧನಾ ಸಂಸ್ಕøತಿಯನ್ನು ಹುಟ್ಟು ಹಾಕಿ, ಪ್ರಾಥಮಿಕ ಹಂತದಿಂದಲೇ ಆಸಕ್ತಿ ದಾಯಕ ವಿಷಯದ ಕಲಿಕೆಯಿಂದ ಭವಿಷ್ಯದಲ್ಲಿ ಸಂಶೋಧನೆಗೆ ಪೆÇ್ರೀತ್ಸಾಹ ನೀಡಲಿದೆ. ಹೊಸ ಕಲಿಕೆಗೂ ಇದು ವೇದಿಕೆಯನ್ನು ಸೃಷ್ಟಿಸಲಿದೆ. ಪ್ರಸ್ತುತ ಇರುವ ಮನಸ್ಥಿತಿಯನ್ನೂ ಬದಲಾವಣೆ ಮಾಡಿ ನೈತಿಕತೆ, ಆಂತರಿಕ ಶಿಸ್ತನ್ನು ಅಳವಡಿಸಿಕೊಳ್ಳಲು ಅನುಕೂಲ ವಾಗಲಿದೆ. ಸ್ವಾಯತ್ತತೆ, ಉತ್ತಮ ಆಡಳಿತ ಮತ್ತು ಸಬಲೀಕರಣದ ಮೂಲಕ ಶಿP್ಷÀಣ ವ್ಯವಸ್ಥೆಯ ಸಮಗ್ರತೆ, ಪಾರದರ್ಶಕತೆ ಮತ್ತು ಸಂಪನ್ಮೂಲ ದP್ಷÀತೆ ಖಚಿತಪಡಿಸಿಕೊಳ್ಳಲು ಮಂತ್ರ ಅಥವಾ ಮಾರ್ಗದರ್ಶಿ ಸೂತ್ರವಾಗಲಿದೆ ಎಂದು ಅವರು ತಿಳಿಸಿದರು.

Translate »