ಕೊಡಗಿನ ಸಂಸ್ಕೃತಿ ಅನಾವರಣಗೊಳಿಸಿದ ಸಂಸದ ಪ್ರತಾಪ್‍ಸಿಂಹ
ಮೈಸೂರು

ಕೊಡಗಿನ ಸಂಸ್ಕೃತಿ ಅನಾವರಣಗೊಳಿಸಿದ ಸಂಸದ ಪ್ರತಾಪ್‍ಸಿಂಹ

June 18, 2019

ನವದೆಹಲಿ: ನಾನು ಮೈಸೂರು-ಕೊಡಗು ಸಂಸದನಾಗಿದ್ದು, ವಿಶಿಷ್ಟ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಗಳನ್ನು ಹೊಂದಿರುವ ಕೊಡಗು ಸಂಸ್ಕೃತಿಯನ್ನು ಸಂಸತ್‍ನಲ್ಲಿ ಪ್ರಚುರಪಡಿಸಬೇಕಾಗಿರುವುದು ನನ್ನ ಕರ್ತವ್ಯವೆಂದು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಂದಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಾನು ಈ ಉಡುಗೆ ತೊಟ್ಟು ಬರಲು ನನ್ನ ಪತ್ನಿ ಅರ್ಪಿತಾ ಕಾರಣ ಎಂದು ಹೇಳಿದ ಅವರು, ಈ ಬಾರಿ ಸಂಸತ್ ಪ್ರವೇಶಿಸುವಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೆ ತೊಡಬೇಕು. ಅದರಲ್ಲೂ ಕೊಡವರ ಉಡುಗೆ ತೊಡಬೇಕು ಎಂದು ಪತ್ನಿ ಅರ್ಪಿತ ಹೇಳಿದ್ದರೆಂದು ಪ್ರತಾಪ್ ಸಿಂಹ ನುಡಿದರು. ನಾವು ಕನ್ನಡಿಗರು ಕನ್ನಡ ಕೇವಲ ಒಂದು ಭಾಷೆ ಮಾತ್ರವಲ್ಲ. ಅದರಲ್ಲಿ ನಮ್ಮ ಭಾವನೆ ಅಡಗಿದೆ. ಮೈಸೂರನ್ನು ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತೇವೆ. ಕೊಡಗು ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಕೊಡಗು ವೀರ ಕಲಿಗಳ ನಾಡು. ಅಲ್ಲದೇ ಹಾಕಿ ಎಂದರೆ ಕೊಡಗು. ಇಷ್ಟು ಮಾತ್ರ ಎಲ್ಲರಿಗೂ ಗೊತ್ತಿದೆ. ಆದರೆ, ಕೊಡಗು ವಿಶಿಷ್ಟವಾದ ಭಾಷೆ, ಆಚಾರ-ವಿಚಾರ ಸಂಸ್ಕೃತಿಯನ್ನು ಹೊಂದಿದೆ. ಇಂತಹ ಸಂಸ್ಕೃತಿಯನ್ನು ಸಂಸತ್ತಿನಲ್ಲಿ ಪಸರಿಸಿದ ಹೆಮ್ಮೆ ನನಗಿದೆ ಎಂದರು.

ನಾನು ಈ ಕೊಡಗಿನ ಪಾರಂಪರಿಕ ಉಡುಪಿನಲ್ಲಿ ಬಂದಾಗ ಎಲ್ಲಾರೂ ಬಂದು ಮಾತನಾಡಿಸಿದರು. ಇಂತಹ ಬೆಸ್ಟ್ ಡ್ರೆಸ್ ಯಾವುದೂ ಇಲ್ಲ ಎಂದು ಪ್ರಶಂಸಿಸಿದರು ಎಂದು ಪ್ರತಾಪ್ ಸಿಂಹ ಹರ್ಷ ವ್ಯಕ್ತಪಡಿಸಿದರು.

Translate »