ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಶೀಘ್ರವೇ ವಿಶ್ವವಿದ್ಯಾಲಯ
ಮಂಡ್ಯ

ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಶೀಘ್ರವೇ ವಿಶ್ವವಿದ್ಯಾಲಯ

June 13, 2020

ಮಂಡ್ಯ, ಜೂ.12(ನಾಗಯ್ಯ)- ಮಂಡ್ಯ ಸರ್ಕಾರಿ ಮಹಾ ವಿದ್ಯಾಲಯ (ಸ್ವಾಯತ್ತ) ವನ್ನು ವಿಶ್ವವಿದ್ಯಾಲಯವ ನ್ನಾಗಿ ಅಧಿಕೃತವಾಗಿ ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ಉಪ ಕುಲಪತಿ ನೇಮ ಕಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾ ಯಣ್ ಇಂದಿಲ್ಲಿ ತಿಳಿಸಿದರು.

ಅವರಿಂದು ಸರ್ಕಾರಿ ಮಹಾವಿದ್ಯಾ ಲಯಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯ ವಿಧಾನ ಪರಿಶೀಲಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, 2015ರಲ್ಲಿ ವಿವಿ ಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕೆಲವು ಸಣ್ಣಪುಟ್ಟ ಅಡೆತಡೆಗಳಿ ದ್ದುದ್ದರಿಂದ ಅದು ಕಾರ್ಯ ರೂಪಕ್ಕೆ ಬಂದಿರಲಿಲ್ಲ ಎಂದರು.

ಇದೀಗ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಅಲ್ಲದೇ ಉಪ ಕುಲಪತಿ ನೇಮ ಕಕ್ಕೆ ಇದ್ದ ಅಡೆತಡೆಗಳು ಸಹ ನಿವಾರಣೆ ಯಾಗಿದ್ದು, ವಿವಿಗೆ ಉಪ ಕುಲಪತಿಯನ್ನು ನೇಮಕ ಮಾಡಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು. ಈ ಹಿಂದೆ ವಿಶೇಷಾಧಿಕಾರಿ ಇದುದ್ದರಿಂದ ಅವರಿಗೆ ಕೆಲ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿ ರಲಿಲ್ಲ ಎಂದ ಅವರು ಈ ವಿಶ್ವ ವಿದ್ಯಾ ನಿಲಯದ ಸಮಗ್ರ ಬೆಳವಣಿಗೆಗೆ ಸರ್ಕಾರ ದಿಂದ ಎಲ್ಲಾ ರೀತಿಯ ಸಹಕಾರ ನೀಡು ವುದಾಗಿ ಅವರು ಭರವಸೆ ನೀಡಿದರು.

ಮಂಡ್ಯದ ಕಾಲೇಜಿಗೆ ವಿವಿ ಮಾನ್ಯತೆ ದೊರಕುವಲ್ಲಿ ಸರ್ಕಾರ ಅಷ್ಟೆ ಅಲ್ಲ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು, ಕಾಲೇಜಿನ ಪ್ರಾಂಶು ಪಾಲರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಸಾಕಷ್ಟು ಶ್ರಮಿಸಿದ್ದು, ಅದಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಇದೇ ಜಿಲ್ಲೆಯವರಾಗಿದ್ದು, ಜಿಲ್ಲೆಯ ಅಭಿವೃದ್ದಿ ಕಾರ್ಯಗಳಿಗೆ ಸದಾ ಸ್ಪಂದಿಸು ತ್ತಾರೆ. ಕೆ.ವಿ.ಶಂಕರಗೌಡ ಸೇರಿದಂತೆ ಹಲ ವರು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಶ್ಯೆಕ್ಷಣಿಕ ಗುಣಮಟ ಸುಧಾರಣೆಗೆ ಎಲ್ಲರೂ ಶ್ರಮಿಸ ಬೇಕು ಎಂದು ಕರೆ ನೀಡಿದರು.

ಪ್ರಸ್ತುತ ಈ ಕಾಲೇಜು ವಿವಿಯಾಗಿ ಪರಿ ವರ್ತನೆಯಾಗಿದೆ. ಇಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಧ್ಯಾಪಕರು ಕಾರ್ಯ ನಿರ್ವ ಹಿಸುವ ಮೂಲಕ ಇದನ್ನು ದೊಡ್ಡ ಜ್ಞಾನ ಕೇಂದ್ರವನ್ನಾಗಿ ರೂಪಿಸಬೇಕೆಂದು ತಿಳಿಸಿದರು.

ಕಾಲೇಜಿನಲ್ಲಿ ಎಲ್ಲಾ ವಿಭಾಗದಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿದೆ. 40-50 ವರ್ಷ ಗಳಿಂದ ಇದ್ದ ಸಿಲಬಸ್ ಅನ್ನು ಸಹ ಬದ ಲಾವಣೆ ಮಾಡಲು ಆವಕಾಶವಿದೆ. ಪ್ರಾಧ್ಯಾ ಪಕರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ ಬೇಕು. ಅಲ್ಲದೆ ಜಿಲ್ಲೆಯ ಎಲ್ಲಾ ತಾಲ್ಲೂಕು ಗಳ ಕಾಲೇಜಿನ ಗುಟಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ವೇಳೆ ಶಾಸಕ ಹಾಗೂ ಕಾಲೇಜಿನ ಅಧ್ಯಕ್ಷ ಎಂ.ಶ್ರೀನಿ ವಾಸ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಎಎಸ್‍ಪಿ ಶೋಭಾರಾಣಿ, ವಿವಿ ವಿಶೇಷಾಧಿಕಾರಿ ಪ್ರೊ.ನಿಂಗೇಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಮಹಾ ಲಿಂಗು ಸೇರಿದಂತೆ ಪ್ರಾಧ್ಯಾಪಕರು ಹಾಜರಿದ್ದರು.

Translate »