`ದೇಖೋ ಅಪ್ನಾ ದೇಶ್’: ಶ್ರೀ ರಾಮಾಯಣ ಯಾತ್ರೆ
ಮೈಸೂರು

`ದೇಖೋ ಅಪ್ನಾ ದೇಶ್’: ಶ್ರೀ ರಾಮಾಯಣ ಯಾತ್ರೆ

November 8, 2021

ನವದೆಹಲಿ, ನ.೭- ಭಗವಂತ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆ ಇಲಾಖೆ “‘ದೇಖೋ ಅಪ್ನಾ ದೇಶ್’ ಕಾರ್ಯಕ್ರಮದಡಿಯಲ್ಲಿ ‘ಶ್ರೀ ರಾಮಾಯಣ ಯಾತ್ರೆ’ ಆರಂಭಿಸಿದೆ. ಶ್ರೀರಾಮಾಯಣ ಯಾತ್ರೆ ಪ್ರವಾಸ ಡಿಸೆಂಬರ್ ೧೨ರಿಂದ ಪ್ರಾರಂಭವಾಗ ಲಿದೆ. ಈ ಪ್ರಯಾಣವು ೧೭ ದಿನಗಳವರೆಗೆ ಇರು ತ್ತದೆ ಮತ್ತು ಪ್ರಯಾಣದ ಸಮಯದಲ್ಲಿ, ಪ್ರವಾ ಸಿಗರು ರಾಮಲಲ್ಲಾ ಮತ್ತು ಹನುಮಾನ್‌ಗರ್ಹಿ ಮತ್ತು ಸೀತಾ ಜನ್ಮಸ್ಥಳ ಮತ್ತು ಕಾಶಿ ವಿಶ್ವನಾಥನ ದೈವಿಕ ದರ್ಶನವನ್ನು ಸಹ ಪಡೆಯಬಹುದಾಗಿದೆ.

ಒಟ್ಟು ೧೭ ದಿನಗಳಲ್ಲಿ ಈ ಪ್ರಯಾಣ ಪೂರ್ಣ ಗೊಳ್ಳಲಿದೆ. ಪ್ರಯಾಣದ ಮೊದಲ ನಿಲ್ದಾಣ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಾಗಿದೆ. ಶ್ರೀರಾಮ ಜನ್ಮಭೂಮಿ ದೇವಾಲಯ, ಶ್ರೀ ಹನುಮಾನ್ ದೇವಾ ಲಯ ಮತ್ತು ನಂದಿ
ಗ್ರಾಮದಲ್ಲಿರುವ ಭಾರತ ಮಂದಿರಕ್ಕೆ ಭೇಟಿ ನೀಡಲಾಗುವುದು. ಈ ರೈಲು ಅಯೋಧ್ಯೆ ಯಿಂದ ಹೊರಟ ನಂತರ ಸೀತಾಮರ್ಹಿಗೆ ಹೋಗುತ್ತದೆ. ನೇಪಾಳದ ಜನಕ್‌ಪುರದಲ್ಲಿ ರುವ ಜಾನಕಿಯ ಜನ್ಮಸ್ಥಳ ಮತ್ತು ರಾಮ ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ರೈಲಿನ ಮುಂದಿನ ನಿಲ್ದಾಣವು ಶಿವನ ನಗರವಾದ ಕಾಶಿ ಆಗಿರುತ್ತದೆ. ಪ್ರವಾಸಿ ಬಸ್‌ಗಳ ಮೂಲಕ ಕಾಶಿಯ ಪ್ರಸಿದ್ಧ ದೇವಾಲಯಗಳು ಸೇರಿದಂತೆ ಸೀತೆಯನ್ನು ಹೊಂದಿರುವ ಸ್ಥಳಕ್ಕೆ ಭೇಟಿ ನೀಡಿದ ನಂತರ ಈ ರೈಲು ೧೭ನೇ ದಿನ ದೆಹಲಿ ತಲುಪಲಿದೆ. ಈ ಸಮಯದಲ್ಲಿ, ರೈಲು ಸುಮಾರು ೭೫೦೦ ಕಿ.ಮೀ. ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

ದರ ಪಟ್ಟಿ: ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತ ಸರ್ಕಾರದ ಉಪಕ್ರಮ “ದೇಖೋ ಅಪ್ನಾ ದೇಶ್”ಗೆ ಅನುಗುಣವಾಗಿ ಭಾರತೀಯ ರೈಲ್ವೆ ಇಲಾಖೆ ಈ ವಿಶೇಷ ಪ್ರವಾಸಿ ರೈಲನ್ನು ಪ್ರಾರಂಭಿಸಿದೆ, ೨ಂಅಗೆ ಪ್ರತಿ ವ್ಯಕ್ತಿಗೆ ೮೨,೯೫೦ ಮತ್ತು ೧ಂಅ ವರ್ಗಕ್ಕೆ ರೂ. ೧,೦೨,೦೯೫ ದರ ನಿಗದಿಪಡಿಸಲಾಗಿದೆ. ಈ ದರಗಳು ಂಅ ಕ್ಲಾಸ್ ರೈಲು ಪ್ರಯಾಣ, ಂಅ ಹೋಟೆಲ್‌ಗಳಲ್ಲಿ ವಸತಿ, ಊಟ (ಗಿಇಉ ಮಾತ್ರ), ಎಲ್ಲಾ ವರ್ಗಾವಣೆ ಮತ್ತು ಂಅ ವಾಹನಗಳಲ್ಲಿ ವೀಕ್ಷಣೆ, ಪ್ರಯಾಣ ವಿಮೆ ಮತ್ತು Iಖಅಖಿಅ ಟೂರ್ ಮ್ಯಾನೇಜರ್‌ಗಳ ಸೇವೆ ಇತ್ಯಾದಿಗಳನ್ನು ಒಳಗೊಂಡಿದೆ. ಎಲ್ಲಾ ಅಗತ್ಯ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು. ಪ್ರವಾಸದ ಸಮಯದಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಪ್ರಯಾಣವನ್ನು ಒದಗಿಸುವ ಮೂಲಕ ಕಾಳಜಿ ವಹಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Translate »