Tag: Chamundeshwari Constituency

ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಗೊಂಡಿತು  ಮೈಸೂರು `7 ಸ್ಟಾರ್’ ಪಟ್ಟಕ್ಕೇರುವ ಪ್ರಕ್ರಿಯೆ!
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಗೊಂಡಿತು ಮೈಸೂರು `7 ಸ್ಟಾರ್’ ಪಟ್ಟಕ್ಕೇರುವ ಪ್ರಕ್ರಿಯೆ!

January 10, 2021

ಮೈಸೂರು, ಜ.9(ಪಿಎಂ)- ಶುದ್ಧೀಕರಿ ಸಿದ ತ್ಯಾಜ್ಯ ನೀರು ಬಳಕೆ ಮೂಲಕ 2021ರ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ `ಮೈಸೂರು ನಗರ’ `7 ಸ್ಟಾರ್’ ಪಟ್ಟ ಪಡೆಯಲು ಚಾಮುಂ ಡೇಶ್ವರಿ ಕ್ಷೇತ್ರದ ಮೈಸೂರಿನ ನಿವೇದಿತಾ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾ ನವನದಿಂದ ಮಹಾ ನಗರಪಾಲಿಕೆ ಕಾರ್ಯಚಟುವಟಿಕೆ ಆರಂಭಿಸಿದೆ. ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನವನದಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರಿನಿಂದ ಕಾರ್ಯ ನಿರ್ವಹಿಸುವ ಕಾರಂ ಜಿಗೆ ಶನಿವಾರ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ಎಲ್ಲಾ ಕಾರಂಜಿಗಳಿಗೂ ಇದನ್ನು ವಿಸ್ತರಿ ಸಲು ಪಾಲಿಕೆ…

ಮಾಜಿ ಶಾಸಕ ಎಂ.ಸತ್ಯನಾರಾಯಣ್ ವಿಧಿವಶ
ಮೈಸೂರು

ಮಾಜಿ ಶಾಸಕ ಎಂ.ಸತ್ಯನಾರಾಯಣ್ ವಿಧಿವಶ

June 7, 2019

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಸತ್ಯನಾರಾಯಣ ಅವರು ಗುರುವಾರ ರಾತ್ರಿ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಕೆಲ ದಿನಗಳ ಹಿಂದೆ ಮೈಸೂ ರಿನ ಇಲವಾಲ ಸಮೀಪದ ನಂಜಮ್ಮ ಜವರೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೈಸೂರು ತಾಲೂಕು ಗುಂಗ್ರಾಲ್ ಛತ್ರ ಗ್ರಾಮದವರಾದ ಎಂ.ಸತ್ಯನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಇವರಿಬ್ಬರೂ ಒಂದೇ ಸಮಯದಲ್ಲಿ ತಾಲೂಕು ಬೋರ್ಡ್…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ

April 19, 2019

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಪ್ರತಿಷ್ಠೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ.71.75ರಷ್ಟು ಮತದಾನ ದಾಖಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಕಂಡಿದ್ದರು. ಜಿ.ಟಿ.ದೇವೇಗೌಡ ವಿಜಯ ಸಾಧಿ ಸಿದ್ದರು. ಅಂದಿನಿಂದಲೂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡರ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿರುವ…

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು
ಮೈಸೂರು

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು

April 19, 2019

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‍ನಲ್ಲಿ ಅವಳಿ-ಜವಳಿ ಸಹೋದರಿಯರಾದ ನಿಸರ್ಗ ಮತ್ತು ವಿಸ್ಮಯ ಇದೇ ಮೊದಲ ಬಾರಿಗೆ ಮತದಾನ ಮಾಡಿದರು. ಗ್ರಾಮದ ವಿಜಯಾ ಸ್ಕೂಲ್‍ನಲ್ಲಿ ಮತದಾನ ಮಾಡಿದ ಅವರು ಕೈ ಬೆರ ಳಿಗೆ ಶಾಯಿ ಹಾಕಿಸಿಕೊಂಡು ಮೊದಲ ಬಾರಿ ಮತದಾನ ಮಾಡಿದ ಖುಷಿ ಅವರಲ್ಲಿತ್ತು. ಈ ಇಬ್ಬರೂ ಅವಳಿ ಸಹೋದರಿಯರು ಹಿನಕಲ್‍ನ ಹೋಟೆಲ್ ವ್ಯಾಪಾರಿ ಕುಶಾಲಪ್ಪ-ದಾಕ್ಷಾಯಿಣಿ ದಂಪತಿ ಪುತ್ರಿಯರು. ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪಿಜಿ ಸೆಂಟರ್‍ನ ವಿದ್ಯಾರ್ಥಿನಿಯರು.

