ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು
ಮೈಸೂರು

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು

April 19, 2019

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‍ನಲ್ಲಿ ಅವಳಿ-ಜವಳಿ ಸಹೋದರಿಯರಾದ ನಿಸರ್ಗ ಮತ್ತು ವಿಸ್ಮಯ ಇದೇ ಮೊದಲ ಬಾರಿಗೆ ಮತದಾನ ಮಾಡಿದರು.

ಗ್ರಾಮದ ವಿಜಯಾ ಸ್ಕೂಲ್‍ನಲ್ಲಿ ಮತದಾನ ಮಾಡಿದ ಅವರು ಕೈ ಬೆರ ಳಿಗೆ ಶಾಯಿ ಹಾಕಿಸಿಕೊಂಡು ಮೊದಲ ಬಾರಿ ಮತದಾನ ಮಾಡಿದ ಖುಷಿ ಅವರಲ್ಲಿತ್ತು.

ಈ ಇಬ್ಬರೂ ಅವಳಿ ಸಹೋದರಿಯರು ಹಿನಕಲ್‍ನ ಹೋಟೆಲ್ ವ್ಯಾಪಾರಿ ಕುಶಾಲಪ್ಪ-ದಾಕ್ಷಾಯಿಣಿ ದಂಪತಿ ಪುತ್ರಿಯರು. ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪಿಜಿ ಸೆಂಟರ್‍ನ ವಿದ್ಯಾರ್ಥಿನಿಯರು.

Translate »