ವಕೀಲರಾದ ಸಂಸದ ತೇಜಸ್ವಿ ಸೂರ್ಯ; ಹೈಕೋರ್ಟ್‍ನಲ್ಲಿ ವಾದ ಮಂಡನೆ
ಮೈಸೂರು

ವಕೀಲರಾದ ಸಂಸದ ತೇಜಸ್ವಿ ಸೂರ್ಯ; ಹೈಕೋರ್ಟ್‍ನಲ್ಲಿ ವಾದ ಮಂಡನೆ

June 13, 2020

ಬೆಂಗಳೂರು: ಸಂಸದರಾದ ನಂತರ ಇದೇ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದರು. ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‍ನ ಸುಮಾರು 45,000 ಠೇವಣಿದಾರರ ಪರವಾಗಿ ಶುಕ್ರವಾರ ತೇಜಸ್ವಿ ಸೂರ್ಯ ವಾದ ಮಂಡಿಸಿದರು.

ಅವರು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ಅರ್ಜಿದಾರ ಡಾ.ಎನ್.ಆರ್.ರವಿ ಪರವಾಗಿ ನ್ಯಾಯಾ ಲಯಕ್ಕೆ ಹಾಜರಾಗಿದ್ದರು.

ಬ್ಯಾಂಕ್‍ನ ನಿರ್ದೇಶಕರು ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Translate »