ಸಚಿವ ಜಿ.ಟಿ.ದೇವೇಗೌಡರಿಂದ ಮುಂದುವರೆದ ಗ್ರಾಮ ಭೇಟಿ
ಮೈಸೂರು

ಸಚಿವ ಜಿ.ಟಿ.ದೇವೇಗೌಡರಿಂದ ಮುಂದುವರೆದ ಗ್ರಾಮ ಭೇಟಿ

January 12, 2019

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, `ಮನೆ ಬಾಗಿಲಿಗೆ ಸರ್ಕಾರ’ ಕಾರ್ಯಕ್ರಮದಡಿ ಶುಕ್ರವಾರವೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಇಲವಾಲ ಮತ್ತು ಜಯಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಸಾರ್ವ ಜನಿಕ ಸಂಪರ್ಕ ಸಭೆಗಳ ನಡೆಸಿ ಜನರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು. ಇಲವಾಲ ಹೋಬಳಿಯ ಕಟ್ಟೆನಾಯಕನಹಳ್ಳಿ, ಮಾಣಿಕ್ಯಪುರ, ಕಮರಹಳ್ಳಿ, ದೊಡ್ಡಮಾರಗೌಡನಹಳ್ಳಿ, ದೊಡ್ಡಹಟ್ಟಿಹುಂಡಿ, ಮರಯ್ಯನಹುಂಡಿ, ಕಟ್ಟೆ ಹುಂಡಿ, ನುಗ್ಗಹಳ್ಳಿ, ಜಯಪುರ ಹೋಬಳಿಯ ಮಾದಹಳ್ಳಿ, ಅನಗನಹಳ್ಳಿ, ತಿಬ್ಬಯ್ಯನಹುಂಡಿ…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಟಿಡಿ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಟಿಡಿ ಚಾಲನೆ

September 30, 2018

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡರು ಶನಿವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ದರು. ಗಮಚನಹಳ್ಳಿ ಗ್ರಾಮದ ಎಸ್‍ಟಿ ಕಾಲೋನಿ ಯಲ್ಲಿ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ (32.84 ಲಕ್ಷ ರೂ.), 120 ಲಕ್ಷ ರೂ. ಅಂದಾಜು ವೆಚ್ಚದ ದಾರಿಪುರ ಗ್ರಾಮದ ಒಳಚರಂಡಿ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ಮಾಡಿದರು. ಬರಡನಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ…

ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ

July 29, 2018

ಮೈಸೂರು: ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಾಜು 2 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಚಾಲನೆ ನೀಡಿದರು. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯ ವಾರ್ಡ್ ನಂ.24, 22 ಹಾಗೂ 16ರಲ್ಲಿ ಪಾಲಿಕೆ ಉಸ್ತುವಾರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೈಗೆತ್ತಿಕೊಂಡಿರುವ ಉದ್ಯಾನವನ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಬೋಗಾದಿ 2ನೇ ಹಂತದಲ್ಲಿರುವ ವಿದ್ಯಾಗಣಪತಿ ದೇವಸ್ಥಾನದಲ್ಲಿ…

ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ
ಮೈಸೂರು

ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ

July 18, 2018

ಮೈಸೂರು:  ಅಂದಾಜು 545 ಕೋಟಿ ರೂ. ವೆಚ್ಚದ ಕೆಆರ್‌ಎಸ್‌ ಹಿನ್ನೀರಿನ ಹಳೇ ಉಂಡವಾಡಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತಿಂಗಳೊಳಗೆ ಪೂರ್ಣಗೊಳಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು…

ಅಕ್ಕಿ ತೂಗುತ್ತಿದ್ದವನನ್ನು ಸಚಿವನನ್ನಾಗಿ ಮಾಡಿದಿರಿ…
ಮೈಸೂರು

ಅಕ್ಕಿ ತೂಗುತ್ತಿದ್ದವನನ್ನು ಸಚಿವನನ್ನಾಗಿ ಮಾಡಿದಿರಿ…

July 16, 2018

ಮೈಸೂರು: ಸೊಸೈಟಿ ಯಲ್ಲಿ ಅಕ್ಕಿ ತೂಗುತ್ತಿದ್ದ ನನ್ನನ್ನು ಸಚಿವನಾಗುವ ಮಟ್ಟಕ್ಕೆ ಬೆಳೆಸಿದ್ದೀರಿ… ಚುನಾವಣೆ ಯುದ್ಧದಲ್ಲಿ ರಣ ಕಹಳೆ ಊದಿ ಭಾರೀ ಹೋರಾಟದ ಮೂಲಕ ನನ್ನನ್ನು ಗೆಲ್ಲಿಸಿದ್ದೀರಿ… ನನ್ನುಸಿರುವವರೆಗೂ ನಿಮ್ಮನ್ನು ಮರೆಯಲ್ಲ…. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆ ಯಲ್ಲಿ ಭಾವುಕರಾಗಿ ಹೇಳಿದ ಮಾತುಗಳಿವು. ಮೈಸೂರಿನ ಹೊರ ವಲಯದಲ್ಲಿರುವ ಲಿಂಗ ದೇವರು ಕೊಪ್ಪಲು ಮೈದಾನದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಘಟಕ ಆಯೋಜಿಸಿದ್ದ ಕೃತಜ್ಞತಾ ಸಮಾವೇಶವನ್ನು ಉದ್ಘಾಟಿಸಿ ಜಿ.ಟಿ.ದೇವೇಗೌಡರು ಮಾತನಾಡಿದರು. ನಿಮ್ಮ ಜಿ.ಟಿ.ದೇವೇಗೌಡರನ್ನು…

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ
ಚಾಮರಾಜನಗರ

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ

May 5, 2018

ಕೊಳ್ಳೇಗಾಲ:  ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಗೆ ವಲಸೆ ಬಂದಿದ್ದಾರೆ. ನಾನು ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದು, ಎರಡು ಕ್ಷೇತ್ರದಲ್ಲೂ ಕಾರ್ಯಕರ್ತರು ಹಾಗೂ ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಅವರು ಹನೂರು ಕ್ಷೇತ್ರ ವ್ಯಾಪ್ತಿಯ ಪಾಳ್ಯ ಹಾಗೂ ಕೌದಳ್ಳಿ ಗ್ರಾಮದಲ್ಲಿ ಅಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಮತಯಾಚಿಸಿ ಮಾತನಾಡಿ. ರಾಜ್ಯದಲ್ಲಿ 80 ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ…

1 2
Translate »